ದಮನಿತ ಮಹಿಳೆಯರಿಗೆ ಆಹಾರ ಕಿಟ್ ವಿತರಣೆ

ಕೊಪ್ಪಳ : ಜುಲೈ ೨೧ ನಗರದ ಕೇತೇಶ್ವರ ಕಲ್ಯಾಣ ಮಂಟಪದಲ್ಲಿ ಸ್ನೇಹ ಸಂಸ್ಥೆಯು ೫೦೦ ದಮನಿತ ಮಹಿಳೆಯರಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ನೇರವೆರಿಸಲಾಯಿತು . ಕೋವಿಡ -೧೯ ಎರಡನೇ ಅಲೆಯಲ್ಲಿ ನೊಂದ ಕೊಪ್ಪಳ ಜಿಲ್ಲೆ ಮತ್ತು ಯಲಬುರ್ಗಾ ತಾಲೂಕಿನ ಆಯ್ದ ಹಳ್ಳಿಗಳ ದಮನಿತ ಮಹಿಳೆಯರ ಕುಟುಂಬಕ್ಕೆ ೫೦೦ ಆಹಾರ ಕಿಟ್ ವಿತರಣೆ ಮಾಡಲಾಯಿತು . ಸ್ನೇಹ ಸಂಸ್ಥೆಯೊಂದಿಗೆ ಪ್ರಜಾವಾಣಿ ಡೆಕ್ಕನ್ ಹೆರಾಲ್ಡ್ ಸಂಸ್ಥೆಯು ದಮನಿತ ಮಹಿಳೆಯರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ ಮಾಡಿತು . ಸಂದರ್ಬದಲ್ಲಿ ಸಂಸ್ಥೆಯ ನಿರ್ದೇಶಕರಾದ ಟಿ . ರಾಮಾಂಜನೇಯ ಮಾತನಾಡಿ ಸಂಸ್ಥೆಯು ಕಳೆದ ೨೫ ವರ್ಷಗಳಿಂದ ದಮನಿತ ಕುಟುಂಬಗಳೊಂದಿಗೆ ಕೆಲಸ ಮಾಡುತ್ತಾ ಬಂದಿದೆ . ಕೋವಿಡ್ -೧೯ ಎರಡನೇ ಅಲೆಯಲ್ಲಿ ನೊಂದ ಕುಟುಂಬಗಳಿಗೆ ಪ್ರಜಾವಾಣಿ & ಡೆಕ್ಕನ್ ಹೆರಾಲ್ಡ್ ಸಂಸ್ಥೆಯೊಂದಿಗೆ ಕಿಟ್ ವಿತರಣೆ ಮಾಡುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು . ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಸರೋಜಾ , ಬಾಕಳೆ ಮಾತನಾಡಿ ಕೋವಿಡ್ -೧೯ ಸಂದರ್ಬದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದೀರಿ ಎಂದು ಈ ಕಿಟ್‌ಗಳನ್ನು ವಿತರಣೆ ಮಾಡುತ್ತಿದ್ದಾರೆ . ಸೌಲಭ್ಯ ಪಡೆದುಕೊಂಡ ಯಾರು ಅನಿಷ್ಟ ಪದ್ಧತಿಗೆ ಒಳಗಾಗದಂತೆ ಕುಟುಂಬ ರದಲ್ಲಿ ಸೇರಿಸಿಕೊಳ್ಳಿ ಎಂದು ತಿಳಿಸಿದರು . ಪೋಲಿಸ್ ಇಲಾಖೆಯ ಡಿ.ಎಸ್.ಪಿ ಗೀತಾ ಮೇಡಂ ಮಾತನಾಡಿ ಈ ರೀತಿಯ ಕುಟುಂಬಗಳನ್ನು ತುಂಬಾ ಸಂತಸವಾಗುತ್ತಿದೆ.
ಮಕ್ಕಳ ಕಲ್ಯಾಣ ಸಮಿತಿ ಸದಸ್ಯರಾದ ಸರೋಜಾ ಬಾಕಳೆ ಮಾತನಾಡಿ ಕೋವಿಡ್ -೧೯ ಸಂದರ್ಬದಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದೀರಿ ಎಂದು ಈ ಕಿಟ್‌ಗಳನ್ನು ವಿತರಣೆ ಮಾಡುತ್ತಿದ್ದಾರೆ . ಸೌಲಭ್ಯ ಪಡೆದುಕೊಂಡ ಯಾರು ಅನಿಷ್ಟ ಪದ್ಧತಿಗೆ ಒಳಗಾಗದಂತೆ ಕುಟುಂಬದಲ್ಲಿ ಸೇರಿಸಿಕೊಳ್ಳಿ ಎಂದು ತಿಳಿಸಿದರು . ಪೋಲಿಸ್ ಇಲಾಖೆಯ ಡಿ.ಎಸ್.ಪಿ ಗೀತಾ ಮೇಡಂ ಮಾತನಾಡಿ ಈ ರೀತಿಯ ಕುಟುಂಬಗಳನ್ನು ಗುರುತಿಸಿ ಆಹಾರ ಕಿಟ್ಸ್.ನೀಡುತ್ತಿರುವುದಕ್ಕೆ ನನಗೆ ತುಂಬಾ..ಸಂತಸವಾಗುತ್ತಿದೆ . ಯಾವುದೇ ಕುಟುಂಬದಲ್ಲಿ ಮಹಿಳೆಯರಿಗೆ & ಕಿಶೋರಿಯರಿಗೆ ತೊಂದರೆಗೀಡಾಗಿದ್ದರೆ ತಕ್ಷಣವೇ ಕರೆ ಮಾಡಿ ತಿಳಿಸಲು ಸೂಚಿಸಿದರು . ಇದೇ ಸಂದರ್ಬದಲ್ಲಿ ಪತ್ರಕರ್ತರಾದ ಸಿದ್ದನಗೌಡ ಪಾಟೀಲ ಮಾತನಾಡಿ ಈ ಸಂಸ್ಥೆಯ ಕಾರ್ಯ ನಿಷ್ಠೆಯ ಕೆಲಸ ದಾಖಲಾತಿ ಮಾಹಿತಿ ತರಬೇತಿ , ಜಾಗೃತಿ ಕುಟುಂಬಗಳಿಗೆ ಒದಗಿಸುವ ಸೌಲಭ್ಯಗಳನ್ನು ನೀಡುವುದನ್ನು ಗುರುತಿಸಿ ಕಿಟ್‌ಗಳನ್ನು ನೀಡಿದ್ದೇನೆ ಎಂದರು . ಈ ಸಂದರ್ಬದಲ್ಲಿ ಸ್ನೇಹ ಸಂಸ್ಥೆಯು ಸಹ ನಿರ್ದೇಶಕಿ ಕೆ.ಪಿ ಜಯಾ , ಶೋಭಾ ಮಠದ , ಕೆ.ಗಾಯತ್ರಿ ಜಿ.ಕೆ ಮಹಾಲಕ್ಷ್ಮೀ , ಶರಣಮ್ಮ ಮುಂತಾದವರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!