ದಯಾಸಾಗರ ಸಾಹಿತ್ಯ ಲೋಕದ ಧೃವತಾರೆ:ಗಂಗನಪಳ್ಳಿ

ಹುಮನಾಬಾದ: ಕನ್ನಡದ ಕವಿಗಳಲ್ಲಿ ವಿಜಯಪುರದ ಕನಸು ಕನ್ನಡದ ಮನಸ್ಸು ಇವುಗಳ ರಸಪಾಕ ಬಸವರಾಜ ದಯಾಸಾಗರ ,ಮುಂದುದಿದೆ ತಿಳಿದಷ್ಟು ಹೊಳೆದಷ್ಟು ಸಾಹಿತ್ಯ ಲೋಕದ ಧೃವತಾರೆ ಎಂದು ಹಿರಿಯ ಸಾನೇಟ್ ಬೀದರ ಕವಿ ಎಂ.ಜಿ.ಗಂಗನಪಳ್ಳಿ ನುಡಿದರು.ಪಟ್ಟಣದ ಜೇಲರ್ಸ ಕ್ವಾಟಸ್೯ದಲ್ಲಿ ಧರಿನಾಡು ಕನ್ನಡ ಸಂಘ ಮತ್ತು ಕರ್ನಾಟಕ ಜಾನಪದ ಪರಿಷತ್ತು ಏರ್ಪಡಿಸಿದ ಧರಿನಾಡು ಸಾಹಿತಿ- ಕವಿ- ಕಲಾವುದರ ಜೀವನ ಸಾಧನೆ ಅವಲೋಕನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಕವಿ ದಯಾಸಾಗರವರು ವಿಶಿಷ್ಠ ವ್ಯಕ್ತಿತ್ವದ  ಮಾದರಿ ಸಾಹಿತಿಯಾಗಿದಾರೆ. ಕವಿ ದಯಾಸಾಗರ ಅವರ ಜೀವನ  ಬರಹ ಕುರಿತು ಉಪನ್ಯಾಸ ನೀಡಿದ ಸಾಹಿತಿ ಡಾ‌.ಗವಿಸಿದ್ಧಪ್ಪ ಪಾಟೀಲ ಅವರು ದಯಾಸಾಗರ ರಸಿಕ ಕವಿ, ಅವರ ಪ್ರತಿಯೊಂದು ಕಾವ್ಯ ಪ್ರೀತಿ,ಪ್ರೇಮ,ವಿರಹ,ಲವಲವಿಕೆ,ಜೀವನೋತ್ಸಾಹದಿಂದ ಕೂಡಿದೆ.ಸಾಹಿತ್ಯದ ಜೊತೆ ಸಂಗೀತ ವಿಬೇಕೆಂದರೆ ಸಂಗೀತಳನ್ನೇ ಮದುವೆಯಾದ ಬದುಕು ಬರಹ ಒಂದಾಗಿಸಿಕೊಂಡವರು.ಅವರ ಕಾವ್ಯದಲ್ಲಿ ದಲಿತ ಪ್ರಜ್ಞೆ,ವೈಚಾರಿಕ ಚಿಂತನೆಗಳು, ಮಹಿಳಾ ಪರ ವಿಚಾರಗಳಿವೆ.ಕವನ,ಚುಟುಕು,ಗಜಲ್,ಹಾಯಿಕು,ವಚನ,ರುಬಾಯಿಗಳನ್ನು ರಚಿಸಿದ್ದಾರೆ. ಈಗ  ಇವರ ಸಾಹಿತ್ಯ ಕೃಷಿ ಹೊರ ಬರುತ್ತಿರುವುದು ಸಂತಸವಾಗಿದೆ ಎಂದರು. ಅಧ್ಯಕ್ಷತೆಯನ್ನು ಹಿರಿಯ ಪತ್ರಿಕಾ ವಿತರಕ ಕೆ.ಪ್ರಭಾಕರ ವಹಿಸಿ ನಮ್ಮ ನಡುವೆ ದಯಾಸಾಗರ ರಂತಹ ಅನೇಕ ಪ್ರತಿಭೆಗಳಿವೆ  ಅವನ್ನು ಗುರುತಿಸಬೇಕೆಂದು ತಿಳಿಸಿದರು.ಕವಿ ದಯಾಸಾಗರ ಅವರು ಮಾತನಾಡಿ ನಾನು ಇನ್ನೂ ಸಣ್ಣವ,ಸಾಹಿತ್ಯ ಲೋಕಕ್ಕೆ ವರದಿ ಮಾಡುತ್ತ ಬಂದವನು,ನನಗೆ ಆದ ಘಟನೆಗಳೆ ನನ್ನ ಕಾವ್ಯಗಳಾಗಿವೆ.ನನ್ನ ಬರಹಕ್ಕೆ ಶಕ್ತಿ ನೀಡಿದ್ದು ಈ ಬೀದರ ಜಿಲ್ಲೆಯೆಂದರು.ಸಂಗೀತಾ ಬಸವರಾಜ ದಯಾಸಾಗರ ದಂಪತಿಗಳನ್ನು ಸನ್ಮಾನಿಸಲಾಯಿತು.ಇದೇ ಸಂದರ್ಭದಲ್ಲಿ ಶಿಕ್ಷಕರಾದ ಸಾವಿತ್ರಿ ಹುಡ್ಗೀಕರ್ ,ಶಿವರಾಜ ಮೇತ್ರೆ,ಸಂಗಮ್ಮ ಬಮ್ಮನಿ,ಶೀಲಾ ಜೂಜಾ ಅವರನ್ನು ಹಾಗೂ ಸಾಧನೆ ಮಾಡಿದ ಸಿದ್ರಾಮ ಡಿ. ವಾಘಮಾರೆ,ಶರದಕುಮಾರ ನಾರಾಯಣಪೇಟ್ಕರ,ಡಾ.ಗವಿಸಿದ್ಧಪ್ಪ ಪಾಟೀಲ ,ಕಾಶಿನಾಥ ರೆಡ್ಡಿ ಅವರಿಗೆ ಜಯಸಿಂಹ ಸಾಹಿತ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಜಯಶ್ರೀ ಕಾಳಗಿ ಪ್ರಾರ್ಥಿಸಿದರು,ಶರದ ಕುಮಾರ ನಾರಾಯಣಪೇಟ್ಕರ್ ಸ್ವಾಗತಿಸಿದರು,ಸಿದ್ಧಾರ್ಥ ಮಿತ್ರಾ ನಿರೂಪಿಸಿದರು.ಉಮೇಶ ಬಾಬು ಮಠದ ವಂದಿಸಿದರು. ಕೆ.ವೀರಾರೆಡ್ಡಿ,ಸುನೀತಾ ಪಾಟೀಲ,ಶಸಿಕಾಂತ ಗಾವಲ್ಕರ್,ಸಂಗೀತಾ ಬಸವರಾಜ,ವಿಜಯಕುಮಾರಿ ಎಂ,ಮಲ್ಲಿಕಾರ್ಜು ನ ಸಂಗಮಕರ್,ಶಿವು ಪವಾರ,ನಾಗಮ್ಮ,ಅರವಿಂದ ಹುಡಗೀಕರ್,ಮೊಯಿನುದ್ದಿನ್ ಹಣಕುಣಿ,ರಾಮಪ್ಪ,ರಮೇಶ ಕಲ್ಯಾಣಿ, ಬಸವರಾಜ ಅರಹಳ್ಳಿ,ಗಣಪತಿ ಪವಾರ,ಕಂಠೆಪ್ಪ ,ಪ್ರತಿಕ್ಷಾ,ಭಾಗ್ಯವಂತ ವಗ್ಗೆ, ಈಶ್ವರ ತಡೋಳಲಾ ಇತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!