ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ನೀಡಲು ಪ್ರತಿಭಟನೆ


ಕೊಪ್ಪಳ : ಪಂಚಮಸಾಲಿ ಸಮಾಜಕ್ಕೆ ೨ ಎ ಮೀಸಲಾತಿಯನ್ನು ೨೦೨೧ ಸೆಪ್ಟೆಂಬರ್ ೧೫ ರ ಒಳಗಾಗಿ ಅನುಷ್ಠಾನಗೊಳಿಸುತ್ತೇವೆ ಎಂದು ವಿಧಾನಸೌಧದ ಅಧಿವೇಶನದಲ್ಲಿ ನೀಡಿದ ಗಡುವುನಂತೆ ಸರ್ಕಾರ ನಡೆಯಲಿ ಎಂದು ಆಗ್ರಹಿಸಿ ಬುಧುವಾರದಂದು ಸಮಾಜದ ಮುಖಂಡರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಹಾಗೂ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಲಿಂಗಾಯತ ಪಂಚಮಸಾಲಿ ಹಾಗೂ ಉಪನಾಮಗಳಾದ ಗೌಡಲಿಂಗಾಯತ,ಮಲೆಗೌಡ , ದೀಕ್ಷಾ ಪಂಚಮಸಾಲಿಗಳಿಗೆ ೨ ಎ ಮೀಸಲಾತಿಗಾಗಿ ಹಕ್ಕೊತ್ತಾಯಿಸಿ ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಪೀಠದಿಂದ ಬೆಂಗಳೂರಿನ ಆಡಳಿತ ಪೀಠದವರಗೆ ಪ್ರಥಮ ಜಗದ್ಗುರು ಬಸವಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಐತಿಹಾಸಿಕ ದಾಖಲೆಯ ಪಾದಯಾತ್ರೆ , ಜಗತ್ತಿಗೆ ಪಂಚಮಸಾಲಿಗಳನ್ನು ಪ್ರಥಮ ಬಾರಿಗೆ ಶಕ್ತಿ ಪ್ರದರ್ಶನ ಮೂಲಕ ಪರಿಚಯಿಸುವ ಬೆಂಗಳೂರಿನ ಮಹರ‍್ಯಾಲಿ ಹಾಗೂ ೨೩ ದಿನಗಳ ನಿರಂತರ ಧರಣಿ ಸತ್ಯಾಗ್ರಹ ಮಾಡಿದ ಮೇಲೆ , ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್‌ರವರು ಸದನದ ಒಳಗೆ ನಿರಂತರ ಹಕ್ಕೋತ್ತಾಯ ಮಾಡಿದ ಪರಿಣಾಮ ಮುಖ್ಯಮಂತ್ರಿಗಳು ಮಾರ್ಚ ೧೫ ರಂದು ಆರು ತಿಂಗಳೊಳಗೆ ಅಂದರೆ ಸಪ್ಟೆಂಬರ್ ೧೫ ರ ಒಳಗಡೆಯಾಗಿ ಮೀಸಲಾತಿ ಸೌಲಭ್ಯ ಕಲ್ಪಿಸುತ್ತೇವೆ ಎಂದು ಅಧಿವೇಶನದಲ್ಲಿ ಕೊಟ್ಟ ಮಾತು ಕಡತಗಳಲ್ಲಿ ದಾಖಲಾಗಿದೆ ರಾಜ್ಯ ಸರ್ಕಾರ ಕೇಳಿದ ಕಾಲವಾಕಾಶ ಸಪ್ಟೆಂಬರ್ ೧೫ ಕ್ಕೆ ಮುಕ್ತಾಯವಾಗಲಿದೆ . ಆದ್ದರಿಂದ ಸರ್ಕಾರ ಕೊಟ್ಟ ಮಾತಿನಂತೆ ಮುಖ್ಯಮಂತ್ರಿಗಳು ಪಂಚಮಸಾಲಿ ಸಮಾಜಕ್ಕೆ ೨ ಎ ಮೀಸಲಾತಿಯನ್ನು ನೀಡಿ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಒಂದು ವೇಳೆ ವಿಳಂಬವಾದಲ್ಲಿ ಅಕ್ಟೋಬರ್ ೧ ರಂದು ಬೆಂಗಳೂರಿನ ಸ್ವಾತಂತ್ರö್ಯ ಉದ್ಯಾನವನದಲ್ಲಿ ಜಗದ್ಗುರುಗಳ ಸಾನಿಧ್ಯದಲ್ಲಿ ನಿರಂತರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಮನವಿ ಮೂಲಕ ಆಗ್ರಹಿಸುತ್ತೇವೆ ತಿಳಿಸಿದ್ದಾರೆ.
ನೇತೃತ್ವವನ್ನು ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಬಸಲಿಂಗಪ್ಪ ಭೂತೆ, ಕೊಪ್ಪಳ ತಾಲೂಕಾ ಅಧ್ಯಕ್ಷ ಕರಿಯಪ್ಪ ಮೇಟಿ, ಜಿಲ್ಲಾ ಉಪಾಧ್ಯಕ್ಷ ವೀರಣ್ಣ ಹುಬ್ಬಳ್ಳಿ, ಜಿಲ್ಲಾ ಪಂಚಮಸಾಲಿ ಪಂಚ ಸೈನ್ಯ ಅಧ್ಯಕ್ಷ ಸಂಗಮೇಶ ಬಾದವಾಡಗಿ, ಗೌರವಾಧ್ಯಕ್ಷ ದೊಡ್ಡಬಸಪ್ಪ ಕಂಪ್ಲಿ, ಜಿಲ್ಲಾ ಕಾರ್ಯದರ್ಶಿ ಪ್ರಭುರಾಜ ಕರ್ಲಿ, ಸಮಾಜದ ಮುಖಂಡರಾದ ಸುರೇಶ ಶಿವನಗೌಡರು, ಶರಣಬಸನಗೌಡ ಪಾಟೀಲ್ ಹಲಿಗೇರಿ, ಆನಂದ ಉಳ್ಳಾಗಡ್ಡಿ, ಶಕುಂತಲಾಮ್ಮ ಮಾಲಿಪಾಟೀಲ್, ಗವಿಸಿದ್ದಪ್ಪ ಕರಡಿ,ಕೊಟ್ರಪ್ಪ ತೋಟದ, ಗವಿಸಿದ್ದಪ್ಪ ರ‍್ಯೇರ, ನಿಂಗಪ್ಪ ಹಳ್ಳಿಗುಡಿ, ಈಶಣ್ಣ ರ‍್ಯೇರ,ವಿರೇಶ ಬಳಿಗಾರ, ಮುತ್ತಣ್ಣನವರ್,ಬಸನಗೌಡ ತೊಂಡಿಹಾಳ, ರಾಜಶೇಖರ ನಿಂಗೋಜಿ, ಶರಣಪ್ಪ ಅಗಳಕೇರಿ ಸೇರಿದಂತೆ ಸಮಾಜದ ಮುಖಂಡರು ವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!