ಮಸ್ಕಿ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದ ಆಟ ನಡೆಯಲಿಲ್ಲ : ಬಸನಗೌಡ ಬಾದರ್ಲಿ

ಅಖಿಲ ವಾಣಿ ಸುದ್ದಿ
ಸಿಂಧನೂರು : ಮಸ್ಕಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಗೆಲುವಿಗೆ ಏನೆಲ್ಲಾ ತಂತ್ರಗಳನ್ನು ಬಿಜೆಪಿ ಸರ್ಕಾರ ಮತ್ತು ಪಕ್ಷದ ಮುಖಂಡರು ಮಾಡಿದರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ಬಸನಗೌಡ ತುರುವಿಹಾಳ ಗೆಲುವನ್ನು ತಡೆಯಲಾಗಲಿಲ್ಲ. ಕ್ಷೇತ್ರದಲ್ಲಿ ಸ್ವಾಭಿಮಾನಿ ಮತದಾರರ ಮುಂದೆ ಬಿಜೆಪಿ ಸರ್ಕಾರದ ಆಟ ನಡೆಯಲಿಲ್ಲ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕದ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಹೇಳಿದರು
ನಗರದ ಯುವ ಕಾಂಗ್ರೆಸ್ ಘಟಕದ ಕಚೇರಿಯಲ್ಲಿ ಸೋಮವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತ ಮಸ್ಕಿ ಕ್ಷೇತ್ರದಲ್ಲಿ ಮತದಾರರು ತುಂಬಾ ಪ್ರಭುದ್ದರಾಗಿದ್ದಾರೆ. ಬಿಜೆಪಿ ಪಕ್ಷದ ಗೆಲುವಿಗಾಗಿ ಮತದಾರರಿಗೆ ಹಾಡು ಹಗಲೇ ಹಣ ಹಂಚಿಕೆ ಮಾಡುವದರ ಮೂಲಕ ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಬುಡಮೇಲು ಮಾಡಿದ್ದರು. ಹಣ ಹಂಚಿಕೆ ಮಾಡಿ ಕ್ಷೇತ್ರದ ಮತದಾರರ ಸ್ವಾಭಿಮಾನವನ್ನು ಕೊಂಡುಕೊಳ್ಳಲು ಪ್ರಯತ್ನ ಮಾಡಿದ್ದರು.ಆದರೆ ಮತದಾರರು ತಮ್ಮ ಸ್ವಾಭಿಮಾನವನ್ನೆ ಪಣಕ್ಕಿಟ್ಟು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಹೊಸ ಇತಿಹಾಸವನ್ನು ಸೃಷ್ಟಿ ಮಾಡಿದ್ದಾರೆ. ಕಾರಣಕ್ಕಾಗಿ ಮಸ್ಕಿ ಕ್ಷೇತ್ರದ ಪ್ರಜ್ಞಾವಂತ ಮತದಾರರಿಗೆ ಅಭಿನಂದನೆಗಳನ್ನು ಸಲ್ಲಸುತ್ತೇನೆ ಎಂದು ತಿಳಿಸಿದರು
ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವು ಇಡೀ ರಾಜ್ಯಕ್ಕೆ ಮತ್ತು ರಾಷ್ಟ್ರಕ್ಕೆ ಒಂದು ಹೊಸ ಸಂದೇಶವನ್ನು ತಂದುಕೊಟ್ಟಿದೆ. ಕ್ಷೇತ್ರದಲ್ಲಿ ಮತದಾರರು ನಾವು ದುಡ್ಡಿಗೆ ಮಾರಾಟವಾಗುವರು
ಅಲ್ಲ.ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪ್ರಜೇಗಳೆ ದೇವರು ಎಂದು ತೋರಿಸಿಕೊಟ್ಟಿದ್ದಾರೆ. ಈ ಹಿಂದೆ ಅಧಿಕಾರದ ಲಾಲಸೆಗೆ ಕ್ಷೇತ್ರದ ಮತದಾರರ ಭಾವನೆಗಳಿಗೆ ಬೆಲೆ ಕೊಡದೆ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಹೋಗಿದ್ದ ಪ್ರತಾಪಗೌಡ ಪಾಟೀಲ್ ರಿಗೆ ಕ್ಷೇತ್ರದ ಮತದಾರರು ಸರಿಯಾದ ಪಾಠ ಕಲಿಸಿ ಕಾಂಗ್ರೆಸ್ ಅಭ್ಯರ್ಥಿ ಆರ್ ಬಸನಗೌಡರನ್ನು ೩೦.ಸಾವಿರಕ್ಕಿಂತ ಹೆಚ್ಚಿನ ಮತಗಳಿಂದ ಗೆಲ್ಲಿಸುವ ಮೂಲಕ ವ್ಯೆಕ್ತಿ ಗಿಂತ ಪಕ್ಷವೇ ದೊಡ್ಡದು ಎಂದು ತೋರಿಸಿ ಕೊಟ್ಟಿದ್ದಾರೆ. ಆರ್.ಬಸನಗೌಡ ತುರುವಿಹಾಳ ಕಳೆದ ಚುನಾವಣೆಯಲ್ಲಿ ೨೧೬ ಮತಗಳ ಅಂತರದಿಂದ ಮಾತ್ರ ಸೋತಿದ್ದರು. ಆಗ ಬಸನಗೌಡರನ್ನು ಆ ಕ್ಷೇತ್ರದ ಮತದಾರರು ಸೋಲಿಸಿರಲಿಲ್ಲ.ಆಗಿನ ಶಾಸಕ ಪ್ರತಾಪಗೌಡರೆ ಕಳ್ಳ ಮತದಾನ ಮಾಡಿಸಿ ದ್ದರು.ಆದರೆ ಕ್ಷೇತ್ರದ ಮತದಾರರು ಬಸನಗೌಡರ ಮೇಲಿಟ್ಟಿರುವ ಅಪಾರ ಪ್ರೀತಿ ಮತ್ತು ನಂಬಿಕೆ ಇವತ್ತು ಕಾಂಗ್ರೆಸ್ ಪಕ್ಷವು ಅಧಿಕ ಮತಗಳ ಅಂತರದ ಗೆಲುವಿನ ಅಲೆಯನ್ನು ಸೃಷ್ಟಿಸುವ ಹಂತಕ್ಕೆ ಬಂದು ತಲುಪಿದೆ ಎಂಬ ಮಾತನ್ನು ಹೇಳಿದರು. ಈ ಹಿಂದೆ ಕಾಂಗ್ರೆಸ್ ಪಕ್ಷದ ಸರ್ಕಾರದ ಆಡಳಿತದಲ್ಲಿ ಸಿದ್ದರಾಮಯ್ಯನವರು ಬಡವರಿಗಾಗಿ. ರೈತರಿಗಾಗಿ. ಯುವಕರಿಗಾಗಿ ಸಾಕಷ್ಟು ಜನಪರ ಯೋಜನೆಗಳನ್ನು ಜಾರಿ ಮಾಡಿದ್ದಾರೋ ಇವತ್ತಿಗೂ ಪ್ರತಿಯೊಂದು ಆ ಯೋಜನೆಗಳು ಜನರ ಮನಸ್ಸಲ್ಲಿ ಶಾಶ್ವತವಾಗಿ ಉಳಿದಿವೆ.ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷ ಡಿ. ಕೆ.ಶಿವಕುಮಾರ ಅವರ ವ್ಯಕ್ತಿ ಪೂಜೆ ಗಿಂತ ಪಕ್ಷ ಪೂಜೆ ಮಾಡಿ ಎನ್ನುವ ಸಂದೇಶವನ್ನು ಪಕ್ಷದ ಎಲ್ಲ ಮುಖಂಡರುಗಳಿಗೆ ಕರೆ ಕೊಟ್ಟಿದ್ದರು ಅವರ ಕರೆಯಂತೆ ಪಕ್ಷದ ಜಿಲ್ಲಾಮುಖಂಡರು.ಮಸ್ಕಿ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಒಗ್ಗಟ್ಟಿನ ಪ್ರದರ್ಶನದಿಂದ ಕೆಲಸ ಮಾಡುವ ಮೂಲಕ ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆರ್.ಬಸನಗೌಡ ಗೆಲುವಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಯಿತು.ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣರಾದ ಪ್ರತಿಯೊಬ್ಬ ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು
ಈ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಘಟಕದ ಪ್ರಧಾನ ಕಾರ್ಯದರ್ಶಿ ವೆಂಕಟೇಶ ನಾಯಕ ರಾಗಲಪರವಿ.ಗ್ರಾಮೀಣ ಯುವ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ ಖಾಜಾ ಹುಸೇನ ರೌಡಕುಂದ. ಅಧ್ಯಕ್ಷ ಪಕೀರಯ್ಯ ರಾಗಲ್ಪರವಿ ಸೇರಿದಂತೆ ಇತರರು ಉಪಸ್ಥತರಿದ್ದರು

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!