ಬಿಜೆಪಿ ನಗರ ಮಂಡಲ ಕೊಪ್ಪಳ, ಆರೋಗ್ಯ ಸ್ವಯಂ ಸೇವಕ ಅಭಿಯಾನದ ಕಾರ್ಯಗಾರ

ಕೊಪ್ಪಳ : ಆರೋಗ್ಯ ಸ್ವಯಂ ಸೇವಕ ಅಭಿಯಾನದ ಕಾರ್ಯಗಾರವು ಇಂದು ದಿನಾಂಕ 11-09-2021 ರಂದು ಬೆಳಿಗ್ಗೆ 11:00 ಗಂಟೆಗೆ ಕೊಪ್ಪಳ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಜರುಗಿತು.ಈ ಒಂದು ಕಾರ್ಯಕ್ರಮದಲ್ಲಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸುನಿಲ್ ಹೆಸರುರೂ ನಗರ ಮಂಡಲ ಅಧ್ಯಕ್ಷರು ವಹಿಸಿದ್ದರು,ಹಾಗೂ ಶ್ರೀ ಅಮರೇಶ ಕರಡಿ ಬಿಜೆಪಿ ಮುಖಂಡರು, ಮತ್ತು ಶ್ರೀ ನವೀನ್ ಗುಳಗಣ್ಣನವರು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಇದ್ದರು.
ಈ ಕಾರ್ಯಾಗಾರದ ಬಗ್ಗೆ ಎಲ್ಲರೂ ಸವಿಸ್ತಾರವಾಗಿ ವಿವರಿಸಿದರು.ಮತ್ತು ಈ ಕಾರ್ಯಗಾರವನ್ನು ಮುಂದೆ ಶಕ್ತಿಕೇಂದ್ರ ಮತ್ತು ಬೂತ್ ಮಟ್ಟದಲ್ಲಿ ನಡೆಸಲು ಮುಖಂಡರು ತಿಳಿಸಿದರು.
ಈ ಒಂದು ಆರೋಗ್ಯ ಸ್ವಯಂ ಸೇವಕ ಅಭಿಯಾನದ ಸಂಚಾಲಕರಾಗಿ ಶ್ರೀ ವಿಜೆಯೆಂದ್ರ ಬಿಸರಳ್ಳಿ ,ಸಹ ಸಂಚಾಲಕರಾಗಿ ಶ್ರೀ ಮಹೇಶ ಕಂದಾರಿ ಇವರನ್ನು ನಗರ ಮಂಡಲ ವತಿಯಿಂದ ನೇಮಕ ಮಾಡಲಾಗಿದೆ.
ಈ ಒಂದು ಕಾರ್ಯಕ್ರಮದಲ್ಲಿ ನಗರ ಮಂಡಲದ ಎಲ್ಲಾ ಪದಾಧಿಕಾರಿಗಳು, ನಗರ ಮಂಡಲದ ಎಲ್ಲಾ ಮೋರ್ಚಾದ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರು, ಶಕ್ತಿಕೇಂದ್ರ ಪ್ರಮುಖರು ಮತ್ತು ಪಕ್ಷದ ಹಿರಿಯರು ಭಾಗವಹಿಸಿದ್ದರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!