ಪೇಂಟರ್ ಕಾರ್ಮಿಕರಿಂದ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ಒದಗಿಸಲು ಶಾಸಕರಿಗೆ ಮನವಿ

 .

    ಕೊಪ್ಪಳ : ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘದಿಂದ ಸದಸ್ಯರಿಗೆ ಬಾಡಿಗೆ ಮನೆಗಳಲ್ಲಿರುವ ಪೇಂಟರ್ ಕಾರ್ಮಿಕರಿಗೆ  ಮನೆಗಳನ್ನು ನೀಡುವುದಾಗಿ ಆಶ್ವಾಸನೆ ನೀಡಿದಂತೆ ಆದಷ್ಟು ತೀವ್ರದಲ್ಲಿ  ನಮ್ಮ ಸಂಘದ ಅರ್ಹ ಪೇಂಟರ್ ಕಾರ್ಮಿಕರಿಗೆ ಆಶ್ರಯ ಯೋಜನೆಯಲ್ಲಿ ಮನೆಗಳನ್ನು ನೀಡಲು ಮನವಿ ಮಾಡಿಕೊಳ್ಳುತ್ತೇವೆ ಎಂದು ಪೇಂಟರ್ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ರಜಾಕ್ ಪೇಂಟರ್. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಂಡ್ಯ. ಜಿಲ್ಲಾ ಖಜಾಂಚಿ ಆಸಿಫ್ ಕಿಲ್ಲೇದಾರ್., ಎಸ್ ನೂರುಲ್ಲಾ ಖಾದ್ರಿ ಹಾಗೂ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್. ಎ. ಗಫಾರ್ ಮುಂತಾದವರ ನೇತೃತ್ವದಲ್ಲಿ ನೂರಾರು ಪೇಂಟರ್ ಕಾರ್ಮಿಕರ ನಿಯೋಗದಿಂದ ಮನವಿ ಶಾಸಕರಿಗೆ ಅರ್ಪಿಸಲಾಯಿತು.

    ಮನವಿಯಲ್ಲಿ ಪೇಂಟರ್ ಕಾರ್ಮಿಕರು ಜಿಲ್ಲೆಯಲ್ಲಿ ಸತತ ಬರಗಾಲದಿಂದ ಕೆಲಸಗಳಿಲ್ಲದೆ ಅಲ್ಪಸ್ವಲ್ಪ ದುಡಿಯುತ್ತಿದ್ದಾಗ ಏಕಾಏಕಿಯಾಗಿ ಉದ್ಭವವಾದ ಭಯಾನಕ ಕೋವಿಡ್-19 ಕೊರೋನಾ ಎಂಬ ಮಹಾಮಾರಿ ರೋಗ ತಡೆಯಲು ಲಾಕ್ ಡೌನ್ ಎರಡು ವರ್ಷಗಳಿಂದ ಜಾರಿ ಮಾಡುತ್ತಾ ಬಂದಿದ್ದರಿಂದ ಮೊದಲೇ ದುಡಿಮೆಯಿಲ್ಲದ ಪೇಂಟರ್ ಕಾರ್ಮಿಕರು ಡೀಸೆಲ್. ಪೆಟ್ರೋಲ್ ವಿಪರೀತ ಬೆಲೆ ಏರಿಕೆಯಾಗುತ್ತಿರುವುದದಿಂದ ಒಳ್ಳೆಣ್ಣೆ ಸೇರಿದಂತೆ ಎಲ್ಲಾ ದಿನಿಸಿ ಬೆಲೆಗಳು ಗಗನಕ್ಕೇರಿವೆ. ಇಂತಹ ಆರ್ಥಿಕ ಹೀನಾಯ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ವಂತ ಮನೆಗಳಿಲ್ಲದವರು ಮನೆಗಳಿಗೆ ಬಾಡಿಗೆ ಕಟ್ಟಲಾಗದೆ ಉಪಜೀವನ ನಡೆಸಲು ಪರದಾಡುತ್ತಿದ್ದಾರೆ. ಪೇಂಟರ್ ಕಾರ್ಮಿಕರಿಗೆ ಆಶ್ರಯ ಯೋಜನೆಯಡಿ ಮನೆಗಳನ್ನು ಒದಗಿಸಿ. ಬಾಡಿಗೆ ಮನೆಗಳ ಮಾಲೀಕರಿಂದ ಆಗುವ ಕಿರುಕುಳಗಳಿಂದ ಮುಕ್ತಗೊಳಿಸಲು ಕೋರುತ್ತೇವೆಂದು ತಿಳಿಸಿದರು.

     ಈ ಸಂದರ್ಭದಲ್ಲಿ ನಗರಸಭೆಯ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡ ಗವಿಸಿದ್ದಪ್ಪ ಚಿನ್ನೂರು ಪೇಂಟರ್ ಕಾರ್ಮಿಕರ ಬಾಡಿಗೆ ಮನೆಗಳ ಸಮಸ್ಯೆ ಕರಿತು ಶಾಸಕ ಕೆ, ರಾಘವೇಂದ್ರ ಹಿಟ್ನಾಳ ಸವಿಸ್ತಾರವಾಗಿ ವಿವರಿಸಿದರು.

ಮನವಿ ಸ್ವೀಕರಿಸಿದ ಶಾಸಕ ಕೆ. ರಾಘವೇಂದ್ರ ಬಿ. ಹಿಟ್ನಾಳ್ ಮಾತನಾಡಿ ಸದ್ಯದ ಪರಿಸ್ಥಿತಿಯಲ್ಲಿ ಮನೆಗಳು ಹಂಚಿಕೆ ಸಾಧ್ಯತೆ ಕಡಿಮೆ ಇದ್ದು. ಚಿಕ್ಕ ಸಿಂದೋಗಿ ರಸ್ತೆಯಲ್ಲಿ ಅಥವಾ ಇನ್ನಿತರ ಕಡೆ ನಿವೇಶನಗಳನ್ನು ಖಚಿತವಾಗಿ ಒದಗಿಸಲು ನಾನು ಮತ್ತು ನಗರಸಭೆ ಅಧ್ಯಕ್ಷರು  ಪ್ರಯತ್ನ ಮಾಡುತ್ತೇವೆ. ಮುಂದಿನ ದಿನಗಳಲ್ಲಿ ಮನೆಗಳು ನಿರ್ಮಿಸಿಕೊಡುವ ಬಗ್ಗೆ ಪ್ರಯತ್ನ ಮಾಡೋಣ ಎಂದು ಹೇಳಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!