ಬಿಜೆಪಿ ಸದಸ್ಯರ ವಾರ್ಡಿಗೆ ಅನುದಾನ ನೀಡಲು ಸಿಎಂಗೆ ಮನವಿ

ಕೊಪ್ಪಳ : ನಗರಸಭೆಯ ೧೧ ಬಿಜೆಪಿ ಸದಸ್ಯರ ವಾರ್ಡಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಅನುದಾನವನ್ನು ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಕೊಪ್ಪಳ ನಗರಸಭೆಯ ಬಿಜೆಪಿ ಸದಸ್ಯರು ಮನವಿ ಸಲ್ಲಿಸಿದರು.
ಅವರು ಗುರುವಾರದಂದು ಜನಸ್ವರಾಜ್ ಸಮಾವೇಶಕ್ಕೆ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮನವಿಯಲ್ಲಿ ವಾರ್ಡಗಳಲ್ಲಿ ಚರಂಡಿ ದುರಸ್ತಿ ಕಾರ್ಯ, ಕುಡಿಯುವ ನೀರಿನ ವ್ಯವಸ್ಥೆ ಮತ್ತು ಓಣಿಯ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾರ್ಯಗಳು ಹಾಗೂ ವಿದ್ಯುತ್ ಕಂಬಗಳು ಸಂಪೂರ್ಣ ಹದಗೆಟ್ಟಿರುತ್ತವೆ, ಕೊಪ್ಪಳ ವಿಧಾನಸಭೆ ಕ್ಷೇತ್ರಕ್ಕೆ ಕಾಂಗ್ರೆಸ್ ಶಾಸಕರು ಮತ್ತು ಕಾಂಗ್ರೆಸ್ ನಗರಸಭೆ ಸದಸ್ಯರ ಅಧಿಕಾರ ಇರುವುದರಿಂದ ಬಿ.ಜೆ.ಪಿ ಸದಸ್ಯರ ವಾರ್ಡಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಪಟ್ಟಿರುತ್ತವೆ . ನಮ್ಮದೇ ಆದಂತಹ ಸರ್ಕಾರಗಳು ಕೇಂದ್ರ ಮತ್ತು ರಾಜ್ಯ ಸರ್ಕಾರ ಇದ್ದರು ಕೂಡ ಅಭಿವೃದ್ಧಿ ಎಂಬುವುದು ನಮ್ಮ ವಾರ್ಡಿಗಳಲ್ಲಿ ಶೂನ್ಯವಾಗಿದೆ . ನಮ್ಮನ್ನು ಚುನಾಯಿಸಿ ತಂದಂತಹ ವ್ಮತದಾರರಿಗೆ ಉತ್ತರ ನೀಡದಂತಾಗಿದೆ ಪ್ರತಿಯೊಂದು ವಾರ್ಡಿಗೆ ಅನುದಾನವನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಬಿಜೆಪಿ ಸದಸ್ಯರಾದ ಸೋಮಣ್ಣ ಹಳ್ಳಿ, ಸರ್ವೇಶಗೌಡ, ರಾಜಶೇಖರಗೌಡ ಆಡೂರು, ಅನ್ನಪೂರ್ಣಮ್ಮ,ದೇವಮ್ಮ ಕಂದಾರಿ,ಬಸವ್ವ ದಿವಟರ್,ಮಲ್ಲಪ್ಪ ಕವಲೂರು,ಪರಶುರಾಮ ಮ್ಯಾದರ(ಬಿಜೆಪಿ ಬೆಂಬಲಿತ), ಅಶ್ವಿನಿ ಭಗತಕುಮಾರ ಗದಗಿನಮಠ, ನಾಗರತ್ನಾ ಶಿವಕುಮಾರ ಕುಕನೂರು,ವಿದ್ಯಾ ಸುನೀಲಕುಮಾರ ಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!