ಮಸ್ಕಿ ಉಪ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ರ ಗೆಲುವು ನಿಶ್ಚಿತ: ಡಿಕೆ ಶಿವಕುಮಾರ್

ಅಖಿಲ ವಾಣಿ ಸುದ್ದಿ
ಸಿಂಧನೂರು : ಮಸ್ಕಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆರ್.ಬಸನಗೌಡ ತುರುವಿಹಾಳ ಗೆಲುವು ನಿಶ್ಚಿತ ವಾಗಿದೆ.ಮಸ್ಕಿ ಕ್ಷೇತ್ರದಲ್ಲಿ ಮತದಾರರು ಹಾಗೂ ಮಹಿಳೆಯರು ಚುನಾವಣೆ ವೆಚ್ಚ ವನ್ನು ದೇಣಿಗೆ ನೀಡುತ್ತಿರುವದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಹೊಸ ತಿರುವನ್ನು ನೀಡಿದೆ.ಹಾಗಾಗಿ ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವಿಗೆ ಮುನ್ನುಡಿ ಬರೆಯಲಿದೆ ಎಂದು ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು
ನಗರದ ಯುವ ಕಾಂಗ್ರೆಸ್ ಘಟಕದ ಕಛೇರಿಯಲ್ಲಿ ಪತ್ರಕರ್ತರೊಂದಿಗೆ ಅವರು ಮಾತನಾಡುತ್ತಾ ಬಸನಗೌಡ ತುರುವಿಹಾಳ ಅವರಿಗೆ ಮಸ್ಕಿ ಕ್ಷೇತ್ರದಲ್ಲಿ ಅನುಕಂಪದ ಅಲೆ ಎದ್ದಿದೆ.ಮತದಾರರೇ ಸ್ವಇಚ್ಛೆಯಿಂದ ಚುನಾವಣೆ ವೆಚ್ಚ ನೀಡುವ ಮೂಲಕ ಬಸನಗೌಡರ ಗೆಲುವಿಗೆ ಬದ್ಧರಾಗಿದ್ದಾರೆ.
ಮಸ್ಕಿ ಕ್ಷೇತ್ರದಲ್ಲಿ ಪ್ರತಾಪಗೌಡರು ಮತದಾರರ ಭಾವನೆಗಳಿಗೆ ಬೆಲೆ ನೀಡದೆ ಪಕ್ಷಾಂತರ ಮಾಡಿ ಅಧಿಕಾರ ಮತ್ತು ಹಣದ ಆಸೆಗಾಗಿ ಮತದಾರರಿಗೆ ಅವಮಾನ ಮಾಡಿದ್ದಾರೆ.ಮತ್ತು ಚುನಾವಣೆಯನ್ನು ಹಣದ ಮೂಲಕ ಎದರಿಸಿ ಮತಗಳನ್ನು ಖರೀದಿಸಬಹುದು ಎಂಬ ಹುಚ್ಚು ಕಲ್ಪನೆಯಲ್ಲಿ ಇದ್ದಾರೆ ಆದರೆ ಈ ಸಾರಿ ಮತದಾರರು ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು
ಮಸ್ಕಿ ಕ್ಷೇತ್ರದಲ್ಲಿ ಪ್ರತಾಪಗೌಡರಿಗೆ ಈ ಹಿಂದೆ ಮತದಾರರು ಶಾಸಕ ಸ್ಥಾನದ ಕುದುರೆಯನ್ನು ನೀಡಿದ್ದರು.ಆದರೆ ಪ್ರತಾಪಗೌಡ ಮತದಾರರು ಕೊಟ್ಟ ಕುದುರೆಯನ್ನು ಏರದೆ ಅಮಿಷ್ಯೆಗಳಿಗೆ ಬಲಿಯಾಗಿ ಬಿಜೆಪಿ ಸೇರಿ ಮತ್ತೆ ಮತದಾರರ ಮುಂದೆ ಶಾಸಕ ಸ್ಥಾನದ ಕುದುರೆಯನ್ನು ಕೊಡಿ ಎಂದು ಈ ಚುನಾವಣೆ ತಂದಿದ್ದಾರೆ.ಕೊಟ್ಟ ಕುದುರೆಯನ್ನು ಏರದವ ಶೂರನು ಅಲ್ಲ .. ವೀರನು
ಅಲ್ಲ ಎಂಬುದನ್ನು ಕ್ಷೇತ್ರದ ಮತದಾರರು ಅರಿತು ಕೊಂಡಿದ್ದಾರೆ. ಅಧಿಕಾರ ಇದ್ದಾಗ ಕ್ಷೇತ್ರದ ಮತದಾರರ ಸಮಸ್ಯಗಳಿಗೆ ಸ್ಪಂದಿಸಿ ಕೆಲಸ ಮಾಡಬೇಕಾದ ಪ್ರತಾಪಗೌಡರು ಸಂತೆಯಲ್ಲಿ ಪ್ರಾಣಿಗಳ ಮಾರಾಟದಂತೆ ತಮ್ಮನ್ನು ತಾವೇ ಮಾರಿಕೊಂಡು ಕ್ಷೇತ್ರದ ಮತದಾರರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದು ಶೋಭೆಯಲ್ಲ.ಈ ಉಪ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದ ಪ್ರಜ್ಞಾವಂತ ಮತದಾರರು ಪ್ರತಾಪಾಗೌಡರನ್ನು ಸೋಲಿಸಿ ಕಾಂಗ್ರೆಸ್ ಪಕ್ಷದ ಅಭ್ಯೆರ್ತಿಯಾದ ಬಸನಗೌಡ ರನ್ನು ಗೆಲ್ಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಘಟಕದ ರಾಜ್ಯ ಅಧ್ಯಕ್ಷ ಬಸನಗೌಡ ಬಾದರ್ಲಿ. ಬಸನಗೌಡ ಬಾದರ್ಲಿ ಪೌಂಡೇಶನ್ ಅಧ್ಯಕ್ಷ ಸೋಮನಗೌಡ ಬಾದರ್ಲಿ. ಕಾಂಗ್ರೆಸ್ ಘಟಕದ ತಾಲೂಕ ಅಧ್ಯೇಕ್ಷ ಆಬಿಬ್ ಖಾಜಿ.ರಾಜ್ಯ ಯುವ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ರಾಘಲಪರ್ವಿ. ಖಾಜಾ ಹುಸೇನ ರೌಡಕುಂದ. ನಾಗರಾಜ ಕವಿತಾಳ.
ಅಮರೇಶ ಬಾಗೊಡಿ ಸೇರಿದಂತೆ ಇತರರು ಇದ್ದರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!