ಬೀರಪ್ಪ ಶಂಭೋಜಿ ಅವರಿಗೆ ಹೃದಯಸ್ಪರ್ಶಿ ಬೀಳ್ಕೊಡುಗೆ :ಶೈಕ್ಷಣಿಕ ಕೊಡುಗೆ ಅಪಾರ: ಬಸಪ್ಪ ಹ್ಯಾಟಿ

ಅಖಿಲ ವಾಣಿ ಸುದ್ದಿ
ಸಿಂಧನೂರು : ಶಿಕ್ಷಣ, ಸಾಹಿತ್ಯ, ಚಿತ್ರಕಲೆ, ನಾಟಕ, ಚಿತ್ರರಂಗ, ಡೊಳ್ಳುಕುಣಿತ ಹೀಗೆ ಹತ್ತು ಹಲವು ಕಲೆಗಳನ್ನು ಕರಗತ ಮಾಡಿಕೊಂಡು ತಾಳ್ಮೆಯಿಂದ ಸುಮಾರು ೩೬ ವರ್ಷಗಳವರೆಗೆ ಶಿಕ್ಷಣದಲ್ಲಿ ಅಮೂಲ್ಯವಾದ ಸೇವೆಯನ್ನು ಸಲ್ಲಿಸಿ ವಯೋ ನಿವೃತ್ತಿ ಹೊಂದಿರುವ ಬೀರಪ್ಪ ಶಂಭೋಜಿಯವರು ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಹಾಗೂ ಅಪಾರವಾದ ಕೊಡುಗೆ ನೀಡಿದ್ದಾರೆ ಅವರಿಗೆ ಹೃದಯಸ್ಪರ್ಶಿs ಬೀಳ್ಕೊಡುಗೆ ಇದಾಗಿದೆಯೆಂದು ತಾಲೂಕ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಬಸಪ್ಪ ಹ್ಯಾಟಿ ಹೇಳಿದರು.
ಅವರು ತಾಲೂಕಿನ ತಿಡಿಗೋಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ದಿನೇಶ. ಕೆ.ಪಿ. ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ವಯೋನಿವೃತ್ತಿ ಹೊಂದಿದ ಬೀರಪ್ಪ ಶಂಭೋಜಿ, ಹಾಗೂ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಕನ್ನಡ ಉಪನ್ಯಾಸಕಿಯಾಗಿ ಅಂಬಾಮಠ ಪದವಿ ಪೂರ್ವ ಕಾಲೇಜಿಗೆ ನೇಮಕವಾದ ಗಾಯತ್ರಿಬಾಯಿ ಎ., ಅವರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಶಿಕ್ಷಕ ಹೆಚ್. ಧರಯ್ಯ ಸ್ವಾಮಿ ಮಾತನಾಡಿ ಕ್ರಿಯಾಶೀಲತೆಗೆ ಮತ್ತೊಂದು ಹೆಸರೆಂದರೆ ಬೀರಪ್ಪ ಶಂಭೋಜಿ ಎಂದರು.
ಗೌರವ ಸನ್ಮಾನ ಸ್ವೀಕರಿಸಿ ಕೃತಜ್ಞತೆಯಿಂದ ಮಾತನಾಡಿದ ವಯೋ ನಿವೃತ್ತಿ ಹೊಂದಿದ ವಿಶ್ರಾಂತ ಮುಖ್ಯ ಶಿಕ್ಷಕ ಬೀರಪ್ಪ ಶಂಭೋಜಿ, ಮಾತನಾಡಿ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳ ಮಾರ್ಗದರ್ಶನ, ಎಸ್.ಡಿ.ಎಮ್.ಸಿ. ಅಧ್ಯಕ್ಷ, ಸರ್ವ ಸದಸ್ಯರು, ವಿದ್ಯಾರ್ಥಿಗಳ ಪಾಲಕರ, ಗ್ರಾಮದ ಹಿರಿಯ ಶಿಕ್ಷಣ ಪ್ರೇಮಿಗಳ ಸಹಕಾರ, ಮತ್ತು ಎಲ್ಲ ಶಿಕ್ಷಕ ವೃಂದದವರ ಪ್ರೋತ್ಸಾಹದಿಂದ ಉತ್ತಮ ಕಾರ್ಯ ನಿರ್ವಹಿಸಲು ಸಾಧ್ಯವಾಯಿತೆಂದು ಹೇಳಿದರು.
ಸರಕಾರಿ ಪ್ರೌಢಶಾಲೆಯ ಹಿರಿಯ ಶಿಕ್ಷಕಿ, ಹೆಚ್. ನಾಗವೇಣಿ, ಅಂಬುಜಾ, ಅಕ್ಕಮಹಾದೇವಿ, ಗಾಯತ್ರಿಬಾಯಿ, ಬಲವಂತಗೌಡ, ಸತ್ಯಮ್ಮ, ಕೊಟ್ರೇಶ್ ಬಿ., ನಾಗಪ್ಪ ಕೆಲ್ಲೂರು, ನೀಲನಗೌಡ, ವಿರುಪಾಪುರ ಸರಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ರಮಾದೇವಿ ಶಂಭೋಜಿ, ಕುರಕುಂದಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಶಂಕರಪ್ಪ, ಸಿ.ಆರ್.ಪಿ. ಬೀರೇಶ, ಪತ್ರಕರ್ತ ಹಗೂ ಬೀರಪ್ಪ ಶಂಭೋಜಿಯವರ ಸೇವೆಯ ಪ್ರಥಮ ವರ್ಷದ ಶಾಲಾ ಪ್ರಧಾನiಂತ್ರಿ ಯಶವಂತ ಕೋವಿ, ವಿದ್ಯಾರ್ಥಿಗಳಾದ ವೆಂಕಟೇಶ, ಸಾವಿತ್ರಿ ಮಾತನಾಡಿದರು.
ಎಸ್.ಡಿ.ಎಮ್. ಸಿ.ಉಪಾಧ್ಯಕ್ಷ ಪಂಪಾಪತಿ ಕಾಸರಡ್ಡಿ, ಶಿಕ್ಷಣ ಪ್ರೇಮಿಗಳಾದ ಅಮರೇಶ ಗಚ್ಚಿನಮನಿ, ಹಳದಪ್ಪಗೌಡ ಗದ್ರಟಗಿ, ಈಶ್ವರಪ್ಪ ಜಾವೂರ, ಹನುಮಪ್ಪ ಬಾಗೋಡಿ, ಕಾನಿಹಾಳ ಶಾಲೆಯ ಮುಖ್ಯ ಶಿಕ್ಷಕ, ಕೃಷ್ಣಾಚಾರಿ, ಉಪ್ಪಲದೊಡ್ಡಿಯ ಮುಖ್ಯ ಶಿಕ್ಷಕ ಹನುಮಂತಪ್ಪ, ತಿಡಿಗೋಳ ಶಾಲೆಯ ಹನುಮಂತ ಭಂಗಿ, ನಿಡಿಗೋಳ ಶಾಲೆಯ ಮುಖ್ಯ ಶಿಕ್ಷಕ ಕಿಷನ್‌ರಾವ್, ಶಿವರಾಂ ನಗರ ಶಾಲೆಯ ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ, ಕುರಕುಂದಿ ಹರಿಜನವಾಡಾ ಶಾಲೆಯ ಮುಖ್ಯ ಶಿಕ್ಷಕ ವೀರಣ್ಣ, ತಿಡಿಗೋಳ ಕ್ಯಾಂಪ್ ಶಾಲೆಯ ಮುಖ್ಯ ಶಿಕ್ಷಕ ಕುಮಾರ್, ಭಾಸ್ಕರ್ ಕ್ಯಾಂಪ್ ಶಾಲೆಯ ಮುಖ್ಯ ಶಿಕ್ಷಕ ಕೆಂಪೇಗೌಡ, ಉಪಸ್ಥಿತರಿದ್ದರು.
ಶಿಕ್ಷಕಿ ಜಯಲಕ್ಷ್ಮೀ ಸ್ವಾಗತಿಸಿದರು, ಕೊಟ್ರೇಶ ಬಿ. ವಂದಿಸಿದರು ನಾಗಪ್ಪ ಕೆಲ್ಲೂರು ಕಾರ್ಯಕ್ರಮ ನಿರೂಪಿಸಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!