ಭತ್ತದಂತೆ ಉತ್ತಮ ಕೃತಿಗಳು ಬರುತ್ತಿರುವುದು ಸಂತೋಷ : ಡಾ|| ಚೆನ್ನಬಸಪ್ಪ ಚಿಲ್ಕರಾಗಿ


ಅಖಿಲ ವಾಣಿ ಸುದ್ದಿ
ಸಿಂಧನೂರು: ಕಲ್ಯಾಣ ಕರ್ನಾಟಕದ ರಾಯಚೂರು ಜಿಲ್ಲೆಯ ಸಿಂಧನೂರು ಉತ್ತಮ ಭತ್ತ ಬೆಳೆಯುವಂತೆ ಇಲ್ಲಿನ ಸಾಕಷ್ಟು ಕವಿಗಳು, ಸಾಹಿತಿಗಳು ಉತ್ತಮವಾದ ಮೌಲಿಕವಾದ ಕೃತಿಗಳನ್ನು ಪ್ರಕಟಿಸುತ್ತಿರುವುದು ಹೆಮ್ಮೆ ಸಂಗತಿಯಾಗಿದೆ ಎಂದು ಸಿಂಧನೂರಿನ ಸರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ಡಾ|| ಚೆನ್ನಬಸಪ್ಪ ಚಿಲ್ಕರಾಗಿ ಹೇಳಿದರು.
ಅವರು ಶುಕ್ರವಾರ ನಗರದ ಶ್ರೀ ಕನಕದಾಸ ಪದವಿ ಕಾಲೇಜಿನಲ್ಲಿ ಪ್ರಾಚಾರ್ಯ ನಾಗರಾಜ ವಲ್ಕಂದಿನ್ನಿ ಅವರ ಎರಡನೆಯ ಕೃತಿ ’ಬೆನ್ನಿಗಂಟಿದ ನೆರಳು’ ಕವನ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿ ಅವರು ಕವಿ ನಾಗರಾಜ ವಲ್ಕಂದಿನ್ನಿ ಸಮಾಜದಲ್ಲಿ ಆಗುತ್ತಿರುವ ಅನ್ಯಾಯಗಳನ್ನು, ಶೋಷಣೆಗಳನ್ನು ಸರಿಪಡಿಸಲು ’ಬೆಂಕಿಯ ಮಳೆ ಬರಬೇಕು’ ಎಂದು ಕವನ ಸಂಕಲನದ ಕವಿತೆಯ ಮೂಲಕ ಹೇಳಿರುವುದು ತುಂಬಾ ಮಾರ್ಮಿಕ ವಾಗಿದೆಯೆಂದು. ಕೃತಿ ಅವಲೋಕನ ಮಾಡಿದ ಗಂಗಾವತಿಯ ಸಾಹಿತಿ ಅಜಮೀರ ನಂದಾಪೂರ ಕವಿ ತಂದೆಯನ್ನು ತಾತನನ್ನು, ಮಗನನ್ನು ಕಳೆದುಕೊಂಡು ಸಾವಿನ ಸಂಕಟ, ತಾಯಿಯ ಶ್ರಮದ ಸಂಘರ್ಷದ ಬದುಕು, ಬಡತನ ಕಣ್ಣಿಗೆ ಕಾಣುತ್ತಿರುವ ಜ್ವಲಂತ ಸಮಸ್ಯೆಗಳು ಮತ್ತು ಭ್ರಷ್ಟಾಚಾರ, ರಾಜಕೀಯ ಅರಾಜುಕತೆ ಮುಂತಾದವುಗಳನ್ನು ಅನುಭವಿಸಿ ಅರ್ಥಪೂರ್ಣವಾದ ಕವಿತೆಗಳನ್ನು ಬರೆದು ’ಬೆನ್ನಿಗಂಟಿದ ನೆರಳು’ ಕವನ ಸಂಕಲನವನ್ನು ಹೊರತಂದಿರುವ ನಾಗರಾಜ ವಲ್ಕಂದಿನ್ನಿ ಕೇವಲ ಕವಿಯಲ್ಲ ಒಳೆಯ ಕಥೆಗಾರ ಹಾಗೂ ನಾಟಕಕಾರರಾಗಿ ಸಾಹಿತ್ಯ ಸೇವೆ ಮಾಡುತ್ತಿದ್ದಾರೆ. ಅವರಿಂದ ಕನ್ನಡ ಸಾಹಿತ್ಯ ಲೋಕಕ್ಕೆ ಇನ್ನೂ ಹೆಚ್ಚಿನ ಸಮಾಜ ಮುಖಿ ಕೃತಿಗಳು ಹೊರಬರಲಿ ಎಂದರು.
ಕಾರಟಗಿಯ ಸಿ.ಎಮ್.ಎನ್. ಕಾಲೇಜಿನ ಉಪನ್ಯಾಸಕ ಡಾ|| ಹನುಮಂತ ಚಂದ್ಲಾಪೂರ ಪ್ರಾಸ್ತಾವಿಕವಾಗಿ ಮಾತನಾಡಿ ಕವಿಯ ಗಟ್ಟಿತನ ಹಾಗೂ ಸಮಾಜದಲ್ಲಿ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆಂದರು. ಕೃತಿಕರ ನಾಗರಾಜ ವಲ್ಕಂದಿನ್ನಿ ಮಾತನಡಿ ತಮ್ಮ ಸಾಹಿತ್ಯ ಸೇವೆಗೆ ಮಾರ್ಗದರ್ಶನ, ಸಹಕಾರ, ಸಹಾಯ ಮಾಡಿದ ಎಲ್ಲರನ್ನೂ ನೆನಪಿಸಿ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಕನಕದಾಸ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಎಮ್.ದೊಡ್ಡಬಸವರಾಜ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಕನಕದಾಸ ಪದವಿ ಕಾಲೇಜಿನ ಉಪ ಪ್ರಾಚಾರ್ಯ ಹಿರೇಲಿಂಗಪ್ಪ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಿದ್ದಪ್ಪ ಖೈರವಾಡಗಿ, ಜಾಲಿಹಾಳ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕ ಚಂದ್ರಶೇಖರ, ಕೃತಿಕಾರ ಪ್ರಾಚಾರ್ಯ ನಾಗರಾಜ ವಲ್ಕಂದಿನ್ನಿ, ಮುಖಂಡ ಮಹಿಬೂಬ ಮಂತ್ರಿ ವೇದಿಕೆಯ ಮೆಲೆ ಉಪಸ್ಥಿತರಿದ್ದರು.
ಉಪನ್ಯಾಸಕ ರಾಮಣ್ಣ ಬೇರಗಿ ಕೃತಿಕಾರ ಮಾಗರಾಕ ವಲ್ಕಂದಿನ್ನಿ ಅವರ ಪರಿಚಯ ಮಾಡಿದರು ದುರುಗೇಶ ಪ್ರಾರ್ಥಿಸಿದರು, ಉಪನ್ಯಾಸಕಿ ನಂದಿನಿ ಗೋಗಿ ಸ್ವಾಗತಿಸಿದರು ಉಪನ್ಯಾಸಕ ಚಂದ್ರಶೇಖರ ವಂದಿಸಿದರು ಉಪನ್ಯಾಸಕ ಯರಿಯಪ್ಪ ಕಾರ್ಯಕ್ರಮ ನಿರೂಪಿಸಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!