ಪ್ರಮಾಣಿಕತೆಗೆ ಸಂದ ಗೌರವ : ಕೇಂದ್ರ ಸಚಿವ ಭಗವಂತ ಖೂಬಾ

ಕೊಪ್ಪಳ, ಅ.21: ನಿರಂತರವಾಗಿ ಪಕ್ಷದ ಸಂಘಟನೆಯಲ್ಲಿ ತಮಗೆ ವಹಿಸಿದ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ಪ್ರಾಮಾಣಿಕವಾಗಿ ಮಾಡುವ ಹಾಗೂ, ಸರಳ ಸಜ್ಜನಿಕೆಯ ವ್ಯಕ್ತಿಯಾದ ಚಂದ್ರಶೇಖರಗೌಡ ಜಿ ಪಾಟೀಲ ಹಲಗೇರಿ ಅವರನ್ನು ಪಕ್ಷವು ಗುರುತಿಸಿ ಈ ಮಹತ್ತರವಾದ ಜವಾಬ್ದಾರಿಯನ್ನು ನೀಡಿ ಪ್ರಮಾಣಿಕತೆಗೆ ಸಂದ ಗೌರವವಾಗಿದೆ ಎಂದು ನೂತನ ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಮತ್ತು ರಾಸಾಯನಿಕ, ರಸಗೊಬ್ಬರ ಖಾತೆ ರಾಜ್ಯ ಸಚಿವರಾದ ಭಗವಂತ ಖೂಬಾ ಅವರು ಹೇಳಿದರು. ಅವರು ನಗರದ ಶ್ರೀ ಶಿವಶಾಂತ ವೀರ ಮಂಗಲ ಭವನದಲ್ಲಿ ನಡೆದ ಜನಾಶೀರ್ವಾದ ಯಾತ್ರೆಯ ಸಮಾರೋಪ ಸಮಾವೇಶದ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಬಳ್ಳಾರಿ ವಿಭಾಗದ ಸಹ ಪ್ರಭಾರಿಯಾಗಿ ನೇಮಕವಾದ ಚಂದ್ರಶೇಖರಗೌಡ ಜಿ ಪಾಟೀಲ ಹಲಗೇರಿ ಅವರನ್ನು ಬಿಜೆಪಿ ಜಿಲ್ಲಾ ಘಟಕದಿಂದ ಆತ್ಮೀಯವಾಗಿ ಸನ್ಮಾನಿಸಿ
ಮಾತನಾದುತ್ತಿದ್ದರು. ಅವರು ಈ ದಿಶೆಯಲ್ಲಿ ಅವರು ಬಳ್ಳಾರಿ ವಿಭಾಗದ ಜಿಲ್ಲೆಗಳಲ್ಲಿ ಪಕ್ಷದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿ ಪಕ್ಷ ಸಂಘಟನೆಯಲ್ಲಿ ಯಶಸ್ವಿ ನಾಯಕರಾಗಲಿ, ಮುಂದಿನ ದಿನಗಳಲ್ಲಿ ಅವರ ರಾಜಕೀಯ ಭವಿಷ್ಯ ಉಜ್ವಲದಿಂದ ಕೂಡಿರಲೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಹಾಲಪ್ಪ ಆಚಾರ್, ಸಂಸದ ಕರಡಿ ಸಂಗಣ್ಣ, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಕನಕಗಿರಿ ಶಾಸಕ ಬಸವರಾಜ ದಡೇಸುಗೂರು, ವಿಧಾನ ಪರಿಷತ್ ಸದಸ್ಯ ಅಶ್ವತ್ಥ ನಾರಾಯಣ, ರಾಜ್ಯ ಕಾರ್ಯದರ್ಶಿಗಳಾದ ಹೇಮಲತಾ ನಾಯಕ, ಜಗದೀಶ್ ಹಿರೇಮನಿ, ವಿಭಾಗ ಪ್ರಭಾರಿ ಸಿದ್ದೇಶ ಯಾದವ್, ಜಿಲ್ಲಾ ಪ್ರಭಾರಿ ಪ್ರಭುರಾಜ ಕಪ್ಪಗಲ್, ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ ಶ್ರೇಷ್ಠಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ನವೀನಕುಮಾರ ಗುಳಗಣ್ಣವರ್, ರಮೇಶ ನಾಡಿಗೇರ, ರಾಷ್ಟ್ರೀಯ ಪರಿಷತ ಸದಸ್ಯ ಸಿ.ವಿ ಚಂದ್ರಶೇಖರ, ಕೆಡಿಪಿ ಸದಸ್ಯ ಅಮರೇಶ ಕರಡಿ, ಜಿಲ್ಲಾ ಮಾಧ್ಯಮ ಸಂಚಾಲಕ ಬಿ.ಗಿರೀಶಾನಂದ ಜ್ಞಾನಸುಂದರ ಹಾಗೂ ಅನೇಕರು ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!