ಪೇರಲ ಸೀಬೆ ಹಣ್ಣಿನಲ್ಲಿ ಬರುವ ಪ್ರಮುಖ ಕೀಟಗಳು ಹಾಗೂ ಅವುಗಳ ನಿರ್ವಹಣಾ ಕ್ರಮಗಳು


1.ಕಜ್ಜಿ ತಿಗಣಿ (ಟೀಸೊಳ್ಳೆ) ಇದರ ಹಾನಿಯ ಲಕ್ಷಣಗಳು ಕಜ್ಜಿ ತಗಣಿ ಟೀಸೊಳ್ಳೆ ಇದರ ಹಾನಿಯ ಲಕ್ಷಣಗಳು ಅಪ್ಸರೆ ಮತ್ತು ಪ್ರೌಡತೆ ತಿಗಣೆಗಳು ಎಲೆಗಳಿಂದ ಹಳೆಯದಾದ ರೆಂಬೆಗಳಿಂದ ಅಪ್ಸರೆ ಮತ್ತು ಪ್ರೌಡ ತಿಗಣೆಗಳು ಎಲೆಗಳಿಂದ ಎಳೆಯದಾದ ರೆಂಬೆಗಳಿಂದ ಮತ್ತು ಹಣ್ಣುಗಳಿಂದ ರಸ ಹೀರಿ ರಸ ಹೀರಿದ ಸ್ಥಳದಲ್ಲಿ ಕಂದು ಬಣ್ಣದ ಚುಕ್ಕೆಯಾಗುತ್ತದೆ. ಬಾಧೆಗೊಳಗಾದ ಕಾಯಿಗಳ ಮೇಲೆ ಕಂದು ಬಣ್ಣದ ಕಜ್ಜಿ ಆಗಿ ಕಾಯಿಗಳು ಬಿರುಸಾಗಿ ಕೆಳಗೆ ಬೀಳುತ್ತವೆ.
ಇದರ ನಿರ್ವಹಣೆ ಹೂ ಬಿಡುವ ಸಮಯದಲ್ಲಿ ಗಿಡಗಳಿಗೆ 0.5 ಮಿಲೀ ಸೈಪ ರ್ಮೆಥ್ರಿನ್ 25EC ಅಥವಾ ಅಥವಾ 1.7 ಮೀ.ಲಿ ಡೈಮಿಥೊಯೇಟ್ 30EC ಅಥವಾ 4gm ಕಾರ್ಬರಿಲ್ 50WP ಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿದರೆ ಈ ಕೀಟವನ್ನು ನಿಯಂತ್ರಿಸಬಹುದಾಗಿದೆ. ಬಾಧೆ ಮತ್ತೆ ಕಂಡುಬಂದಲ್ಲಿ ಇದೇ ಸಿಂಪರಣೆಯನ್ನು ಪುನ ಕೈಗೊಳ್ಳಬೇಕು.
2.ಹಿಟ್ಟು ತಿಗಣೆ ಇದರ ಹಾನಿಯ ಲಕ್ಷಣಗಳು ಬಳಿ ಹಿಟ್ಟಿನಂಥ ತಿಗಣೆಗಳು ಗುಂಪಿನಲ್ಲಿದು ಎಲೆ ಮತ್ತು ಕಾಯಿಗಳಿಂದ ರಸ ಹೀರಿ ಇಂಥಹ ಭಾಗಗಳಿಂದ ಬೂಷ್ಟು ಬೆಳವಣಿಗೆ ಕಂಡುಬರುತ್ತದೆ.
ಇದರ ನಿರ್ವಹಣೆ ಹೂ ಬಿಡುವ ಸಮಯದಲ್ಲಿ ಗಿಡಗಳಿಗೆ 1ಮಿ ಲೀ ಡೈಕ್ಲೋರ್ ವಾಸ್ 76EC ಅಥವಾ 1.7ml ಡೈಮಿಥೊಯೇಟ್ 30EC ಅಥವಾ 4gm ಕಾರ್ಬರಿಲ್ 50WP ಯನ್ನು ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕೀಟನಾಶಕಗಳ ಜೊತೆಗೆ ಮೀನು ಎಣ್ಣೆ ಸಾಬೂನುನ್ನು ಪ್ರತಿ ಲೀಟರ್ ನೀರಿಗೆ 5ಗ್ರಾಂ ನಂತೆ ಬೆರೆಸಬೇಕು.

ಮುಂದಿನ ಕೀಟಗಳನ್ನು ಮುಂದಿನ ಸಂದೇಶದಲ್ಲಿ ತಿಳಿಸಲಾಗುವದು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!