ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಯುವಕನ ಸಾವು

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಚಿಕ್ಕಜಂತಕಲ್ ಗ್ರಾಮದ ಸಮೀಪದ ತುಂಗಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಯುವಕನೊಬ್ಬ ಮರಳು ಗುಂಡಿಯಲ್ಲಿ ಸಿಲುಕಿ ಮೃತಪಟ್ಟ ಘಟನೆ ಭಾನುವಾರ ನಡೆದಿರುತ್ತದೆ ನಂತರ ಸೋಮವಾರದಂದು ದೇಹ ಪತ್ತೆಯಾಗಿದೆ.
ಗ್ರಾಮದ ನದಿಯ ಸೇತುವೆಯ ಕೆಳಗಿನಿಂದ ಈಜಲು ತೆರಳಿದ್ದಾಗ ಈ ದುರ್ಘಟನೆ ನಡೆದಿದೆ ಎಂದು ತಿಳಿದೆ. ಮೃತ ಯುವಕನನ್ನು ಗಂಗಾವತಿ ನಗರದ ೭ನೇ ವಾರ್ಡಿನ ಮೆಹಿಬೂಬ್ ನಗರದ ನಿವಾಸಿ ರಾಜಾಸಾಬ್ (೨೫) ಎಂದು ಗುರುತಿಸಲಾಗಿದೆ.
ಇಬ್ಬರು ಸ್ನೇಹಿತರು ಜೊತೆಗೆ ಈಜಲು ಹೋಗಿದ್ದರು. ಇನ್ನೊಬ್ಬ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದು, ಪ್ರಯಾಸದಿಂದ ಈಜಿ ದಡ ಸೇರಿದ್ದಾರೆ. ಮಗನನ್ನು ಕಳೆದುಕೊಂಡ ತಾಯಿ ಮತ್ತು ಅವರ ಸಹೋದರಿಯರ ಆಂಕ್ರದನ ಮುಗಿಲು ಮುಟ್ಟಿದೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!