ದೇಶದಲ್ಲಿರುವದು ಜನ ಹಿತ ಸರ್ಕಾರವಲ್ಲ ಸುಳ್ಳು ಮೋಸ ವಂಚನೆಗಳ ಸರ್ಕಾರ: ಹೆಚ.ಕೆ.ಪಾಟೀಲ್

ಅಖಿಲ ವಾಣಿ ಸುದ್ದಿ
ಸಿಂಧನೂರು : ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಗಾಗಿ ಜನರಿಗೋಸ್ಕರ.ಮತ್ತು ಈ ದೇಶದ ಘನ ಸಂವಿಧಾನ ಬದ್ದ ಆಡಳಿತದ ಸರ್ಕಾರಗಳನ್ನು ನೋಡಿದ್ದೇವೆ ಆದರೆ ಈ ದೇಶದ ಇತಿಹಾಸದಲ್ಲಿ ಪ್ರಜಾಪ್ರಭುತ್ವವನ್ನೂ ಬುಡಮೇಲು ಮಾಡಿ ಈ ದೇಶದ ಘನ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಜನರಿಗೆ ಸುಳ್ಳು – ಮೋಸ ಮತ್ತು ವಂಚನೆ ಮಾಡುತ್ತ ಆಡಳಿತವನ್ನು ನಡೆಸುತ್ತಿರುವ ಪ್ರಧಾನಿ ಮೋದಿ ಹಾಗೂ ಮುಖ್ಯ ಮಂತ್ರಿ ಯಡಿಯೂರಪ್ಪನ ಸರ್ಕಾರಗಳನ್ನು ನೋಡುತ್ತಿದ್ದೇವೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಹೆಚ್.ಕೆ. ಪಾಟೀಲ್ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು
ಮಸ್ಕಿ ಉಪ ಚುನಾವಣೆ ಪ್ರಚಾರ ನಿಮಿತ್ಯ ಸಿಂಧನೂರುಗೆ ಶುಕ್ರವಾರ ಆಗಮಿಸಿದ್ದ ಅವರು ನಗರದ ಕಾಕತೀಯ ಕ್ಲಬ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ ಈ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಜನರಿಗೆ ವಿದೇಶಗಳಲ್ಲಿರುವ ಕಪ್ಪು ಹಣ ತಂದು ಕೊಡುವ ಮತ್ತು ವಿದ್ಯಾವಂತ ಯುವಕರಿಗೆ ವರ್ಷಕ್ಕೆ ಕನಿಷ್ಠ ಎರಡು ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿ ಇವತ್ತಿಗೂ ಆ ಕಪ್ಪು ಹಣ ತಂದು ಕೊಡುವಲ್ಲಿ ಮತ್ತು ಯುವಕರಿಗೆ ಉದ್ಯೋಗವನ್ನು ಕೊಡುವಲ್ಲಿ ಮೋಸ ಮಾಡಿದೆ. ಈ ದೇಶದ ರೈತರಿಗೆ ದ್ವಿಗುಣ ಲಾಭ ಮಾಡುವದಾಗಿ ಹೇಳಿ ರೈತ ವಿರೋಧಿ ಕೃಷಿ ಕಾನೂನುಗಳನ್ನು ಜಾರಿಗೊಳಿಸಿ. ರೈತರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಿದೆ.ದೇಶದ ಗಡಿ ಭಾಗದಲ್ಲಿ ಇವತ್ತಿಗೂ ರೈತರು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ವಿರುದ್ಧ ಹೋರಾಟಗಳಲ್ಲಿ ತೊಡಗಿದ್ದರು ಸೌಜನ್ಯಕ್ಕಾದರು ರೈತರ ಹೋರಾಟದ ಕುರಿತು ತುಟಿ ಬಿಚ್ಚಿ ಮಾತನಾಡದ ಬಿಜೆಪಿ ಸರ್ಕಾರ ಅದು ಹೇಗೆ ಜನಪರ ಹಾಗೂ ರೈತ ಪರ ಸರ್ಕಾರವಾಗಲಿದೇ..? ಎಂದು ಪ್ರಶ್ನಿಸಿದರು.
೭೦ ವರ್ಷದ ಆಡಳಿತದ ಸರ್ಕಾರಗಳಲ್ಲಿ ಈ ದೇಶಕ್ಕೆ ಸಾಲ ೫೩ ಸಾವಿರ ೧೧ ಲಕ್ಷ ಕೋಟಿ ಹೊರೆಯಿತ್ತು. ಆದರೆ ಈ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದು ನೂರ ಮೂವತ್ತೈದು ಸಾವಿರ ಲಕ್ಷ ಕೋಟಿ ಹೆಚ್ಚಾಗಿದೆ ಎಂದರೆ ಇನ್ನೆಲ್ಲಿ ಬಿಜೆಪಿ ಸರ್ಕಾರ ಈ ದೇಶವನ್ನು ಸಾಲ ಮುಕ್ತ ದೇಶವನ್ನು ಮಾಡಲು ಸಾಧ್ಯ? ಮತ್ತು ಈ ದೇಶವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಲು ಸಾಧ್ಯ..? ಈ ಹಿಂದೆ ಮನಮೋಹನ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೂ ಮತ್ತು ಈಗಿನ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರಕ್ಕೂ ಇರುವ ಜನಪರ ಕಾಳಜಿಯನ್ನು ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ.ಈ ದೇಶದಲ್ಲಿ ಪೆಟ್ರೋಲ್.ಡೀಸೆಲ್ ಬೆಲೆ ಹೆಚ್ಚಳ ಸೇರಿದಂತೆ ಜನರ ದಿನ ಬಳಕೆ ಅಗತ್ಯ ವಸ್ತುಗಳ ಬೆಲೆ ದಿನ ದಿನಕ್ಕೂ ಹೆಚ್ಚಾಗುತ್ತಲೇ ಇದೆ.ಜನ ಸಾಮಾನ್ಯರು ಬದುಕುವುದು ಕಷ್ಟವಾಗಿದೆ ಎಂದು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಒಂದೊಂದೇ ಸುಳ್ಳು ಮತ್ತು ಮೋಸಗಳ ವಿರುದ್ಧ ಹರಿಹಾಯ್ದರು

ಚುನಾವಣೆ ಆಯೋಗದ ಕಣ್ಣು ಮುಚ್ಚಿಸಿದ ಬಿಜೆಪಿ ಸರ್ಕಾರ : ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲ್ಲು ಕ್ಷೇತ್ರದ ಮತದಾರರಿಗೇ ಹಾಡು ಹಗಲೇ ಹಣ ಹಂಚಿಕೆ ಮಾಡುತ್ತಿದೆ.ಹಣ ಹಂಚಿಕೆ ಮಾಡಿದ ಕುರಿತು ದಾಖಲೆಗಳ ಸಮೇತ ಸಾಕ್ಷೀ ಇದ್ದರು ಇವತ್ತು ಚುನಾವಣೆ ಆಯೋಗದ ಮತ್ತು ಪೊಲೀಸ್ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆ.ಈ ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ದಮನ ಮಾಡಿ ವಾಮ ಮಾರ್ಗ ಅನುಸರಿಸಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರನ್ನು ಗೆಲ್ಲಿಸಲು ಹೊರಟಿದೆ. ಬಿಜೆಪಿ ಅಧಿಕಾರದ ಲಾಲಸೆಗಾಗಿ ಈ ಹಿಂದೆ ಅನೇಕ ಬಾರಿ ಅಪರೇಶನ ಕಮಲ ನಡೆಸಿ ರುಚಿ ಕಂಡ ಹಿನ್ನಲೆಯಲ್ಲಿ ಈ ಚುನಾವಣೆಗಳಲ್ಲಿ ಜನರಿಗೆ ಹಣ ಮತ್ತು ಮಧ್ಯದ ಆಸೆಯನ್ನು ತೋರಿಸುತ್ತಿದೆ. ಬಳಗಾನೂರ. ತುರುವಿಹಾಳ.ವಿರುಪಾಪುರ ಗ್ರಾಮಗಳಲ್ಲಿ ಬಿಜೆಪಿ ಹಾಡು ಹಗಲೇ ಹಣ ಹಂಚಿಕೆ ಮಾಡಿದ ಪುರಾವೆಗಳಿವೆ.ಇಷ್ಟೆಲ್ಲಾ ಇದ್ದರೂ ಕೂಡ ಮುಖ್ಯ ಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಚುನಾವಣೆ ಆಯೋಗದ ಅಧಿಕಾರಿಗಳ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳ ಕಣ್ಣು ಮುಚ್ಚಿಸಿ ಅಕ್ರಮ ಚುನಾವಣೆಯಲ್ಲಿ ತೊಡಗಿದೆ. ಬಿಜೆಪಿ ಸರಕಾರಕ್ಕೆ ಮಾನ ಮರ್ಯಾದೆ ಇದ್ದರೆ ಈ ದೇಶದ ಕಾನೂನು ಬದ್ಧ ಚುನಾವಣೆಯನ್ನು ನಡೆಸಿ ಅಧಿಕಾರಕ್ಕೆ ಬರಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಪಕ್ಷವು ಈಗಾಗಲೇ ಬಿಜೆಪಿ ಪಕ್ಷದ ಅಕ್ರಮ ಚುನಾವಣೆ ಹಾಗೂ ಹಣ ಹಂಚಿಕೆ ಮಾಡಿದ ದಾಖಲೆಗಳ ಸಮೇತ ಕೇಂದ್ರ ಚುನಾವಣೆ ಆಯೋಗಕ್ಕ್ ದೂರನ್ನು ಸಲ್ಲಿಸುವ ಚಿಂತನೆ ನಡೆಸಿದೆ.ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ.ಬಸನಗೌಡ ತುರುವಿಹಾಳ ಗೆಲ್ಲುವುದು ಖಚಿತ.ಕ್ಷೇತ್ರದ ಮತದಾರರೆ ಕಾಂಗ್ರೆಸ್ ಪಕ್ಷದ ಕಡೆ ಒಲವನ್ನು ತೋರಿಸಿದ್ದಾರೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಮಾಜಿ ಸಚಿವ ಹೆಚ್.ಆಂಜಿನಯ್ಯ.ಬಸವರಾಜ ಪಾಟೀಲ ಇಟಗಿ.ಮಾಜಿ ಶಾಸಕ ಹಂಪನಗೌಡ ಬಾದರ್ಲಿ. ಖಾಜಿ ಮಲ್ಲಿಕ. ಅನಿಲಕುಮಾರ ವೈ.ಮಹೇಂದ್ರ ಸೇರಿದಂತೆ ಇನ್ನಿತರ ಇದ್ದರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!