ನಟ ರಜನಿಕಾಂತ್‌ಗೆ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ

ನವದೆಹಲಿ: ನಟ ರಜನಿಕಾಂತ್‌ ಅವರಿಗೆ 51ನೇ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಪ್ರಕಟಿಸಿದ್ದಾರೆ.

‘ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಅತ್ಯುತ್ತಮ ನಟರಲ್ಲಿ ಒಬ್ಬರಾಗಿರುವ ರಜನಿಕಾಂತ್‌ ಅವರಿಗೆ 2019ನೇ ಸಾಲಿನ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಘೋಷಿಸಲು ಸಂತಸವಾಗುತ್ತಿದೆ. ನಟ, ನಿರ್ಮಾಪಕ ಮತ್ತು ಚಿತ್ರಬರಹಗಾರರಾಗಿ ಅವರು ನೀಡಿರುವ ಕೊಡುಗೆ ಅಪ್ರತಿಮವಾದುದು’ ಎಂದು ಜಾವಡೇಕರ್‌ ಟ್ವೀಟಿಸಿದ್ದಾರೆ.

ಗಾಯಕಿ ಆಶಾ ಭೋಸ್ಲೆ, ನಿರ್ದೇಶಕ ಸುಭಾಷ್‌ ಘಾಯ್‌, ನಟ ಮೋಹನ್‌ ಲಾಲ್‌, ಸಂಗೀತ ಸಂಯೋಜಕ ಶಂಕರ್‌ ಮಹದೇವನ್, ನಟ ವಿಶ್ವಜೀತ್‌ ಚಟರ್ಜಿ ಅವರು 2019ನೇ ಸಾಲಿನ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು. ಅವರಿಗೆ ಜಾವಡೇಕರ್‌ ಧನ್ಯವಾದ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!