ಪೌರಕಾರ್ಮಿಕ ಸಿಬ್ಬಂದಿಗಳ ಕೆಲಸದಲ್ಲಿ ಕೈ ಜೋಡಿಸಿದ ಗ್ರಾಪಂ ಸದಸ್ಯ ಅಮರಗಟ್ಟಿ

ಅಖಿಲ ವಾಣಿ ಸುದ್ದಿ
ಯಲಬುರ್ಗಾ;ಗ್ರಾಮ ಪಂಚಾಯತಿ ಸದಸ್ಯನೊಬ್ಬ ತಮ್ಮ ಗ್ರಾಮದ ಪೌರಕಾರ್ಮಿಕರು ಕೈಗೊಳ್ಳುತ್ತಿದ್ದ ಸ್ವಚ್ಚತ ಕಾರ್ಯದಲ್ಲಿ ಅವರ ಜತೆ ಕೈಜೋಡಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.ಹೌದು.ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಪಂ ಸದಸ್ಯ ಶರಣಕುಮಾರ ಅಮರಗಟ್ಟಿ ಅವರು,ಕಳೇದ ಅವಧಿಯಲ್ಲಿ ಗ್ರಾಪಂ ಸದಸ್ಯರಾಗಿ ಆಯ್ಕೆಗೊಂಡವರು.ಇವರು ಇದಕ್ಕೂ ಮೊದ್ಲು ಕನ್ನಡಪರ ಸಂಘಟನೆಗಳಲ್ಲಿ ಗುರ್ತಿಸಿಕೊಳ್ಳುವ ಮೂಲಕ ಪತ್ರಕರ್ತರಾಗಿ ಹಲವಾರು ವರ್ಷಗಳ ಕಾಲ ಯಲಬುರ್ಗಾದಲ್ಲಿ ಸೇವೆ ಸಲ್ಲಿಸಿದವರು.ಜನರ ಸೇವೆ ಮಾಡಿದ್ದರಿಂದ ಗ್ರಾಮಸ್ಥರ ಆಸೆಯಂತೆ ಚಿಕ್ಕಮ್ಯಾಗೇರಿ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಆಯ್ಕೆಗೊಂಡರು.
ತಮ್ಮ ಸ್ವಗ್ರಾಮ ಚಿಕ್ಕಮ್ಯಾಗೇರಿಯಲ್ಲಿ ಗ್ರಾಪಂ ಪೌರಕಾರ್ಮಿಕರು ಗ್ರಾಮದಲ್ಲಿ ರವಿವಾರ ಬೆಳಿಗ್ಗೆ ರಸ್ತೆಯಲ್ಲಿ ಕಸ ಗೂಡಿಸುವ ಜತೆ ಸ್ವಚ್ಚತೆ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ನೂತನ ಗ್ರಾಪಂ ಸದಸ್ಯ ಶರಣಕುಮಾರ ಅಮರಗಟ್ಟಿ ಕೂಡಾ ಅವರ ಕಾರ್ಯ ಚಟುವಟಿಕೆಯಲ್ಲಿ ತಮ್ಮದು ಒಂದು ಸೇವೆ ಇರಲಿ ಎನ್ನುವ ದೃಷ್ಠಿ ಇಟ್ಟುಕೊಂಡು ಗ್ರಾಪಂ ಪೌರ ಕಾರ್ಮಿಕರು ಗ್ರಾಮದಲ್ಲಿ ಕಸ ಗೂಡಿಸುವದು,ರಸ್ತೆ ಸ್ವಚ್ಚತೆ,ರಸ್ತೆಯಲ್ಲಿ ಹರಿಯುತ್ತಿದ್ದ ಕೊಳಚೆ ನೀರಿಗೆ ಮಣ್ಣನ್ನು ಹಾಕುತ್ತಿದ್ದಾಗ ಅವರ ಜತೆ ತಾವು ಸ್ವತ; ನಿಂತು ರಸ್ತೆಯಲ್ಲಿ ಕಸಗೂಡಿಸುವುದು.ರಸ್ತೆಯಲ್ಲಿ ನಿಂತಿದ್ದ ಕೊಳಚೆ ನೀರಿಗೆ ಮಣ್ಣನ್ನು ತಂದು ರಸ್ತೆ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗ್ರಾಮದ,ವಾರ್ಡಿನ ಸೇವಕನಾಗಿ ಕರ್ತವ್ಯ ನಿರ್ವಹಿಸುವ ಮೂಲಕ ಗ್ರಾಪಂ ಸದಸ್ಯ ಶರಣಕುಮಾರ ಅಮರಗಟ್ಟಿ ಸಮಾಜಕ್ಕೆ ಮಾದರಿ ಸದಸ್ಯರಾಗಿ ಮೆಚ್ಚಿಗೆ ಪಡೆದುಕೊಂಡರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!