ನ.26ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಹಾಗೂ ಪ್ರತಿಭಟನೆ

ಕೊಪ್ಪಳ: ದೇಶಕ್ಕೆ ಮರಣ ಶಾಸನವಾಗಲಿರುವ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಾಸ್ ಪಡೆದುಕೊಳ್ಳಲು ಕೇಂದ್ರ ಸರ್ಕಾರ ಘೊಷಣೆ ಮಾಡಿರುವುದು ಸ್ವಾಗತಾರ್ಹ ಆದರೆ ಸದರಿ ವಿರೋಧಿ ಸಂಸತ್‌ನಲ್ಲಿ ಅಂಗೀಕರಿಸಿ ರದ್ದುಪಡಿಸಬೇಕು ಎಂದು ಒತ್ತಾಯಿಸಿ ಇನ್ನೂ ಹಲವು ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಇದೇ ೨೬ ರಾಜ್ಯದಾಧ್ಯಂತ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳನ್ನು ಬಂದ್ ಮಾಡುವ ಮೂಲಕ ಬೃಹತ್ ಪ್ರತಿಭಟನೆ ಸಂಯುಕ್ತ ಕಿಸಾನ್ ಮೋರ್ಚಾ ರೈತ ಸಂಘಟನೆಗಳ ಸಮನ್ವಯ ಸಮಿತಿಯ ಡಿ.ಹೆಚ್. ಪೂಜಾರ್ ಘೋಷಿಸಿದರು.
ಅವರು ಬುಧವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಪ್ರಧಾನಿಯವರು ಕಳೆದ ವರ್ಷವೇ ಈ ನಿರ್ಧಾರ ತೆಗೆದುಕೊಂಡಿದ್ದರೆ ರೈತರ ಪ್ರಾಣ ಕಳೆದುಕೊಳ್ಳುತ್ತಿರಲಿಲ್ಲ. ಈಗಾಗಲೇ ಗೋಷಿಸಿದಂತೆ ೩ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಮೊದಲು ಪಾರ್ಲಿಮೆಂಟ್‌ನಲ್ಲಿ ಅಂಗೀಕರಿಸಲು ಮತ್ತು ಬೆಂಬಲ ಬೆಲೆಗೆ ಶಾಸನ ರೂಪಿಸಲು ಒತ್ತಾಯಿಸಿ ದೆಹಲಿಯಲ್ಲಿ ಹೋರಾಟ ಮುಂದುವರೆದಿದೆ. ತ್ಯಾಗ ಎಲ್ಲವನ್ನು ಜಯಸುತ್ತದೆ. ಎನ್ನಲು ಈ ಹೈತಿಹಾಸಿಕ ಚಳುವಳಿ ದೊಡ್ಡ ಮಾದರಿಯಾಗಿದೆ. ರಾಜ್ಯ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೊಳಿಸಿದ್ದರಿಂದ ತೀವ್ರ ಸಂಕಷ್ಟಕ್ಕೆ ೮೦ ಕ್ಕೂ ಅಧಿಕ ಎಪಿಎಂಸಿಗಳು ಸಿಲುಕಿವೆ. ಕೇಂದ್ರದ ಮಾದರಿಯಲಿ ರಾಜ್ಯ ಭೂಸುಧಾರಣೆ ಮತ್ತು ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.
ವಿದೇಶಿ ಮೂಲದ ಕಾರ್ಪೋರೇಟ್ ಕಂಪನಿಗಳು ಭೂಮಿಯನ್ನು ಖರೀದಿಸಿದೆ. ವಿದೇಶಿ ಕಂಪನಿಗಳ ಕೈವಶವಾಗಿರುವ ಈ ಭೂಮಿ ರೈತರಿಗೆ ಕೊಡಬೇಕು. ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಸಂಸತ್‌ನಲ್ಲಿ ಮೊದಲು ಅಂಗೀಕರಿಸಿ ರದ್ದುಗೊಳಿಸಬೇಕು. ಸಮಗ್ರ ಉತ್ಪನ್ನ ವೆಚ್ಚದ ಆಧಾರದ ಮೇಲೆ ಬೆಲೆ ನಿಗಧಿ ಮಾಡಬೇಕು. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಗೊಳಿಸಬೇಕು. ವಿದ್ಯುತ್ ತಿದ್ದುಪಡಿ ಮಸೂದೆ ವಾಪಸ್ ಪಡೆಯಬೇಕು. ಲಿಖಿಮ್‌ಪುರಕೇರಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಸೂತ್ರದಾರ ಕೇಂದ್ರ ಸಚಿವ ಅಜಯ ಮಿಶ್ರಾ ತೆನಿ ಶರ್ಮಾ ಇವರನ್ನು ಸಂಪುಟದಿಂದ ವಜಾಗೊಳಿಸಿ ಬಂಧಿಸಿ ಕ್ರಮಕೈಗೊಳ್ಳಬೇಕು. ಚಳುವಳಿಯಲ್ಲಿ ಪ್ರಾಣ ತ್ಯಾಗ ಮಾಡಿದ ಸ್ಮಾರಕಗಳನ್ನು ನಿರ್ಮಿಸಲು ಹಾಗೂ ಪ್ರತಿಯೊಬ್ಬ ಕುಟುಂಬಗಳಿಗೂ ೫೦ ಲಕ್ಷ ಪರಿಹಾರ ನೀಡಬೇಕು. ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ದೇಶದಾಧ್ಯಂತ ಹೋರಾಟ ನಿರತ ರೈತರ ಮೇಲೆ ಹಾಕಿರುವ ಪ್ರಕರಣ ಹಿಂಪಡೆಯಬೇಕು. ಕೇಂದ್ರ ಸರ್ಕಾರ ೩ ಕಾಯ್ದೆಗಳನ್ನು ವಾಪಸ್ ಮಡೆದುಕೊಂಡಂತೆ ರಾಜ್ಯ ಸರ್ಕಾರ ಕೂಡ ಎಪಿಎಂಸಿ ಭೂ ಸುಧಾರಣೆ ತಿದ್ದುಪಡಿ ಮತ್ತು ಗೋತ್ಯೆ ನಿಷೇಶ ಕಾಯ್ದೆ ಹಿಂಪಡೆಯಬೇಕು. ಅಕಾಲಿಕ ಮಳೆಯಿಂದ ಭತ್ತ, ಹತ್ತಿ, ತೊಗರೆಬೆಳೆ ಇತರ ಕೃಷಿ ಉತ್ಪನ್ನಗಳು ನಚ್ಟವಾಗಿವೆ. ಪ್ರತಿ ಎಕರೆ ಭೂಮಿಗೆ ೨೦ ಸಾವಿರ ಪರಿಹಾರ ಧನ ಒದಗಿಸಿಕೊಂಡಬೇಕೆಂದು ದಿ. ೨೬ ರಂದು ಬೃಹತ್ ಪ್ರತಿಭಟನೆ ಮತ್ತು ಹೆದ್ದಾರಿ ಬಂದ ಮಾಡಲಾಗುವುದು ಎಂದು ಕಾರ್ಮಿಕ ಮುಖಂಡ ಡಿ.ಹೆಚ್. ಪೂಜಾರ್ ವಿವರಿಸಿದರು.
ಈ ಸಂದರ್ಭದಲ್ಲಿ ಬಸವರಾಜ ಶೀಲವಂತರ, ಅಲ್ಲಮಪ್ರಭು ಬೆಟ್ಟದೂರು, ತಿಪ್ಪಯ್ಯ ಹಿರೇಮಠ, ಹನುಮಂತಪ್ಪ ಬೆಣಕಲ್, ಅಶೋಕ ಗೋಪಂಡ್ಲಿ, ಶರಣು ಗಡ್ಡಿ ಅನೇಕರು ಪಾಲ್ಗೊಂಡಿದ್ದರು.ನ.೨೬ ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಹಾಗೂ ಪ್ರತಿಭಟನೆ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!