ತುಂಗಭದ್ರಾ ಜಲಾಶಯ ಕಾಲುವೆಗಳಿಗೆ ನೀರು ಬಿಡುಗಡೆ

ಕೊಪ್ಪಳ :ರಾಯಚೂರು, ಕೊಪ್ಪಳ , ಮತ್ತು ಬಳ್ಳಾರಿ ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಿಂದ ಎಡದಂಡೆ, ಬಲದಂಡೆ ಕಾಲುವೆಗಳಿಗೆ ಹಾಗೂ ವಿಜಯನಗರ ಕಾಲುವೆಗಳಿಗೆ ಜಲಾಶಯಕ್ಕೆ ಪೂಜೆ ಸಲ್ಲಿಸುವ ಮೂಲಕ ಸಂಸದ ಸಂಗಣ್ಣ ಕರಡಿ ಅವರು ಪುತ್ರ, ಕೆಡಿಪಿ ಸದಸ್ಯ ಅಮರೇಶ ಕರಡಿ ಅವರು ನೀರು ಬಿಡುಗಡೆಗೆ ಮಾಡಿದರು.
ಭಾನುವಾರ ಮುನಿರಾಬಾದ್ ನ ತುಂಗಭದ್ರಾ ಜಲಾಶಯಕ್ಕೆ ಜನಪ್ರತಿನಿಧಿಗಳು, ರೈತರು, ಗಣ್ಯರೊಂದಿಗೆ ಪೂಜೆ ಸಲ್ಲಿಸಿದ ಅವರು, ತುಂಗಭದ್ರಾ ಜಲಾಶಯ ೧೧೫ನೇ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಜು. ೧೮ ರಿಂದ ವಿವಿಧ ಕಾಲುವೆಗಳಿಗೆ ನ.೩೦ ರವರೆಗೆ ನೀರು ಜಲಾಶಯದಿಂದ ನೀರು ಹರಿಸುವದಕ್ಕೆ ಅಧಿಕೃತವಾಗಿ ಚಾಲನೆಯನ್ನು ನೀಡಿ ಮಾತನಾಡಿದರು.
ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಬಂದ ಮೇಲೆ ಜಲಾಶಯದಿಂದ ಎರಡನೇ ವರ್ಷದಲ್ಲಿ ಎರಡು ಬೆಳೆಗಳಿಗೆ ನೀರು ಹರಿಸಲಾಗುತ್ತಿದೆ, ತುಂಗಭದ್ರಾ ಜಲಾಶಯವು ತ್ರೀವಳಿ ಜಿಲ್ಲೆಗಳ ರೈತರ ಜೀವನಾಡಿಯಾಗಿದೆ, ಬಿಜೆಪಿ ಸರ್ಕಾರ ರೈತರ ಪರವಾಗಿರುವದರಿಂದ ಪ್ರಸಕ್ತ ಮುಂಗಾರು ಹಂಗಾಮಿನ ಬೆಳೆಗೆ ನೀರು ಹರಿಸುವ ದೃಢನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ರೈತರ ಹಿತದೃಷ್ಠಿಯಿಂದ ಸರ್ಕಾರ ಕಾಲುವೆಗಳಿಗೆ ನೀರು ಹರಿಸುತ್ತಿದ್ದು, ಜಲಾಶಯದ ವಿವಿಧ ಕಾಲುವೆಗಳಿಂದ ಹರಿವು ನೀರಿನ ಸದುಪಯೋಗವಾಗಬೇಕು, ನಮ್ಮ ಪ್ರದೇಶ ಸಂಪೂರ್ಣವಾಗಿ ನೀರಾವರಿ ಪ್ರದೇಶವಾಗಬೇಕು ಅದಕ್ಕೆ ಅನುಷ್ಠಾನದಲ್ಲಿರುವ ವಿವಿಧ ನೀರಾವರಿ ಯೋಜನೆಗಳಿಗೆ ಸರ್ಕಾರ ಚಾಲನೆಯನ್ನು ನೀಡಿದೆ ಎಂದರು.

ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ, ಕನಕಗಿರಿ ಶಾಸಕ ಬಸವರಾಜ ದಡೇಸೂಗರ್, ಕಾಡಾ ಅಧ್ಯಕ್ಷ ತಿಪ್ಪೆರುದ್ರಯ್ಯಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಾಂತೇಶ ಪಾಟೀಲ ಮೈನಳ್ಳಿ, ಪ್ರಮುಖರಾದ ಪಾಲಕ್ಷಪ್ಪ ಗುಂಗಾಡಿ, ಬಸವಾರಜ ಭೋವಿ, ಪ್ರದೀಪ ಹಿಟ್ನಾಳ,
ದೇವರ ಕೃಪೆಯಿಂದ ಮಳೆಯು ಚೆನ್ನಾಗಿ ಬರುತ್ತಿದ್ದು, ಜಲಾಶಯದ ಅಚ್ಚುಕಟ್ಟು ಪ್ರದೇಶದ ಎಲ್ಲ ರೈತರಿಗೂ ಅದರಲ್ಲಿಯೂ ಕೆಳಭಾಗದ ರೈತರಿಗೆ ನೀರು ತಲುಪಬೇಕು, ಐಸಿಸಿಐ ಸಭೆಯ ತೀರ್ಮಾನದಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಅಗತ್ಯ ಕ್ರಮಗಳನ್ನು ತೆಗೆದುಕೊಂಡು ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದು ಮುಖ್ಯವಾಗಿರುತ್ತದೆ : ಅಮರೇಶ ಕರಡಿ, ಕೆಡಿಪಿ ಸದಸ್ಯರು, ಕೊಪ್ಪಳ
ನೀರಾವರಿ ಸಲಹಾ ಸಮಿತಿಯ ತೀರ್ಮಾನದಂತೆ ಎಡದಂಡೆ ಮುಖ್ಯ ಕಾಲುವೆಗೆ ಜು. ೧೮ ರಿಂದ ೪೧೦೦ ಕ್ಯೂಸೆಕ್, ಬಲದಂಡೆ ಮೇಲ್ಮಟ್ಟದ ಕಾಲುವೆಗೆ ೧೧೩೦ ಕ್ಯೂ., ಬಲದಂಡೆ ಕೆಳಮಟ್ಟದ ಕಾಲುವೆಗೆ ೭೦೦ ಕ್ಯೂ. ನಂತೆ ನವೆಂಬರ್ ೩೦ ರವರೆಗೆ, ರಾಯ ಬಸವ ಕಾಲುವೆಗೆ ಜೂನ್ ೧ರಿಂದ ಡಿಸೆಂಬರ್ ೧೦ ರವರೆಗೆ ೨೩೫ ಕ್ಯೂ., ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಜು. ೧೮ ರಿಂದ ೨೫ ಕ್ಯೂ.ನಂತೆ ನವೆಂಬರ್ ೩೦ ರವರೆಗೆ ನೀರು ಹರಿಸಲಾಗುತ್ತದೆ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!