ದಾನ ಮಾಡುವಂತಹ ಪ್ರವೃತ್ತಿ ಬೆಳೆಯಬೇಕು:ಕಲ್ಲಯ್ಯಜ್ಜ


ಅಖಿಲ ವಾಣಿ ಸುದ್ದಿ
ಯಲಬುರ್ಗಾ:ಪ್ರತಿಯೊಬ್ಬರಲ್ಲಿ ದಾನ ಮಾಡುವಂತ ಪ್ರವೃತ್ತಿ ಬೆಳೆಯಬೇಕು.ಅಂದಾಗ ಮಾತ್ರ ಇಂಥ ಧಾರ್ಮಿಕ ಕಾರ್ಯಕ್ರಮಗಳು ಜರಗಲು ಸಾಧ್ಯ.ಇವತ್ತು ಯುವಕರು ದುಶ್ಚಟಗಳಿಗೆ ದಾಸವಾಗಿದ್ದು,ತಮ್ಮ ಇಡೀ ಜೀವನವನ್ನೇ ಬಲಿ ಕೊಡುತ್ತಿದ್ದು ನಿಜಕ್ಕೂ ಖೇದಕರ ಸಂಗತಿ.ಸುಂದರ ಸಮಾಜ ನಿರ್ಮಾಣವಾಗಬೇಕಾದರೆ ಯುವಕರು ದುಶ್ಷಟದಿಂದ ದೂರ ಇದ್ದಾಗ ಮಾತ್ರ ಸಾಧ್ಯ ಎಂದು ಗದುಗಿನ ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಹೇಳಿದರು.ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಶನಿವಾರ ಸಂಜೆ ನಡೆದ ಕಲ್ಲಯ್ಯಜ್ಜನವರ ೧೪೯೭ನೇ ತುಲಭಾರ ಸೇವೆ ನಂತರ ಶ್ರೀಗಳು ಆಶೀರ್ವಚನ ನೀಡಿ,ಪ್ರತಿಯೊಬ್ಬರು ಜೀವನದಲ್ಲಿ ಧಾರ್ಮಿಕ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು. ಗಳಿಸಿದ ಹಣದಲ್ಲಿ ಹೆಚ್ಚು ಹೆಚ್ಚು ದಾನ ಮಾಡಿದಾಗ ಮಾತ್ರ ಜೀವನ ಪಾವನವಾಗಲು ಸಾಧ್ಯ,ಭಕ್ತಿ ಎಂಬುವುದು ದೊಡ್ಡ ಸಂಪತ್ತು, ಮನುಷ್ಯನು ಸಂಪತ್ತನ್ನು ನಿರ್ಮಾಣ ಮಾಡಬೇಕಾದರೇ ಭಕ್ತಿ ಮುಖ್ಯ. ಅಂತಹ ಭಕ್ತಿಯನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆದಾಗ ಮಾನವ ದೇವನಾಗಲು ಸಾಧ್ಯ.ನಮ್ಮಲ್ಲಿ ಧರ್ಮ ಮತ್ತು ಭಕ್ತಿ ಇದ್ದಾಗ ಇಂಥ ಧಾರ್ಮಿಕಾ ಕಾರ್ಯಕ್ರಮ ಸಾಧ್ಯ.ನಾವು ಕಾಣುವಂತಾ ಕನಸಿಗೆ ಕೈ ಹಾಕಬೇಕು.ನಮ್ಮಲ್ಲಿ ಪರಿಶುದ್ದ ಭಕ್ತಿ,ಧಾರ್ಮಿಕತೆ ಬರಬೇಕು ಎಂದಾ ಶ್ರೀಗಳು, ಧರ್ಮದ ತಳಹದಿಯಲ್ಲಿ ಎಲ್ಲರೂ ಮುನ್ನಡೆಯಬೇಕು,ತಮ್ಮ ಮಕ್ಕಳಿಗೆ ಧಾರ್ಮಿಕ, ಭಕ್ತಿ, ಭಾವ, ಗುರು ಹಿರಿಯರನ್ನು ಗೌರವಿಸುವುದು, ತಂದೆ ತಾಯಿಯರನ್ನು ಪೂಜಿಸುವುದು, ನಯ-ವಿನಯದಿಂದ ನಡೆಯುವಂತೆ ಮಕ್ಕಳಲ್ಲಿ ಪ್ರೇರಿಪಸಬೇಕು. ಆಗ ಮಕ್ಕಳು ಉತ್ತಮ ನಾಗರಿಕರಾಗಲು ಸಾಧ್ಯ.ಯಲಬುರ್ಗಾ ತಾಲೂಕಿನಲ್ಲಿ ಬರಕ್ಕೆ ಬರವಿರಬಹುದು.ಆದರೆ ಇಲ್ಲಿ ಧಾರ್ಮಿಕತೆಗೆ ಎಂದಿಗೂ ಬರವಿಲ್ಲ ಎನ್ನುವದಕ್ಕೆ ತುಲಭಾರ ಸೇವೆ,ಧಾರ್ಮಿಕ ಕಾರ್ಯಕ್ರಮವೇ ಸಾಕ್ಷಿಯಾಗಿದೆ ಎಂದರು
ಹಿರಿಯ ನ್ಯಾಯವಾದಿ ಬಿ,ಎಂ,ಶಿರೂರು,ಬ್ಲಾಕ ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ,ತಾಲೂಕಾ ಬಿಜೆಪಿ ಪಕ್ಷದ ವಕ್ತಾರ ವೀರಣ್ಣ ಹುಬ್ಬಳ್ಳಿ ಮತ್ತಿತರರು ಮಾತನಾಡಿದರು.ನ್ಯಾಯವಾದಿ ಎಸ್.ಎನ್.ಶ್ಯಾಗೋಟಿ,ಡಾ.ಬಸವರಾಜ ಪೋಲೀಸ್ ಪಾಟೀಲ್,ಕರವೇ ಯುವ ಸೈನ್ಯ ಅಧ್ಯಕ್ಷ ಶಿವಕುಮಾರ ನಾಗನಗೌಡ್ರ,ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ,ಯಲಬುರ್ಗಾ ಪಪಂ ಅಧ್ಯಕ್ಷ ಅಮರೇಶ ಹುಬ್ಬಳ್ಳಿ,ಸ್ಥಾಯಿ ಸಮಿತಿ ಅಧ್ಯಕ್ಷ ವಸಂತಕುಮಾರ ಭಾವಿಮನಿ,ಬಸವನಗೌಡ ತೊಂಡಿಹಾಳ,ಉಮಾದೇವಿ ಶಿರೂರು,ಶಾರದಾ ಕೊಡತಗೇರಿ,ಪ್ರೇಮಾ ಪಾಟೀಲ್,ನೀಲನಗೌಡ ತೊಂಡಿಹಾಳ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!