ಪೆಟ್ರೋಲ್, ಡೀಸೆಲ್ ದರ ಏರಿಕೆ ನಿಯಂತ್ರಣಕ್ಕೆ ವೆಲ್ಫೇರ್ ಪಾರ್ಟಿ ಆಗ್ರಹ

ಕೊಪ್ಪಳ: ಡೀಸೆಲ್ ದರ ಶತಕ ಬಾರಿಸುವ ಮೂಲಕ ಬಡವರು, ಮದ್ಯಮ ವರ್ಗದ ಜನರು ಬೆಚ್ಚಿ ಬೀಳಿಸುವ ವಾತಾವರಣ ಉಂಟಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಆದಿಲ್ ಪಟೇಲ್ ಖಂಡನೆ ವ್ಯಕ್ತಪಡಿಸಿದ್ದಾರೆ.

ಬೆಲೆ ಏರಿಕೆಯನ್ನು ಕಂಡರೂ ಕಾಣದ ರೀತಿಯಲ್ಲಿ ಸರ್ವಾಧಿಕಾರಿ ಆಡಳಿತವನ್ನು ನಡೆಸುತ್ತಿದ್ದಾರೆ. ಜನರು ಜೀವನ ಸಾಗಿಸುವುದು ಅತ್ಯಂತ ಕಷ್ಟಕರವಾದ ಪರಿಸ್ಥಿತಿ ನಿರ್ಮಾಣವಾಗಿದೆ .
ಪೆಟ್ರೋಲ್ ಡೀಸೆಲ್ ಬೆಲೆ ನಿಯಂತ್ರಿಸಲು ಸಾಧ್ಯವಾಗದೆ ಜನರಿಗೆ ನಿತ್ಯವೂ ಬೆಲೆ ಏರಿಕೆಯ ಹೊರೆಯನ್ನು ಹೊರಿಸುವ ಮೂಲಕ ಕೇಂದ್ರ ಸರ್ಕಾರ ಬೇಜವಬ್ದಾರಿಯಾಗಿ ವರ್ತಿಸುತ್ತಿದೆ.

ಇನ್ನು ಎಲ್ ಪಿಜಿ ದರದಲ್ಲಿ ಪ್ರತಿ ತಿಂಗಳಿಗೆ ೨೫ ರೂ ನಂತೆ ಹತ್ತು ತಿಂಗಳಿನಲ್ಲಿ ೨೫೦ ರೂ ಏರಿಕೆ ಆದರೂ ಅದನ್ನು ತಡೆಯುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿಲ್ಲ, ಇಂದೂ ಸಹ ಮತ್ತೆ ಎಲ್.ಪಿ.ಜಿ ದರ? ೧೫ ರೂ ಏರಿಕೆಯಾಗಿದೆ
ಪೆಟ್ರೋಲ್ ಡೀಸೆಲ್ ಪ್ರತಿ ಲೀಟರ್ ಗೆ ನಿತ್ಯವೂ ಮೂವತ್ತು ಮೂವತ್ತೈದು ಪೈಸೆಯಷ್ಟು ಏರಿಕೆಯಾಗಿದೆ ಡೀಸೆಲ್ ೯೭ ರೂ ಪೆಟ್ರೋಲ್ ೧೦೬ ರೂ ಗಡಿ ದಾಟಿದೆ ಇನ್ನು ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಂತೂ ಗಗನಕ್ಕೇರಿದೆ.

ಇದನ್ನು ನಿಯಂತ್ರಿಸುವ ಪ್ರಯತ್ನವನ್ನ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರ ನಡೆಸದೆ ರೈತರ ಹೋರಾಟವನ್ನು ಹತ್ತಿಕ್ಕಲು ರೈತರ ಮೇಲೆ ವಾಹನ ಹರಿಸಿ ಕೊಲ್ಲುವ ಮೂಲಕ ಅತ್ಯಂತ ಹೇಯ ಕೃತ್ಯವನ್ನು ನಡೆಸುತ್ತಿದೆ. ಬೆಲೆಯೇರಿಕೆಯನ್ನು ನಿಯಂತ್ರಿಸಲು ವಿಫಲವಾಗಿರುವ ಮೋದಿ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ತಕ್ಷಣ ಮಧ್ಯಪ್ರವೇಶಿಸಿ ಜನರ ನೆರವಿಗೆ ಮುಂದಾಗಬೇಕು. ದರ ಏರಿಕೆ ನಿಯಂತ್ರಿಸಬೇಕು ಎಂದೂ ಆಗ್ರಹಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!