ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮದ ಉದ್ಘಾಟನೆ
ಮೊಳಕಾಲ್ಮೂರು : ಕೋನಸಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಂಚಾಯಿತಿ ಕಾರ್ಯಾಲಯದ ಹತ್ತಿರ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಗಂಗಮ್ಮ ಹಾಗೂ ಅಭಿವೃದ್ಧಿ ಅಧಿಕಾರಿಗಳಾದ ಎಸ್ ಬಾಂಡ್ರಾವಪ್ಪ ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಹಾಗೂ ಎಸ್ ಡಿಎಂಸಿ ಅಧ್ಯಕ್ಷರಾದ ಪಿ ಪಾಲಯ್ಯ ಪಂಚಾಯಿತಿ ಗ್ರಾ ಪಂ ಸದಸ್ಯರಾದ ಸಿ ಟಿ ತಿಪ್ಪೇಸ್ವಾಮಿ ಪಿ ಅಣ್ಣಪ್ಪ ಸ್ವಾಮಿ ಜಿ ವೀರೇಶ ಗ್ರಾಮದ ಮುಖಂಡರಾದ ಜಿಎನ್ ಜಗದೀಶ, ರಾಮಾಂಜನೇಯ, ಮಲ್ಲಯ್ಯ, ಟ್ಯಾಂಕರ್ ಮಲ್ಲಯ್ಯ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಅಂಗನವಾಡಿ ಕಾರ್ಯಕರ್ತರಾದ ಉಡೇವು ಗ್ರಾಮದ ಶಂಷಾದ್ ಬೇಗಂ, ಲಲೀತಮ್ಮ, ಸುವರ್ಣಾಮ್ಮ, ಗೀತಾಮ್ಮ, ರತ್ನಮ್ಮ, ಇಂದ್ರಮ್ಮ, ಮಹಾದೇವಿ, ಚಂದ್ರಮ್ಮ, ಕರಿಬಸಮ್ಮ, ಸುಮಂಗಳಮ್ಮ ಮತ್ತು ಆಶಾ ಕಾರ್ಯಕರ್ತರು ಮತ್ತು ಸಹಾಯಕರು ಗ್ರಾಮ ಪಂಚಾಯ್ತಿ ಸಿಬ್ಬಂದಿಯವರಾದ ಎಸ್ ಡಿಎ ಪಾಪಣ್ಣ, ಎರಿಸ್ವಾಮಿ, ಸೋಮಶೇಖರ, ಜಗದೀಶ, ಆನಂದ, ರವಿ ಹಾಗೂ ಇನ್ನು ಮುಂತಾದವರು ಹಾಜರಿದ್ದರು.