ಬೀದಿ ವ್ಯಾಪಾರಿಗಳ ಸಾಲ ಮನ್ನಾ ಮಾಡಲು ಜಿಲ್ಲಾಧಿಕಾರಿಗೆ ಮನವಿ ಪತ್ರ

ಅಖಿಲ ವಾಣಿ ಸುದ್ದಿ
ಸಿಂಧನೂರು : ಕರೋನ ಸೋಂಕಿನ ಹೊಡೆತಕ್ಕೆ ಸಿಲುಕಿ ಚೇತರಿಸಿ ಕೊಳ್ಳುತಿದ್ದ ಸಿಂಧನೂರು ನಗರದ ಬೀದಿ ವ್ಯಾಪಾರಸ್ಥರು ಮತ್ತೊಮ್ಮೆ ಕರೋನ ದಾಳಿಗೆ ತುತ್ತಾಗಿ ಜೀವನ ನಿರ್ವಹಣೆಗೆ ತುಂಬಾ ಸಂಕಷ್ಟದಲ್ಲಿದ್ದಾರೆ.ಕೇಂದ್ರ ಸರ್ಕಾರದ ಆತ್ಮ ನಿರ್ಭರ ಯೋಜನಡಿ ಬೀದಿ ವ್ಯಾಪಾರಿಗಳು ಈಗಾಗಲೇ ಪಡೆದಿರುವ ಸಾಲವನ್ನು ಮನ್ನಾ ಮಾಡುವ ಮೂಲಕ ಸಹಾಯ ಹಸ್ತ ಚಾಚಬೇಕು ಎಂದು ಸಿಂಧನೂರು ಪಟ್ಟಣ ವ್ಯಾಪಾರ ಸಮಿತಿಯು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು
ಬೀದಿ ವ್ಯಾಪಾರದಲ್ಲಿ ತೊಡಗಿದ್ದ ಸಣ್ಣಪುಟ್ಟ ವ್ಯಾಪಾರಿಗಳು ಕೇಂದ್ರ ಸರ್ಕಾರದ ಆತ್ಮ ನೀರ್ಭರ ಯೋಜನಡಿಯಲ್ಲಿ ೧೦ ಸಾವಿರ ಸಾಲವನ್ನು ಪಡೆದು ಕೊಂಡಿದ್ದಾರೆ. ರಾಜ್ಯದಲ್ಲಿ ಮತ್ತೆ ಕರೋನ ಸೋಂಕಿನ ೨ ನೇ ಅಲೆಯು ಪ್ರಾರಂಭವಾಗಿ ಮತ್ತೊಮ್ಮೆ ಬೀದಿ ವ್ಯಾಪಾರಿಗಳ ಜೀವನವನ್ನು ಪಾತಾಳಕ್ಕೆ ಕುಸಿಯುವಂತೆ ಮಾಡಿದೆ.ಇದರಿಂದ ಬೀದಿ ವ್ಯಾಪಾರಿಗಳು ಪಡೆದಿರುವ ಸಾಲವನ್ನು ತೀರಿಸುವ ಸಾಮಾರ್ಥ್ಯ ಕಳೆದುಕೊಳ್ಳುತ್ತಿದ್ದಾರೆ. ದಿನ ನಿತ್ಯದ ಜೀವನ ನಿರ್ವಹಣೆ ಮಾಡಲು ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ಖರೀದಿಸುವದೆ ತುಂಬಾ ಕಷ್ಟಕರವಾಗಿದೆ. ಸೋಂಕಿನ ಹಾವಳಿಯಿಂದ ವ್ಯಾಪಾರ ಕೂಡ ಸ್ಥಗಿತವಾಗಿ. ಬದುಕಲು ಕನಿಷ್ಟ ಆದಾಯ ಇಲ್ಲದೆ ಆರ್ಥಿಕ ಸಮಸ್ಯೆ ಉಂಟಾಗಿದೆ. ಕಾರಣ ಬೀದಿ ವ್ಯಾಪಾರಿಗಳು ಪಡೆದುಕೊಂಡಿರುವ ಸಾಲವನ್ನು ಸರ್ಕಾರ ಮನ್ನಾ ಮಾಡಬೇಕು. ಇಲ್ಲದಿದ್ದರೆ ಸಾವಿರಾರು ಬೀದಿ ವ್ಯಾಪಾರಿಗಳ ಕುಟುಂಬಗಳು ಬೀದಿಗೆ ಬೀಳುವದರಲ್ಲಿ ಯಾವುದೇ ಸಂಶಯವಿಲ್ಲ ಎಂದು ತಿಳಿಸಿದರು
ಬೀದಿ ವ್ಯಾಪಾರಿಗಳ ಜೀವನ ನಿರ್ವಹಣೆಗೆ ಹಾಗೂ ಅವರ ಜೀವನ ಭದ್ರತೆಗೆ ೧೦ ಸಾವಿರ ರೂಪಾಯಿ ಗಳನ್ನು ಮಂಜೂರು ಮಾಡಬೇಕು. ಸಹಕಾರಿ ಸಂಘ.ಸ್ವಸಹಾಯ ಸಂಘ . ಫೈನಾನ್ಸ್.ಲೇವಾದೇವಿ ದಾರರಿಂದ ಪಡೆಡಿರವ ಸಾಲ ಮರು ಪಾವತಿ ಮಾಡಲು ಕಾಲಾವಕಾಶ ಕಲ್ಪಿಸಬೇಕು. ಹಾಗೂ ಕಿರುಕುಳ ನೀಡುವ ಸಾಲಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮನೆ ಬಾಡಿಗೆ.ಅಂಗಡಿ ಬಾಡಿಗೆ ಹಣವನ್ನು ಕಟ್ಟಲು ವಿನಾಯಿತಿ ಜಾರಿ ಮಾಡಬೇಕು. ಮತ್ತು ಒಂದು ತಿಂಗಳಿಗೆ ಆಗುವಷ್ಟು ಧಾನ್ಯ ದವಸ ಸೇರಿದಂತೆ ಆಹಾರ ವಸ್ತುಗಳನ್ನ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಸಮಾಜ ಸುಧಾರಣಾ ವೇದಿಕೆ ಅಧ್ಯಕ್ಷ ಸೊಮ್ ನಾಥ ಸೂಲಂಗಿ.ಬೀದಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ದುರುಗಪ್ಪ ಹಸಮಕಲ್.ಕಾರ್ಮಿಕ ಸಂಘದ ಮುಖಂಡ ಬಿ. ಎನ್. ಯರದಿಹಾಳ. ಅಜಮೀರ.ಬಜಾರಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!