ಮಾಜಿ ಸಿಎಂ ಸಿದ್ದರಾಮಯ್ಯ ದಲಿತ ಸಮುದಾಯದ ವಿರೋಧ ಹೇಳಿಕೆ ನೀಡಿರುವುದು ಖಂಡನೀಯ : ಗಣೇಶ ಹೊರತಟ್ನಾಳ

ಕೊಪ್ಪಳ : ನಗರದ ಅಶೋಕ ವೃತ್ತದಲ್ಲಿ ಭಾರತೀಯ ಜನತಾ ಪಾರ್ಟಿ ಎಸ್ಸಿ ಮೋರ್ಚಾ ವತಿಯಿಂದ ಇತ್ತೀಚಿಗೆ ನಡೆದ ಸಿಂದಗಿ ವಿಧಾನಸಭಾ ಉಪ ಚುನಾವಣೆ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ದಲಿತರು ಹೊಟ್ಟೆ ಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ, ಎಂದು ಹಗುರವಾಗಿ ನೀಡಿದ ಹೇಳಿಕೆಯನ್ನು ಖಂಡಿಸಿ ಅಶೋಕ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ಹೊರತಟ್ನಾಳ ಮಾತನಾಡಿ ಸಿದ್ಧರಾಮಯ್ಯನವರೇ ನೀವು ೨೦೦೬ರಲ್ಲಿ ಜೆ.ಡಿ.ಎಸ್ ಪಕ್ಷ ತೊರೆದು ಕಾಂಗ್ರೇಸ್ ಪಕ್ಷಕ್ಕೆ ಹೋಗಿದ್ರಲ್ಲ ಯಾವ ಉದ್ದೇಶಕ್ಕೆ ಹೋದ್ರಿ ಎನ್ನುವುದನ್ನು ಮೊದಲು ಬಹಿರಂಗ ಪಡಿಸಬೇಕು ಮತ್ತು ಕಾಂಗ್ರಸ್ ಪಕ್ಷದ ಘಟಾನುಘಟಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಜಿ.ಪಮೇಶ್ವರ ಹೆಚ್.ಸಿ. ಮಹಾದೇವಪ್ಪ ಹೆಚ್ ಆಂಜನೇಯ ಕೆ.ಹೆಚ್ ಮುನಿಯಪ್ಪರಂತಹ ದೊಡ್ಡ ದೊಡ್ಡ ನಾಯಕರನ್ನು ಚುನಾವಣೆಯಲ್ಲಿ ಸೋಲಿಸುವಂತಹ ಸ್ಯ್ಟಾಟಜಿ ರಾಜಕಾರಣವನ್ನು ಮಾಡಿರುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕು. ಮತ್ತು ಈ ರಾಜ್ಯದಲ್ಲಿ ನೀವು ಮಾಜಿ ಮುಖ್ಯಮಂತ್ರಿಗಳಾಗಿ ಮತ್ತು ಪ್ರಸ್ತುತ ವಿರೋದ ಪಕ್ಷದ ನಾಯಕರಾಗಿ ಕೆಲಸ ನಿರ್ವಹಿಸಲು ಯಾರು ಕಾರಣರೆಂದು ಸಿದ್ದರಾಮಯ್ಯನವರು ಯೋಚಿಸಬೇಕೆಂದು ಎಚಿದರು.
ಭಾರತೀಯ ಜನತಾ ಪಾರ್ಟಿ ಎಸ್ಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷ ಸಣ್ಣ ಕನಕಪ್ಪ ಚಲವಾದಿ ಮಾತನಾಡಿ ಇತ್ತೀಚಿಗೆ ಸಿಂದಗಿ ಉಪ ಚುನಾವಣೆಯಲ್ಲಿ ದಲಿತ ಸಮುದಾಯದ ಬಗ್ಗೆ ವಿರೋಧ ಹೇಳಿಕೆ ನೀಡಿದ್ದು ಮತ್ತು ಹೆಚ್.ಆಂಜನೇಯರವರನ್ನು ಬೃಹತ್ ವೇದಿಕೆಯಲ್ಲಿ ವೇದಿಕೆಯಿಂದ ತಳ್ಳಿದ್ದು ಈ ರಾಜ್ಯದ ಜನ ನೋಡಿದ್ದಾರೆ ಆದ್ದರಿಂದ ಸಿದ್ದರಾಮಯ್ಯನವರು ಕೂಡಲೆ ಕ್ಷಮೆಯಾಚಿಸಬೇಕು ಹಾಗೂ ಹೇಳಿಕೆಯನ್ನು ಹಿಂಪಡೆಯಬೇಕು. ಒಂದು ವೇಳೆ ಪಡೆಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು.

ರಾಜ್ಯ ಕಾರ್ಯಕಾರಣಿ ಸದಸ್ಯ ಕನಕಮೂರ್ತಿ ಚಲವಾದಿರವರು ಮಾತನಾಡಿ ಸಿದ್ದರಾಮಯ್ಯನವರು ಸಂವಿಧಾನ ವಿರೋಧ ಹೇಳಿಕೆ ನೀಡಿರುವುದು ಖಂಡನೀಯ ದಳಿತರ ಬಗ್ಗೆ ಹಗುರವಾಗಿ ಮಾತನಾಡಬೇಡಿ ಪ್ರಸ್ತುತ ಅಧಿಕಾರದಲ್ಲಿದ್ದು. ಸೇವೆ ಸಲ್ಲಿಸುತ್ತಿದ್ದಾರೆಂದರೆ ಅದಕ್ಕೆ ದಲಿತ ಸಮುದಾಯದವರು ಕಾರಣ ಎಂಬುದು ಅರಿತುಕೊಳ್ಳಬೇಕು ಹೀಗೆ ಮುಂದುವರೆದು ಮಾತನಾಡಿದ್ದೆ ಆದರೇ ಈ ರಾಜ್ಯದ ದಲಿತ ಸಮುದಾಯ ಮತ್ತು ಬಾಬಾ ಸಾಹೇಬ ಅಂಬೇಡ್ಕರವರು ತಮ್ಮನ್ನು ಕ್ಷಮಿಸುವುದಿಲ್ಲ ಎಚಿದರು. 

ಪ್ರತಿಭಟನೆಚಿiಲ್ಲಿ ನಗರ ಘಟಕದ ಅಧ್ಯಕ್ಷ ಸುನೀಲ್ ಹೆಸರೂರ, ಎಸ್.ಸಿ ಮೋರ್ಚಾ ಉಸ್ತುವಾರಿ ವೀಣಾ ಬನ್ನಿಗೋಳ, ಪಂಪಯ್ಯ ಹಿರೇಮಠ, ಶೇಖರಪಾಟಿಲ್, ಗವಿಸಿದ್ದಪ್ಪ ಗಿಣೀಗೇರಿ, ಮಂಜುನಾಥ ಮುಸಲಾಪುರ, ಸುಭಾಸ್ ಮದಕಟ್ಟಿ, ಸಂಗಪ್ಪ ಜೋಗಣ್ಣನವರ, ಜಮದಗ್ನಿ ಚೌಡ್ಕಿ, ಪ್ರಕಾಶ ಹಿರೇಮನಿ, ಹನುಮಂತ ಬಸರಗಿಡದ, ಗವಿ ಭಜಂತ್ರಿ, ಮಹೇಶ ಕಂದಾರಿ, ಗೀತಾ ಮುತ್ತಾಳ, ರಾಧಾ ಕನಕಮೂರ್ತಿ, ನಿಂಗರಾಜ ಕಟ್ಟಿಮನಿ, ಬಸವರಾಜ ಗಂಗಾವತಿ, ಹಾಗೂ ವಿವಿಧ ಮೊರ್ಚಾದ ಪದಾಧಿಕಾರಿಗಳು, ಬಿಜೆಪಿ ಪಕ್ಷದ ವಿವಿಧ ಮುಖಂಡರು, ಕಾರ್ಯಕರ್ತರು ಪಾಲ್ಗೋಂಡಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!