ನಾಳೆ ಗಂಗಾವತಿಯಲ್ಲಿ ಪತ್ರಿಕಾ ದಿನಾಚರಣೆ

ಕೊಪ್ಪಳ.ಜು.೧೬:ಜಿಲ್ಲೆಯ ಗಂಗಾವತಿ ನಗರದ ತಾಪಂ ಮಂಥನ ಸಭಾಂಗಣದಲ್ಲಿ ದಿ.೧೭ ರ ಶನಿವಾರ ಬೆಳ್ಳಿಗೆ ೧೧.೩೦ ಕ್ಕೆ ಕನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಗಂಗಾವತಿ ತಾಲೂಕ ಘಟಕದ ವತಿಯಿಂದ ತಾಲೂಕ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಪತ್ರಿಕಾ ಭವನದ ಮೇಲಂತಸ್ತಿನ ನವೀಕರಣ ಕಟ್ಟಡ ಉದ್ಘಾಟನೆ ಸಮಾರಂಭ ಜರುಗಲಿದೆ.
ಸಂಸದ ಸಂಗಣ್ಣ ಕರಡಿ ಉದ್ಘಾಟನೆ ನೇರವೇರಸಲಿದ್ದು ಶಾಸಕ ಪರಣ್ಣ ಮುನವಳ್ಳಿ ರಿಂದ ಪತ್ರಕರ್ತರಿಗೆ ಸಂಘದ ಗುರುತಿನ ಕಾರ್ಡ ವಿತರಣೆ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಎಚ್.ಆರ್ ಶ್ರೀನಾಥ ವನಮಹೊತ್ಸವಕ್ಕೆ ಚಾಲನೆ ನೀಡಲಿದ್ದಾರೆ ಸಂಘದ ರಾಜ್ಯ ಕಾರ್ಯದರ್ಶಿ ಬಂಗ್ಲೆ ಮಲ್ಲಿಕಾರ್ಜುನರವರು ಸಾದಕರಿಗೆ ಸನ್ಮಾನ ಮಾಡಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ತಾಲೂಕ ಘಟಕದ ಅಧ್ಯಕ್ಷ ವಿಶ್ವನಾಥ ಬೆಳಗಲ ಮಠ ವಹಿಸಲಿದ್ದಾರೆ ಮುಖ್ಯ ಅಥಿತಿಗಳಾಗಿ ಸಂಘದ ಜಿಲ್ಲಾಧ್ಯಕ್ಷ ಎಂ.ಸಾದಿಕ ಅಲಿ, ಜಿ.ಪ್ರ.ಕಾರ್ಯದರ್ಶಿ ಎನ್.ಎಮ್ ದೊಡ್ಡಮನಿ, ರಾಜ್ಯ ಕಾರ್ಯಕಾರಣಿ ಸದಸ್ಯ ಜಿ.ಎಸ್ ಗೋನಾಳ, ರಾಜ್ಯ ಕಾರ್ಯಕಾರಣಿ ನಾಮಕರಣ ಸದಸ್ಯ ಹರೀಶ ಎಚ್.ಎಸ್ ಪಾಲ್ಗೋಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ಗಂಗಾವತಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ ಕುಲಕರಣಿ, ಉಪಾಧ್ಯಕ್ಷ ಕೃಷ್ಣ ನಾಯಕ ಜೋಗದ್ ರವರು ಪ್ರಕಟಣೆಯಲ್ಲಿ ತಿಳೀಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!