ಬೂದಗುಂಪಾ ಗ್ರಾಮಪಂಚಾಯತಿಯಿಂದ ಸ್ಯಾನಿಟೈಜರ್ ಸಿಂಪರಣೆ

ಕಾರಟಗಿ : ಮೇ ೬ ಗುರುವಾರದಂದು ಸಮೀಪದ ಬೂದಗುಂಪ ಗ್ರಾ ಪಂ ವತಿಯಿಂದ ಗ್ರಾಮದಲ್ಲಿ ಕೊರೋನ ತಡೆಗೆ ಗುರುವಾರದಂದು ಸ್ಯಾನಿಟೈಜರ್ ಸಿಂಪಡಣೆ ಮಾಡಲಾಯಿತು,
ಗ್ರಾಮ ಪಂಚಾಯತ್ ವ್ಯಾಪ್ತಿಯ ಹಾಲಸಮುದ್ರ. ತಿಮ್ಮಾಪುರ ಗ್ರಾಮದ ದೇವಸ್ಥಾನದಿಂದ ಮುಖ್ಯರಸ್ತೆಯ ಸಾರ್ವಜನಿಕ ಸ್ಥಳಗಳಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮುಖಕ್ಕೆ ಮಾಸ್ಕ್ ಧರಿಸಿ ಸ್ಯಾನಿಟೈಜರ್ ಸಿಂಪರಣೆ ಮಾಡಿದರು,
ಗ್ರಾಮ ಪಂಚಾಯತ್ ಕಾರ್ಯದರ್ಶಿ ಹನುಮಂತಪ್ಪ ಕೊರೋನ ಜಾಗೃತಿ ಬಗ್ಗೆ ಮಾತನಾಡಿ ಕರೋನವೈರಸ್ ದೇಶದೆಲ್ಲೆಡೆ ಅತಿವೇಗವಾಗಿ ಜನರಿಂದ ಜನರಿಗೆ ಹರಡುವುದರಿಂದ ಸರ್ಕಾರಗಳು ಇದನ್ನು ನಿಯಂತ್ರಿಸಲು ಹರಸಾಹಸಪಡುತ್ತಿದೆ ಸಾರ್ವಜನಿಕರು ತಮ್ಮ ತಮ್ಮ ಆರೋಗ್ಯದ ಬಗ್ಗೆ ನಿಗಾವಹಿಸಿ ಅವಶ್ಯವಿದ್ದರೆ ಮಾತ್ರ ಹೊರಗಡೆ ಹೋಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಪಾಡಿ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಸವರಾಜ್ ಕಡೆಮನಿ. ಡಿಇಓ ಬಸವರಾಜ್ ಜಂತಕಲ್. ಬಿ ಸಿ ಬಸವನಗೌಡ ಮಾಲಿ ಪಾಟೀಲ್ ಸೇರಿ ಇನ್ನಿತರ ಇದ್ದ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!