ಡಾ.ಬಾಬು ಜಗಜೀವನ ರಾಮ್ ಜಯಂತಿಯಾಚಣೆ

ಅಖಿಲ ವಾಣಿ ಸುದ್ದಿ :ಕಾರಟಗಿ : ಪಟ್ಟಣದ ಡಾ.ಬಾಬ ಸಾಹೇಬ ಅಂಬೇಡ್ಕರ್ ಕಛೇರಿಯಲ್ಲಿ ಡಾ.ಬಾಬು ಜಗಜೀವನ ರಾಮ್ ಅವರ 144ನೇ ಜಯಂತಿಯನ್ನು ಆಚರಿಸಲಾಯಿತು.ಕರ್ನಾಟಕ ದಲಿತ ಸಂಘರ್ಷ ಸಮಿತಿ ಡಾ.ಎನ್.ಮೂರ್ತಿ ಸ್ಥಾಪಿತ ಕಾರಟಗಿ ತಾಲೂಕ ಸಮಿತಿಯಿಂದ ಸೋಮವಾರದಂದು ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಜಯಂತಿಯನ್ನು ಸಂಭ್ರಮದಿಂದ ಆಚರಣೆಯನ್ನು ಮಾಡಲಾಯಿತು.ಇದೇ ಸಂದರ್ಭದಲ್ಲಿ ತಾಲೂಕ ಸಮಿತಿ ಅಧ್ಯಕ್ಷ ಯಲ್ಲಪ್ಪ ಕಟ್ಟಿಮನಿ, ಗೌರವಾಧ್ಯಕ್ಷ ಎಂ ಆನಂದ, ಉಪಾಧ್ಯಕ್ಷ ಯಂಕೋಬ ಮೈಲಾಪುರ, ಕಾನೂನು ಸಲಹೆಗಾರ ವೀರೇಶ ವಕೀಲರು, ರಮೇಶ ಉಮಳಿ ಕಾಟಾಪುರ, ಮೌನೇಶ್  ಟೆಂಗುಂಟಿ, ಜಮದಗ್ನಿ ಚೌಡ್ಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!