ನಗರದಲ್ಲಿ ವಿವಿಧೆಡೆ ಈದ್-ಮಿಲಾದ್ ಆಚರಣೆ

ನಗರದಲ್ಲಿ ವಿವಿಧೆಡೆ ಈದ್-ಮಿಲಾದ್ ಆಚರಣೆ
ಕೊಪ್ಪಳ: ನಗರದಲ್ಲಿ ವಿವಿಧೆಡೆ ಈದ್-ಮಿಲಾದ್ ಹಬ್ಬವನ್ನು ಅನ್ನು ಆಚರಿಸಲಾಯಿತು.
ಈದ್ ಮಿಲಾದ್… ಇಸ್ಲಾಂ ಧರ್ಮೀಯರ ಪಾಲಿಗೆ ಮಹತ್ವದ ದಿನ. ಪ್ರವಾದಿ ಮಹಮ್ಮದ್ ಅವರ ಜನ್ಮದಿನವನ್ನಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಹೀಗಾಗಿ, ಈದ್ ಮಿಲಾದ್ ಇಸ್ಲಾಂ ಧರ್ಮದ ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ. ಇಸ್ಲಾಮಿಕ್ ಕ್ಯಾಲೆಂಡರಿನ ರಬೀ ವುಲ್ ಅವ್ವಲ್ ಎಂಬ ತಿಂಗಳಿನಲ್ಲಿ ಈದ್ ಮಿಲಾದ್ ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಮುಸ್ಲಿಂ ಧರ್ಮೀಯರು ಶ್ರದ್ಧಾಭಕ್ತಿಯಿಂದ ಈ ಪವಿತ್ರ ದಿನವನ್ನು ಆಚರಿಸುತ್ತಾರೆ.
ಈ ವರ್ಷ, ೨೦೨೧ ರಲ್ಲಿ, ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ, ಈದ್ ಮಿಲಾದ್-ಉನ್-ನಬಿಯನ್ನು ಅಕ್ಟೋಬರ್ ೧೯ ರಂದು ಆಚರಿಸಲಾಯಿತು.
ಪ್ರವಾದಿ ಮುಹಮ್ಮದ್ ಸೌದಿ ಅರೇಬಿಯಾದ ಮಕ್ಕಾದಲ್ಲಿ ೫೭೦ ಅಇ ಯಲ್ಲಿ ಜನಿಸಿದರು ಎಂದು ನಂಬಲಾಗಿದೆ. ಅವರು ಅಲ್ಲಾಹನ ಕೊನೆಯ ಸಂದೇಶವಾಹಕರಾಗಿದ್ದು, ಅವರು ಪ್ರವಾದಿಯಾಗಿ ಎಲ್ಲ ಮನುಷ್ಯರಿಗೂ ಪ್ರೀತಿ ಮತ್ತು ಏಕತೆಯ ಸಂದೇಶವನ್ನು ಸಾರಿದ್ದಾರೆ. ಅಲ್ಲದೆ ಪ್ರವಾದಿ ಮೊಹಮ್ಮದ್ ಅವರ ಜನ್ಮದಿನವನ್ನು ಆಚರಿಸಿದ ಮೊದಲ ಇಸ್ಲಾಂ ದೊರೆ ಮುಝಾಫರ್ ಅಲ್ ದಿನ್ ಗೋಕ್ಬೊರಿ ಎಂದು ನಂಬಲಾಗಿದೆ. ಒಟ್ಟೋಮನ್ಸ್ ೧೫೮೮ರಲ್ಲಿ ಈ ದಿನದಂದು ಅಧಿಕೃತ ರಜೆ ಎಂದು ಘೋಷಿಸಿದರು.
ಕೊಪ್ಪಳದಲ್ಲಿ ಪ್ರವಾದಿ ಮಹಮ್ಮದ್ (ಸ)ರ ಹುಟ್ಟಿದ ದಿನದ ಅಂಗವಾಗಿ ಎಲ್ಲಾ ಮುಸ್ಲಿಂ ಭಾಂದವರು ಸೇರಿ ಜುಲೂಸ್ (ಮೆರವಣಿಗೆ) ನಡೆಸಿ ಹರ್ಷವನ್ನು ವ್ಯಕ್ತ ಪಡಿಸಿದರು. ಈ ಮೆರವಣಿಗೆ ನಗರದ ಗಡಿಯಾರಕಂಭದಿಂದ ಅಶೋಕ ವೃತ್ತದವರೆಗೆ ನಡೆಸಲಾಯಿತು.
ಒಂದೆಡೆ ಮೆರವಣಿಗೆ ಯಾದರೆ ಇನ್ನೋಂದೆಡೆ ನಗರದ ಜಾಮಿಯಾ ಮಸೀದ್ ಪಂಚಕಮಿಟಿಯ ವತಿಯಿಂದ ಈದ್ ಮಿಲಾದುನ್ನಬಿ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು. ಹಬ್ಬದ ಪ್ರಯುಕ್ತ ಜಾಮೀಯಾ ಮಸ್ಜಿದ್ ಆವರಣದಲ್ಲಿ ಕರೋನಾ ವ್ಯಾಕ್ಸಿನೇಷನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ೨೪೦ ಜನರಿಗೆ ವ್ಯಾಕ್ಸಿನ್‌ಹಾಕಲಾಯಿತು. ಮುಸ್ಲಿಂ ಬಾಂಧವರು ಪರಸ್ಪರ ಈದ್ ಇ ಮಿಲಾದ್‌ನ ಈ ಶುಭ ಸಂದರ್ಭದಲ್ಲಿ ಅಲ್ಲಾಹ್ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ತನ್ನ ಆಶೀರ್ವಾದದ ಮಳೆ ಸುರಿಸಲಿ. ಶಾಶ್ವತ ಖುಷಿ, ನೆಮ್ಮದಿ ನಿಮ್ಮದಾಗಲಿ. ನಿಮಗೆ ಈದ್ ಮಿಲಾದ್ ಶುಭಾಶಯಗಳು ಎಂದು ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಶಾಸಕ ರಾಘವೆಂದ್ರ ಹಿಟ್ನಾಳ್‌ರವರು ಮೆರವಣಿಗೆಯಲ್ಲಿ ಭಾಗವಹಿಸಿ ಮುಸ್ಲಿಂ ಬಾಂಧವರಿಗೆ ಶುಭಕೋರಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!