ಪ್ರಗತಿ ಪರಿಶೀಲನಾ ಸಭೆ:ವಿವಿಧ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಸಚಿವ ಹಾಲಪ್ಪ ಆಚಾರ್

ಯಲಬುರ್ಗಾ: ಪಟ್ಟಣದ ಕಂದಾಯ ಇಲಾಖೆಯ ಸಭಾ ಭವನದಲ್ಲಿ  ಸೋಮವಾರ ಗಣಿ ಮತ್ತು ಭೂ ವಿಜ್ಞಾನ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್  ರವರ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ  ತಾಲೂಕು ಆರೋಗ್ಯ ಇಲಾಖೆಯ ಅಧಿಕಾರಿ ಮಂಜುನಾಥ ಬ್ಯಾಲಹುಣಶಿ ತಾಲೂಕಿನ ವಿವಿಧ ಗ್ರಾಮಗಳಾದ,ಹುಲೆಗುಡ್ಡ,ಗಾಣದಾಳ,ಹಿರೇವಂಕಲಕುಂಟಾ,ತಾಳಕೇರಿ ಇತರೆ ಗ್ರಾಮಗಳಲ್ಲಿ ಕರೋನಾ ಲಸಿಕೆ ಪಡೆಯಲು ಜನರು ಹಿಂದೆಟು ಹಾಕುತ್ತಿದ್ದಾರೆಂದು  ಸಭೆಯ ಗಮನಕ್ಕೆ ತಂದರು,ನಂತರ ಸಚಿವರು ಕರೋನಾ ಲಸಿಕೆ ನೀಡಲು ತಹಶಿಲ್ದಾರ ಮತ್ತು ಇ.ಇ.ಒ ಮತ್ತು ಅರೋಗ್ಯ ಒಟ್ಟುಗೂಡಿ ಲಸಿಕೆ ಕುರಿತು ಜಾಗೃತಿ ಮೂಡಿಸಿ ಲಸಿಕೆ ಹಾಕಿಸಿಕೊಳ್ಳಲು ಜನರ ಮನವೊಲಿಸಿ ಬೇಕು ಕರೋನಾ ನಿವಾರಣೆ ಮಾಡಬೇಕೆಂದರು.

ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಕೋರತೆ ತಾಲೂಕಿನಾದ್ಯಂತ ಕೇಳಿ ಬರುತ್ತಿದೆ ತಾಲೂಕಿನ ಯಾವ ಯಾವ ಶಾಲೆಗಳಲ್ಲಿ ಎಷ್ಟು ಶಿಕ್ಷಕರ ಕೋರತೆ ಇದೆ ಎಂಬುವುದನ್ನು ತಿಳಿಸಿ ಮತ್ತು ಶಿಕ್ಷಕರ ಕೋರತೆ ಯಾಗದಂತೆ ಕ್ರಮಕೈಗೋಳ್ಳಬೇಕು  ಕೆಲವೂ ಶಾಲೆ ಗಳಲ್ಲಿ ತಡೆಗೋಡೆ ಮತ್ತು ಅಡುಗೆ ಕೊಠಡಿ ನಿರ್ಮಾಣ ಮಾಡಿಕೊಳ್ಳಲು ಉದ್ಯೋಗ ಖಾತ್ರಿ ಯೋಜನೆಯಡಿ ಬಳಕೆ ಮಾಡಿಕೊಳ್ಳಬೇಕು ಇ.ಇ.ಒ ಎಲ್ಲಾ .ಗ್ರಾಮ ಪಂಚಾಯಿತಿಗಳಿಗೆ ಸೂಚಿಸಬೆಕೆಂದರು,ನಂತರ ಪಂಚಾಯತ್ ರಾಜ್ ಇಲಾಖೆಯ ವರನ್ನು ತರಾಟೆಗೆ ತೆಗೆದು ಕೊಂಡು ಬಳಗೇರಿ ಗ್ರಾಮದಲ್ಲಿ ನಿರ್ಮಿಸಿದ ರಸ್ತೆ ಸಂಪೂರ್ಣ ಕಳಪೆ ಮಟ್ಟದ ಕಾಮಗಾರಿಯಾಗಿದೆ,ಗುಣಮಟ್ಟದ ಕಾಮಗಾರಿ ನಿರ್ಮಿಸಿಕೊಡಲು. ಗುತ್ತಿಗೆದಾರರಮೇಲೆ  ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಜನರಿಗೆ ಗುಣಮಟ್ಟದ ರಸ್ತೆ ನಿರ್ಮಿಸಿ ಕೊಡ ಬೇಕೆಂದರು ತಾಲೂಕಿನಾದ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ಮಿಷನ್ ಯೋಜನೆ  ಕಾಮಗಾರಿ ಬಹುತೇಕ  ಮುಕ್ತಾಯದ ಹಂತಕ್ಕೆ ತಲುಪಿದೆ ಆದರೆ ಇಲಾಖೆಯವರ ನಿರ್ಲಕ್ಷದಿಂದ ಕಾಮಗಾರಿ ಕಳಪೆಯಾದ ವರದಿ ಪತ್ರಿಕೆಗಳಲ್ಲಿ ಬಂದಿದೆ ಆದ್ದರಿಂದ ಕಳಪೆ ಕಾಮಗಾರಿಗೆ ಅವಕಾಶ ನಿಡಬಾರದು ಮತ್ತು ಪ್ರತಿ ಮನೆ ಮನೆಗೆ ಗುಣಮಟ್ಟದ ಪೈಪ್ಲೈನ್   ಜೋಡಣೆ ಮಾಡಬೇಕು ಪೈಪ್ಲೈನ್ ಕಾಮಗಾರಿಗೆ ಸಿ.ಸಿ.ರಸ್ತೆ ಹಗೆದು ಹಾಳು ಮಾಡಿದ್ದಿರಿ ಪುನಃ ಸಿ.ಸಿ.ಹಾಕಿಸಲು ಮುಂದಾಗಬೆಕೆಂದರು ಕಳಪೆ , ಕಾಮಗಾರಿ  ಮಾಡಿದರೆ  ನಿಮ್ಮ ಮೇಲೆ ಕ್ರಮಕೈಗೊಳ್ಳಬೇಕಾಗುತ್ತದೆಂದು ಎಚ್ಚರಿಕೆ ನಿಡಿದರು.

ತಾಲೂಕಿನಲ್ಲಿ ಕೆಇಬಿ ಇಲಾಖೆಯವರು ಇದ್ದಾರೊ ಇಲ್ಲವೊ ತಿಳಿಯದಾಗಿದೆ ರೈತರ ಪಂಪಸೇಟ್ ಗಳಿಗೆ ದಿನ ನಿತ್ಯ 7 ತಾಸು ತ್ರೀಫೇಸ್ ವಿದ್ಯುತ್ ಕೊಡಬೇಕು ಆದರೆ ಪದೆ ಪದೆ ಲೋಡ್ ಶೇಡ್ಡಿಂಗ್ ಮಾಡುತ್ತಿದ್ದಿರಿ ಎಂದು  ಜೆಸ್ಕಾಂ ಅಧಿಕಾರಿಗಳಿಗೆ ಛೇಡಿಸಿದರು. ಸಭೆಯಲ್ಲಿ ಯಲಬುರ್ಗಾ ತಹಶಿಲ್ದಾರ ಶ್ರೀಶೈಲ್ ತಳವಾರ ಕುಕನೂರು ತಾಲೂಕು ತಹಶಿಲ್ದಾರ ಕಿರಣ್ ಕುಮಾರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸೋಮಶೇಖರ್ ಬಿರಾದಾರ ,ಸೇರಿದಂತೆ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೋಂಡಿದ್ದರು,

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!