ನಗರದಲ್ಲಿ ನೋಡ್ಯಾಳ ರೊಕ್ಕ ಬರ‍್ತಾಳ ಪಕ್ಕ ಹೌಸ್‌ಫುಲ್ ನಾಟಕ ಪ್ರದರ್ಶನ

ಕೊಪ್ಪಳ : ನಗರದ ಗದಗ ರಸ್ತೆಯ ಟಿಎಪಿಎಂಎಸ್ ರವರ ಜಾಗದಲ್ಲಿ ಹಾಕಿರುವ ಚಿಂದೋಡಿ ಶ್ರೀಕಂಠೇಶ ಶ್ರೀಕೆಬಿಆರ್ ಡ್ರಾಮಾ ಕಂಪನಿ ದಾವಣಗೇರ ಇವರಿಂದ ನೋಡ್ಯಾಳ ರೊಕ್ಕ ಬರ‍್ತಾಳ ಪಕ್ಕ ಎಂಬ ಹಾಸ್ಯಭರಿತ ನಾಟಕ ಪ್ರತಿದಿನ ಮಧ್ಯಾಹ್ನ೨-೩೦ ಹಾಗೂ ಸಂಜೆ ೬-೧೫ಕ್ಕೆ ಪ್ರದರ್ಶನಗೊಳ್ಳುವ ನಾಟಕ ಹೌಸ್‌ಫುಲ್ ಯಶಸ್ವೀಯಾಗಿ ಪ್ರzರ್ಶನಗೊಂಡು ಪ್ರತಿದಿನ ಜನಮನ ಸೆಳೆಯುತ್ತಿದೆ.
ಚಿಂದೋಡಿ ಕುಟುಂಬದ ಶ್ರೀ ಕೆಬಿಆರ್ ಡ್ರಾಮಾ ಕಂಪನಿ ದಾವಣಗೇರ ಇವರು ಉತ್ತಮ ಸದಭಿರುಚಿಯ ಪಾತ್ರದೊಂದಿಗೆ ಕುಟುಂಬ ಸಮೇತ ಕುಳಿತು ನೋಡುವ ಉತ್ತಮ ನಾಟಕಗಳಿಂದ ಕರ್ನಾಟಕದಲ್ಲಿ ಜನಪ್ರೀಯತೆಯನ್ನು ಹೊಂದಿದಮೀ ಕಂಪನಿಯ ನಾಟಕಗಳು ಯಶಸ್ವೀಯಾಗಿ ಪ್ರದರ್ಶನಗೊಳ್ಳುತ್ತ ಜನಮನ್ನಣೆ ಪಡೆಯುತ್ತಿವೆ.
ಈ ನಾಟಕದಲ್ಲಿ ಹಾಸ್ಯರತ್ನ ಚಿಂದೋಡಿ ಕಿಶೋರ್‌ಕುಮಾರ ಅವರು ಹಾಸ್ಯ ಪಾತ್ರದಲ್ಲಿ ಅಭಿನಯಿಸಿದ್ದು ನಾಟಕಕ್ಕೆ ಆಗಮಿಸಿದ ಪ್ರೇಕ್ಷಕ ಇವರ ಪಾತ್ರ ನೋಡಿ ನಕ್ಕು ನಕ್ಕು ಖಂಡಿತ ಹೋಗದೇ ಇರಲಾರ, ಈ ನಾಟಕ ರಚಿಸಿದ ನಾಟಕ ಕಂಪನಿ ಮಾಲೀಕರಾದ ಚಿಂದೋಡಿ ಶ್ರೀಕಂಠೇಶ್‌ಯವರು ಸಹ ಮುಖ್ಯ ಪಾತ್ರದಲ್ಲಿ ಅಭಿನಯಿಸಿ ಎಲ್ಲಾರಿಂದ ಸೈ ಎನ್ನಿಸಿಕೊಂಡಿದ್ದು ಈ ನಾಟಕವನ್ನು ಮತ್ತೇ ಮತ್ತೇ ನೋಡಬೇಕಿನ್ನಿಸುತ್ತದೆ ಕಲಾ ಪ್ರೇಮಿಗಳು, ಕೊಪ್ಪಳ ನಗರ ಸುತ್ತಮುತ್ತಲಿನ ಗ್ರಾಮದ ಜನತೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಿಸುತ್ತೀದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!