ತಾಲೂಕ ನೂತನ ಜೆಡಿಎಸ್ ಪಕ್ಷದ ಕಚೇರಿ ಉದ್ಘಾಟನೆ

ಕಾರಟಗಿ : ಕರ್ನಾಟಕ ಪ್ರದೇಶ ಜಾತ್ಯತೀತ ಜನತಾದಳ ಕಾರಟಗಿ ತಾಲೂಕ ಘಟಕದ ನೂತನ ಕಾರ್ಯಾಲಯ ಪ್ರಾರಂಭ ಕಾರ್ಯಕ್ರಮ ಮತ್ತು ಬಸವ ಜಯಂತಿ ಹಾಗೂ ರಂಜಾನ್ ಹಬ್ಬದ ಆಚರಣೆ ಸಂಭ್ರಮದಿಂದ ಆಚರಿಸಲಾಗಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಹಣ್ಣು ಮತ್ತು ಮಾಸ್ಕ್ ವಿತರಣೆ, ನೀರಿನ ಬಾಟಲಿ ವಿತರಣೆ, ರೈತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಆನಂದ ಬಾಬು ಗುಂಡೂರ್ ಮಾತನಾಡಿ ನಮ್ಮ ಕಾರಟಗಿ ನಗರದಲ್ಲಿ ತಾಲೂಕು ಘಟಕದ ಕಾರ್ಯಾಲಯ ಪ್ರಾರಂಭವಾಗಿದ್ದು, ಕಾರ್ಯಕರ್ತರು ಬೃಹತ್ ಮಟ್ಟದಲ್ಲಿ ಮುಂದಿನ ದಿನಗಳಲ್ಲಿ ಸೇರ್ಪಡೆಯಾಗಿ ಪಕ್ಷವನ್ನು ಬಲಗೊಳಿಸಬೇಕೆಂದು ಮನವಿ ಮಾಡಿದರು.
ತಾಲೂಕ ಘಟಕದ ಉಪಾಧ್ಯಕ್ಷರು ಮಾತನಾಡಿ
ವಿ.ವೆಂಕಟೇಶ್ವರ ರಾವ್ ಮಾತನಾಡಿ ಇವತ್ತಿನ ಬಸವ ಜಯಂತಿ ಮತ್ತು ರಂಜಾನ್ ಹಬ್ಬದ ವಿಷಯವಾಗಿ ಎಲ್ಲರೂ ಶಾಂತಿ ರೀತಿಯಿಂದ ಪಕ್ಷವನ್ನು ಬಲಗೊಳಿಸಬೇಕು ಹಾಗೂ ಬಸವಣ್ಣನವರ ತತ್ವಗಳಾದ ಕಾಯಕವೇ ಕೈಲಾಸ ತತ್ವವನ್ನು ಪ್ರತಿಯೊಬ್ಬರೂ ಪಾಲಿಸಬೇಕು ಯಾವುದೇ ಕಾರಣಕ್ಕೂ ಪಕ್ಷ ಬಲಪಡಿಸುವಲ್ಲಿ ಮುನ್ನುಗ್ಗಬೇಕು. ಪ್ರತಿಯೊಂದು ವಿಷಯದಲ್ಲಿ ಕಾನೂನು ಬದ್ಧಕಾರ್ಯಕ್ರಮಗಳನ್ನು ಮಾತ್ರ ನಡೆಸಿಕೊಂಡುಪಕ್ಷವನ್ನು ಬೆಳೆಸಬೇಕು ಎಂದರು. ಅಲ್ಪಸಂಖ್ಯಾತರ ಅಧ್ಯಕ್ಷರು ಮೊಹಮ್ಮದ್ ಹನೀಫ್ ಮಾತನಾಡಿ ಕೆಲವು ಕೋವಿಡ್ ಕಾರಣಾಂತರಗಳಿಂದ ನಮ್ಮ ಜಿಲ್ಲಾಧ್ಯಕ್ಷರಾದ ಅಮರೇಗೌಡ ಪಾಟೀಲರು ಆಗಮಿಸಲಿದ್ದಾರೆ, ನಮ್ಮನ್ನು ಬೆಂಬಲಿಸಿದ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಉಪಾಧ್ಯಕ್ಷರು ನನ್ನ ಅಭಿನಂದನೆಗಳನ್ನು ತಿಳಿಸುತ್ತಾ ರಂಜಾನ್ ಹಾಗೂ ಬಸವಣ್ಣ ಜಯಂತಿಯನ್ನು ನಮ್ಮ ಕಾರಟಗಿ ತಾಲೂಕಿನ ಸಮಸ್ತ ನಾಗರಿಕರು ಕೋವಿಡ್ ನಿಯಮಾನುಸಾರ ಮಾಸ್ಕ್ ಅನ್ನು ಧರಿಸಿ ಆಚರಿಸಬೇಕು ಎಂದರು. ಮಹಿಳಾ ಘಟಕದ ಅಧ್ಯಕ್ಷರು ಅಕ್ಕಮಹಾದೇವಿ ಮಾತನಾಡಿ ನಮ್ಮ ಕಾರ್ಯಾಲಯದಲ್ಲಿ ಬಸವಣ್ಣ ಜಯಂತಿಯನ್ನು ರಂಜಾನ್ ಹಬ್ಬವನ್ನು ಮಾಸ್ಕನ್ನು ಧರಿಸಿ ಸಂಕ್ಷಿಪ್ತವಾಗಿ ಆಚರಿಸಲಾಗಿದೆ. ಪ್ರತಿಯೊಬ್ಬ ಮಹಿಳೆಯರು ಹಾಗೂ ಘಟಕದ ಕಾರ್ಯಕರ್ತರು ಬಸವಣ್ಣ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು. ಮಹಿಳಾ ಉಪಾಧ್ಯಕ್ಷರಾದ ನೀಲಮ್ಮ ಬಸವೇಶ್ವರನಗರ ಮಾತನಾಡಿ ನಮ್ಮ ಜೆಡಿಎಸ್ ಪಕ್ಷವನ್ನು ಮಹಿಳಾ ಘಟಕದಿಂದ ಎಲ್ಲ ಮಹಿಳೆಯರು ಸೇರಿ ಬಲಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ಒಬ್ಬ ಸ್ವಾಮಿ ಕಾರಟಗಿ, ಜಿಲ್ಲಾ ಕಾರ್ಯದರ್ಶಿಗಳಾದ ಕೃಷ್ಣಪ್ಪ ಶೇಷ್ಟಿ ಕಾರಟಗಿ, ಕಾರಟಗಿ ಘಟಕ ಅಧ್ಯಕ್ಷರಾದ ಆನಂದ ಬಾಬು ಗುಂಡೂರು. ಉಪಾಧ್ಯಕ್ಷರಾದ
ವಿ.ವೆಂಕಟೇಶ್ವರ ರಾವ್ ಜೆಪಿ,ನಗರ ಕಾರಟಗಿ, ಕಾರ್ಯದರ್ಶಿಗಳಾದ ಮಲ್ಲೇಶಪ್ಪ ಈಚನಾಳ್ ಅಲ್ಪಸಂಖ್ಯಾತರ ಅಧ್ಯಕ್ಷರಾದ ಮಹಮ್ಮದ್ ಹನೀಫ್, ಯುವ ಘಟಕ ಅಧ್ಯಕ್ಷರಾದ ಬಸವರಾಜ್ ನಾಯಕ ದೇವಿ ಕ್ಯಾಂಪ್, ಹಿಂದುಳಿದ ವರ್ಗ ಅಧ್ಯಕ್ಷರಾದ ಕಾಲೇಸ್ ಬಡಿಗೇರ್ ಮತ್ತೆ ಶಿವಪ್ಪ ಜೆಡಿಎಸ್ ರೈತ ಮುಖಂಡರಾದ ಶಿವಣ್ಣ ಪನ್ನಪೂರ್ ನಗರ ಘಟಕದ ಉಪಾಧ್ಯಕ್ಷರಾದ ಹನುಮನಗೌಡ ಪೊಲೀಸ್ ಪಾಟೀಲ್ ಕಾರಟಗಿ, ರೈತ ಮುಖಂಡರಾದ ಶರಣಪ್ಪ ಹಣವಾಳ, ರೈತ ಮುಖಂಡರಾದ ಖಾಜಾ ಸಾಬ್ ಮುಲ್ಲಾ ಮತ್ತೊಬ್ಬ ರೈತ ಮುಖಂಡರಾದ ಶರಣಗೌಡ ಯರಡೊಣ, ರೈತ ಮುಖಂಡರಾದ ಮರಿಯಪ್ಪ ಸಾಲೋಣಿ ಸೇರಿದಂತೆ ಇನ್ನಿತರ ಮಹಿಳಾ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.ತಾಲೂಕ ನೂತನ ಜೆಡಿಎಸ್ ಪಕ್ಷದ ಕಚೇರಿ ಉದ್ಘಾಟನೆ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!