ಪ್ರತಿಯೊಬ್ಬರು ಪರಿಸರವನ್ನು ಪ್ರೀತಿಸೋಣ, ಬೆಳೆಸೋಣ, ಸಂರಕ್ಷಿಸೋಣ

ಮೊಳಕಾಲ್ಮುರು . ಪ್ರತಿಯೊಬ್ಬರು ಪರಿಸರವನ್ನು ಪ್ರೀತಿಸೋಣ, ಬೆಳೆಸೋಣ, ಸಂರಕ್ಷಿಸೋಣ ಎಂದು ಮೊಳಕಾಲ್ಮುರು ಮಂಡಲ ಬಿ.ಜೆ.ಪಿ. ಮಹಿಳಾ ಮೋರ್ಚಾ ಅಧ್ಯಕ್ಷೆ ಸರ್ವಮಂಗಳ ಚಂದ್ರಶೇಖರ ತಿಳಿಸಿದರು.
ಪಟ್ಟಣದ ಭಾಗ್ಯಜ್ಯೋತಿನಗರದಲ್ಲಿ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಸಸಿಗಳನ್ನು ನೆಟ್ಟು ಮಾತನಾಡಿದರು.
ಮರ ಗಿಡಗಳನ್ನು ಬೆಳಸುವುದರಿಂದ ಉತ್ತಮವಾದ ಗಾಳಿ, ನೀರು, ಮಳೆ, ಭೂಮಿಯ ಫಲವತ್ತತೆಯನ್ನು ನಾವು ಕಾಣಬಹುದು. ನಮ್ಮ ಸುತ್ತಮುತ್ತಲಿನಲ್ಲಿ ಪರಿಸರ ಬೆಳಸುವುದರಿಂದ ಸಮಯಕ್ಕೆ ಸರಿಯಾಗಿ ಮಳೆಯಾಗುವುದು ಇದರಿಂದ ಉತ್ತಮ ಬೆಳೆಗಳನ್ನು ಬೆಳೆಸಲು ಸಾಧ್ಯ.
ಇಂದಿನ ದಿನಗಳಲ್ಲಿ ಕೊರಾನ ಎಂಬ ವೈರಸ್ಸಿನಿಂದ ಇಡೀ ದೇಶದ ಜನ ಆಕ್ಸಿಜನ್ ಕೊರತೆಯಿಂದ ತತ್ತರಿಸಿದ್ದಾರೆ. ಇದರಿಂದ ಮನೆಗೊಂದು ಮರ ಬೆಳಸಿದರೆ ಉತ್ತಮ ಗಾಳಿ ದೊರೆತು ಆಕ್ಸಿಜನ್ ಕೊರತೆ ನೀಗಿಸಬಹುದು. ಗಿಡ ಮರಗಳನ್ನು ಕಡಿದು ಕಾಡು ನಾಶಪಡಿಸುವುದರಿಂದ ಪ್ರಕೃತಿಯಲ್ಲಿ ಅಸಮತೋಲನವಾಗಿ ಸಕಾಲದಲ್ಲಿ ಮಳೆ ಬರುವುದಿಲ್ಲ ಇದರಿಂದ ಸಕಲ ಜೀವರಾಶಿಗಳು ತೊಂದರೆ ಅನುಭವಿಸಬೇಕಾಗುತ್ತದೆ. ಆದ್ದರಿಂದ ನಾವೆಲ್ಲರೂ ಪರಿಸರವನ್ನು ಉಳಿಸೋಣ ಮುಂದಿನ ಪೀಳಿಗೆಯನ್ನು ರಕ್ಷಿಸೋಣ ಪರಿಸರ ಸಂರಕ್ಷಣೆಯಾಗದಿದ್ದರೆ ಉಳಿಗಾಲವಿಲ್ಲ ಎಂದು ತಿಳಿಸಿದರು.
ಕೊರೋನಾ ಸೊಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿ.ಜೆ.ಪಿ. ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಗೀತಾ ವಿವೇಕಾನಂದ ಆದೇಶದ ಮರೆಗೆ ಕಾರ್ಯಕರ್ತರು ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ತಮ್ಮ ತಮ್ಮ ಮನೆಗಳ ಸುತ್ತಮುತ್ತ ಗಿಡಗಳನ್ನು ನೆಡುವ ಕಾರ್ಯಕ್ರಮ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಹಿಳಾ ಮೊರ್ಚಾ ಜಿಲ್ಲಾ ಉಪಾಧ್ಯಕೆ ಈರಮ್ಮ, ಕೃಷ್ಣಮೂರ್ತಿ, ಪಾರ್ವತಿ ವಾಂಜ್ರೆ, ನಿರ್ಮಲಮ್ಮ ಟಿ,ಟಿ. ರತ್ನಮ್ಮ, ಹೇಮಾವತಿ, ಶ್ವೇತಾ, ಪವನ್, ದರ್ಶನ್ ಮುಂತಾದವರು ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!