ಪರೀಕ್ಷಾ ಫಲಿತಾಂಶವನ್ನು ಶೀಘ್ರ ಪ್ರಕಟಿಸಿ: ಇಲಿಯಾಸ್ ನಾಲಬಂದ್

ಕೊಪ್ಪಳ: ಗುಲಬರ್ಗಾ ವಿಶ್ವವಿದ್ಯಾಲಯದ ಸ್ನಾತಕ ಪದವಿಯ ಅಂತಿಮ ವರ್ಷದ ರೆಗ್ಯುಲರ್ ಮತ್ತು ರಿಪೀಟರ್ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಶೀಘ್ರ ಪ್ರಕಟ ಮಾಡುವಂತೆ ಎಸ್.ಐ.ಓ ಜಿಲ್ಲಾಧ್ಯಕ್ಷ ಇಲಿಯಾಸ್ ನಾಲಬಂದ ಆಗ್ರಹಿಸಿದರು.
ನಗರದಲ್ಲಿ ಪತ್ರಿಕಾ ಗೋಷ್ಠಿನಡೆಸಿ ಮಾತನಾಡಿದ ಅವರು ಗುಲಬರ್ಗಾ ವಿಶ್ವವಿದ್ಯಾಲಯ ಗುಲಬರ್ಗಾ ಇದರ ಸಂಯೋಜಿತ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಸ್ನಾತಕ ಪದವಿಯ ಅಂತಿಮ ವರ್ಷದ ರೆಗ್ಯುಲರ್ ಮತ್ತು ರಿಪೀಟರ್ ನ ಪರೀಕ್ಷಾ ಫಲಿತಾಂಶ ಇನ್ನೂ ಪ್ರಕಟ ಮಾಡಿಲ್ಲ, ಇದೇ ಸಂದರ್ಭದಲ್ಲಿ ರಾಜ್ಯದ ಅನೇಕ ವಿಶ್ವವಿದ್ಯಾಲಯಗಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿ.ಇಡಿ ಕೋರ್ಸಿನ ಪ್ರವೇಶ ಪ್ರಕ್ರಿಯೆ ನಡೆಯುತ್ತಿದೆ.ಫಲಿತಾಂಶ ಪ್ರಕಟ ಆಗದೆ ಇರುವುದರಿಂದ ಅನೇಕ ವಿದ್ಯಾರ್ಥಿಗಳು ತಮ್ಮ ಮುಂದಿನ ವಿದ್ಯಾಭ್ಯಾಸದ ದಾಖಲಾತಿಯಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
೨೦೨೧-೨೨ ನೇ ಶೈಕ್ಷಣಿಕ ಸಾಲಿಗೆ ಎರಡು ವರ್ಷಗಳ ಬಿ.ಇಡಿ(ಃ.ಇಜ) ಕೋರ್ಸಿನ ವ್ಯಾಸಂಗಕ್ಕಾಗಿ ಸರ್ಕಾರಿ ಕೋಟಾದಡಿ ದಾಖಲಾತಿ ಬಯಸುವ ವಿದ್ಯಾರ್ಥಿಗಳು ಸಾರ್ವಜನಿಕ ಶಿಕ್ಷಣ ಇಲಾಖೆಯ ವೆಬ್ ಸೈಟ್ ನಲ್ಲಿ ಆನ್ಲೈನ್ ಅರ್ಜಿ ಸಲ್ಲಿಸಿದ್ದರು.ಆನ್ಲೈನ್ ನಲ್ಲಿ ಸಲ್ಲಿಕೆಯಾದ ಅರ್ಜಿಯನ್ನು ಪರಿಗಣಿಸಿ, ಮೆರಿಟ್ ನಿಯಮದನ್ವಯ ಸೀಟು ಹಂಚಿಕೆಯಾಗಿದ್ದು, ಅರ್ಹತಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರ ಅನ್ವಯ ಅಭ್ಯರ್ಥಿಗಳು ತಮ್ಮ ಮೂಲ ಪ್ರಮಾಣ ಪತ್ರಗಳ ಪರಿಶೀಲನೆಗಾಗಿ ಜಿಲ್ಲಾ ನೋಡಲ್ ಕೇಂದ್ರ/ವ್ಯವಸ್ಥಾಪಕ ಕೇಂದ್ರಕ್ಕೆ (ಅಖಿಇ/ಆIಇಖಿ) ಹಾಜರಾಗಲು ದಿನಾಂಕವನ್ನು ನಿಗದಿಪಡಿಸಿದೆ.
ಆಯ್ಕೆ ಪಟ್ಟಿಯಲ್ಲಿ ಹೆಸರಿರುವ ಅಭ್ಯರ್ಥಿಗಳು ತಮಗೆ ಸೀಟು ಹಂಚಿಕೆಯಾದ ಸಂಸ್ಥೆ/ಕಾಲೇಜಿಗೆ ದಾಖಲಾಗಲು ಇಚ್ಛಿಸುವವರು ತಮ್ಮ ಮೂಲ ದಾಖಲೆಗಳನ್ನು ಹೊಂದಿಕೆ ಮಾಡಿಕೊಳ್ಳಬೇಕಾಗಿದೆ.ಅರ್ಹತಾ ಪಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲ ಪ್ರಮಾಣ ಪತ್ರಗಳ ಪರಿಶೀಲನೆಯು ಡಿಸೆಂಬರ್ ೨ ರಿಂದ ೧೦ ನೇ ತಾರೀಖಿನವರೆಗೆ ನಡೆಸಲಾಗುತ್ತಿದೆ.ಪರಿಶೀಲನೆ ಮತ್ತು ದಾಖಲಾತಿ ಸಂದರ್ಭದಲ್ಲಿ ಸ್ನಾತಕ ಪದವಿಯ ಉತ್ತೀರ್ಣ ಪ್ರಮಾಣ ಪತ್ರವನ್ನು ನೀಡುವುದು ಕಡ್ಡಾಯವಾಗಿದೆ ಹಾಗೂ ವೇಳಾಪಟ್ಟಿ ಯಂತೆ ನಿಗದಿತ ದಿನದಂದು ತಪ್ಪದೇ ಹಾಜರಾಗಲು ತಿಳಿಸಲಾಗಿದೆ.ಈಗಾಗಲೇ ಅನೇಕ ಅಭ್ಯರ್ಥಿಗಳು ಪ್ರಮಾಣ ಪತ್ರ ಪರಿಶೀಲನೆಗೆ ಹಾಜರಾಗಿದ್ದು ಪದವಿಯ ಫಲಿತಾಂಶ ಇಲ್ಲದೆ ಸೀಟು ಹಂಚಿಕೆಯಾಗಿದ್ದರು ದಾಖಲಾತಿ ಮಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ಎಂದು ಇಲಿಯಾಸ್ ನಾಲಬಂದ ಹೇಳದರು.
ಈ ಸಂದರ್ಭ ದಲ್ಲಿ ಮಾತ ನಾಡಿದ ನೋಂದ ವಿಧ್ಯರ್ಥಿನಿ ಶಿಲ್ಪಾ ಬೋವಿ ಪದವಿ ಪರೀಕ್ಷೆಗಳು ಮುಗಿದು ೩ ತಿಂಗಳಾದರು ಪಲಿತಾಂಶ ಪ್ರಕಟಮಾಡಿಲ್ಲ ಮತ್ತು ನಾವು ವಿಧ್ಯರ್ಥಿ ವೇತನ ಪಡೆಯಲು ಕೂಡ ತೋಂದರೆ ಆಗುತ್ತದೆ ಎಂದು ತಮ್ಮ ಆಸಹಾಯಕತೆಯನ್ನು ತೋರಿಕೊಂಡಿದ್ದಾರೆ.
ತದನಂತರ ಮಾತನಾಡಿದ ಜಿ.ಐ.ಓ ಮೇಲ್‌ಉಸ್ತುವಾರಕಿ ಸಬೀಯಾ ಪಟೇಲ್ ವಿಶ್ವವಿದ್ಯಾಲಯದವರು ಪತ್ರಗಳ ಪರಿಶೀಲನೆಯ ಅವಧಿಯನ್ನು ಮುಂದೂಡಬೇಕು ಮತ್ತು ಕೂಡಲೆ ಫಲಿತಾಂಶ ಪ್ರಕಟ ಮಾಡಬೇಕು ಎಂದು ಆಗ್ರಹಿಸಿದರು.
ಶೀಘ್ರದಲ್ಲೇ ಫಲಿತಾಂಶ ಪ್ರಕಟಿಸದೆ ಇದ್ದರೆ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಲಭಿಸುವಿಕೆಯಿಂದ ವಂಚಿತರಾಗುವ ಆತಂಕದಲ್ಲಿದ್ದು ಇದರಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲಿದೆ.ವಿಶ್ವವಿದ್ಯಾಲಯವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತಕ್ಷಣವೇ ಫಲಿತಾಂಶ ಪ್ರಕಟ ಮಾಡಲು ಸಿದ್ಧತೆ ನಡೆಸಬೇಕೆಂಬುದು ವಿದ್ಯಾರ್ಥಿಗಳ ಬೇಡಿಕೆಯಾಗಿದೆ.ಸರ್ಕಾರಿ ಸಂಸ್ಥೆಗಳಾದ ವಿಶ್ವವಿದ್ಯಾಲಯಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯು ಪರಸ್ಪರ ಸಹಕಾರದ ಮತ್ತು ಹೊಂದಾಣಿಕೆಯ ವ್ಯವಹಾರದ ಮೂಲಕ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ಅವರು ಹೇಳಿದರು.
ಈಸಂದರ್ಭದಲ್ಲಿ ಎಸ್.ಐ.ಓ ಜಿಲ್ಲಾಧ್ಯಕ್ಷ ಇಲಿಯಾಸ್ ನಾಲಬಂದ, ಘಟಕಾಧ್ಯಕ್ಷ ಅಪ್ರೋಜ್ ಅಹ್ಮದ್, ಪಿ.ಆರ್.ಕಾರ್ಯದರ್ಶಿ ಎಂ.ಡಿ.ಅಖೀಲ್ ಉಡೇವು,ಸಬಿಯಾ ಪಟೇಲ್,ಸುಮೈಯಾ ಪಟೇಲ್ ಜಿಲ್ಲಾ ಸಂಚಾಲಕರು ಜಿ.ಐ.ಓ ಕೊಪ್ಪಳ.ಅನೀಸ್ ಫಾತೀಮ ಘಟಕಾಧ್ಯಕ್ಷರು ಜಿ.ಐ.ಓ,ಶಿಲ್ಪಾ ಬೋವಿ ನೊಂದ ವಿಧ್ಯರ್ಥಿನಿ ಮತ್ತು ಅಬೀಬಾ ನಾಲಬಂದ ಇತರರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!