ಬೊಮ್ಮಾಯಿ ಸರಕಾರದಲ್ಲಿ ಪೀರಾಹುಸೇನ್ ಹೊಸಳ್ಳಿಗೆ ಸಚಿವ ಸ್ಥಾನ ನೀಡಿ : ಬಿಜೆಪಿ ಮುಖಂಡರ ಒತ್ತಾಯ

ಕೊಪ್ಪಳ : ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಸರಕಾರದ ನೂತನ ಸಚಿವ ಸಂಪುಟದಲ್ಲಿ ರಾಜ್ಯ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನ್ಯಾಯವಾದಿ ಪೀರಾಹುಸೇನ ಹೊಸಳ್ಳಿ ವಕೀಲರಿಗೆ ಸಚಿವ ಸ್ಥಾನ ನೀಡುವಂತೆ ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಷ್ಟ್ರೀಯ ಬಿಜೆಪಿ ಸಂಘಟನಾ ಚತುರ ಸಂತೋ?ಜೀ ಹಾಗೂ ಕೇಂದ್ರ ಸಚಿವ ಪ್ರಹ್ಲಾದ್‌ಜೋಷಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳೀನಕುಮಾರ ಕಟೀಲ,ನೂತನ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿಯವರೇ ರಾಜ್ಯದಲ್ಲಿ ಹೊಸ ಸರಕಾರದತ್ತ ದಾಪುಗಾಲು ಹಾಕುತ್ತಿರುವಾಗ ರಾಜ್ಯದಲ್ಲಿ ಅತೀ ಹೆಚ್ಚು ಜನಸಂಖ್ಯೆವುಳ್ಳ ಅಲ್ಪಸಂಖ್ಯಾತರಿಗೆ ಸಚಿವ ಸಂಪುಟದಲ್ಲಿ ಸಚಿವ ಸ್ಥಾನಕ್ಕೆ ಪ್ರಾತಿನೀಧ್ಯ ನೀಡುವಂತೆ ಬಿಜೆಪಿ ಮುಖಂಡರು, ಅಲ್ಪಸಂಖ್ಯಾತ ಘಟಕದ ಮುಖಂಡರು ಒತ್ತಾಯವಾಗಿದೆ.
ಬಿಜೆಪಿ ಸರಕಾರದಲ್ಲಿ ಸಾಮಾಜಿಕ ನ್ಯಾಯ ಸಿಗುತ್ತದೆ ಎಂದು ಬಿಜೆಪಿ ಅಲ್ಪ ಮತ್ತು ಬಹು ಸಂಖ್ಯಾತ ಕಾರ್ಯಕರ್ತರು ಈ ಸರಕಾರದಲ್ಲಿ ಸುಮಾರು ೨೫ ವ?ಗಳಿಂದ ಪ್ರಾಮಾಣಿಕ ಕಾರ್ಯಕರ್ತರಾಗಿ ಪಕ್ಷದ ಸಂಘಟನೆಗೆ ರಾಜ್ಯಾದ್ಯಂತ ಪ್ರವಾಸ ಮಾಡಿ ಹಗಲಿರಳು ದುಡಿದಿದ್ದು, ನಾವು ದೇಶ ಸ್ವಾಭಿಮಾನವುಳ್ಳವರೂ, ನಮ್ಮನ್ನೂ ದಯಮಾಡಿ ಕಡೆ ಗಣಿಸಬೇಡಿ ಮಾಧ್ಯಮದ ಮುಂದೇ ಅಳಲು ಹೇಳಿಕೊಳ್ಳಬಹುದಾಗಿತ್ತು ಆದರೆ ನಾವು ಇತರರಂತೆ ಮಾಧ್ಯಮಕ್ಕೆ ಹೋದವರಲ್ಲ. ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ತಾಳ್ಮೆವುಳ್ಳವರು .ನಮ್ಮ ಮಠಾಧೀಪತಿಗಳು ಎಲ್ಲಾ ಜನಾಂಗದವರಿಗೆ ಶುಭ ಹಾರೈಸುವವರು.ಆದರೆ ಮಠಾಧೀಪತಿಗಳು ನಮ್ಮ ಬಗ್ಗೆ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಕಾಳಜಿ ಅಥವಾ ಧ್ವನಿ ಎತ್ತಿಲ್ಲ ಎಂಬ ನೋವು ನಮಗೆ ಇಲ್ಲ ಆದರೆ ಕೇಂದ್ರ ಮತ್ತು ರಾಜ್ಯದ ರಾಷ್ಟ್ರೀಯ ನಾಯಕರು ಮಾಜೀ iಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಅಖಂಡ ಭಾರತ ನಿರ್ಮಾಣದ ದೂರದೃಷ್ಟಿ ಇಟ್ಟು ಕೊಂಡಂತೆ ರಾಜ್ಯದ ಮಂತ್ರಿಮಂಡಲದಲ್ಲಿ ಅಲ್ಪಸಂಖ್ಯಾತರಿಗೆ ಪ್ರಾತಿನೀಧ್ಯ ನೀಡಿ ಸಮಾನತೆ ಕಾಪಾಡಿ ಎಂದು ಆಗ್ರಹಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!