ಬೇಸಾಯ ಕ್ರಮಗಳ ಕುರಿತು ರೈತರಿಗೆ ಜ್ಞಾನಾರ್ಜನೆ ಕಾರ್ಯಕ್ರಮ

ಕೋಪ್ಪಳ: ಲೈಂಗಿಕ ಸಮಸ್ಯೆಯಿಂದ, ಅಭಿವೃದ್ಧಿಯಾಗದ ಅಂಡಾಣು ವೀರ್ಯಾಣು ಸಮಸ್ಯೆಯಿಂದ, ಪಚನ ನಾಳದ ಸಮಸ್ಯೆಯಿಂದ, ಹೃದಯ ಸಂಬಂಧಿತ ಸಮಸ್ಯೆಗಳಿಂದ, ಬಳಲಿ ಜನರು ಅನಾರೋಗ್ಯಕ್ಕೀಡಾಗುತ್ತಾರೆ ಎಂದು ಹಾಲವರ್ತಿ ಗ್ರಾಮದಲ್ಲಿ ನಡೆದ ಊಓ-೪೬ ನವಣೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನುದ್ದೇಶಿಸಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಕೊಪ್ಪಳದ ವಿಜ್ಞಾನಿಗಳಾದ ಡಾಕ್ಟರ್ ನಾಗೇಶ್ ಬಸಪ್ಪ ಜಾನೇಕಲ್ ರವರು ನವಣೆ ಬೆಳೆ ಹಾಗೂ ಸಿರಿಧಾನ್ಯಗಳ ಸಮಗ್ರ ಬೇಸಾಯ ಕ್ರಮಗಳ ಕುರಿತು ಅಲ್ಲಿನ ರೈತರಿಗೆ ಜ್ಞಾನಾರ್ಜನೆ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಗವಿಸಿದ್ಧ ಸಿದ್ಧಪ್ಪನವರು ಸಿರಿಧಾನ್ಯಗಳನ್ನು ನಮ್ಮ ಊರಿನ ರೈತರೆಲ್ಲರೂ ಬೆಳೆದು ನವಣಿ ಅನ್ನವನ್ನು ಸೇವಿಸಿ ಆರೋಗ್ಯವನ್ನು ಕಾಪಾಡಬೇಕೆಂದು ತಿಳಿಸಿದರು.
ಸುರೇಶ್ ಕಿನ್ನಾಳ ಹಾಲವರ್ತಿ ರವರು ಇಲ್ಲಿ ಸೇರಿರುವ ಹಾಲುವರ್ತಿ ಗ್ರಾಮದ ರೈತರೆಲ್ಲರು ಸಿರಿಧಾನ್ಯಗಳಾದ ಆರ್ಕ, ಸಾಮೆ, ಊದಲು, ಕೊರ್ಲೆ ಇವೆಲ್ಲವುಗಳನ್ನು ಮುಂದೆ ಬರುವ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿ ಬೆಳೆದು ಈ ಸಿರಿಧಾನ್ಯಗಳ ಆಹಾರವನ್ನು ಸೇವಿಸಬೇಕೆಂದು ರೈತರಿಗೆ ತಿಳಿಸಿದರು.
ಸದರಿ ಕ್ಷೇತ್ರೋತ್ಸವದಲ್ಲಿ ಹಾಲುವರ್ತಿ ಗ್ರಾಮದ ೩೫ ರಿಂದ ೪೦ ರೈತರು, ಪ್ರಗತಿಪರ ರೈತರು, ಯುವ ಕೃಷಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!