ಮಾಜಿ ಸೈನಿಕರಿಗೆ ಸನ್ಮಾನ

ಕೊಪ್ಪಳ: ಮಾಜಿ ಸೈನಿಕರಿಗೆ ಬಿಜೆಪಿ ನಗರ ಘಟಕ ವತಿಯಿಂದ, ವಾರ್ಡ್ ಸಂಖ್ಯೆ  29ರ ಬೂತ್ ಕಮಿಟಿ ಅಧ್ಯಕ್ಷರಾದ ಅಮರೇಶ್ ಮುರಲಿಯವರು ಸನ್ಮಾನ ಆಯೋಜಿಸಿದ್ದರು.

ಕಾರ್ಯಕ್ರಮದಲ್ಲಿ  ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳು ಚಂದ್ರಶೇಖರ್ ಗೌಡ ಪಾಟೀಲ್ ಹಲಿಗೇರಿ ಮಾತನಾಡಿ, ಸವಿಸ್ತಾರವಾಗಿ ಸೈನಿಕರ ಬಲಿದಾನ ಹಾಗೂ ತ್ಯಾಗವನ್ನು ಗುರುತಿಸುವಲ್ಲಿ ಬಿಜೆಪಿಯವರ ವಾಜಪೇಯಿ ಅವರು ಪ್ರಮುಖ ಪಾತ್ರ ವಹಿಸಿದ ಬಗ್ಗೆ ಹಾಗೂ ಸೈನಿಕರನ್ನು ಗುರುತಿಸಿ ಅವರಿಗೆ ದೇಶಾದ್ಯಂತ ಹೆಚ್ಚಿನ ಗೌರವಗಳನ್ನು ಸಿಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ವಿವರಿಸಿದರು.

ಅದೇ ರೀತಿ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರು ಮುಂದುವರಿಸಿಕೊಂಡು ಹೋಗುತ್ತಿರುವುದರ ಬಗ್ಗೆ ಪ್ರಾಸ್ತಾವಿಕವಾಗಿ ತಿಳಿಸಿದರು.

ಅದೇ ರೀತಿಯಾಗಿ ಇನ್ನೊಬ್ಬ ಅತಿಥಿಯಾಗಿ ಆಗಮಿಸಿದ ರಾಜ್ಯ ಕಾರ್ಯದರ್ಶಿಗಳಾದ ಹೇಮಲತಾ ನಾಯಕ ರವರು ಮೋದಿ ಸರ್ಕಾರದಲ್ಲಿ ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹಾಗೂ ಬುಲೆಟ್ ಪ್ರೂಫ್ ಜಾಕೆಟ್ ಗಳನ್ನು ಹಾಗೂ ಸೈನಿಕರಿಗೆ ಸಿಗಬೇಕಾದ ಎಲ್ಲಾ ಸೌಲತ್ತುಗಳನ್ನು ನಮ್ಮ ಬಿಜೆಪಿ ಸರಕಾರ ಒದಗಿಸಿಕೊಡುತ್ತಿದೆ. ಬಿಜೆಪಿ ಸರ್ಕಾರವು ಸೈನಿಕರಿಗೆ ಹೆಚ್ಚಿನ ಪ್ರೋತ್ಸಾಹ ಹಾಗೂ ಸವಲತ್ತುಗಳನ್ನು ನೀಡುವಲ್ಲಿ ಬಿಜೆಪಿ ಪ್ರಮುಖ ಪಾತ್ರ ವಹಿಸಿದೆ ಎಂದು ಸವಿಸ್ತಾರವಾಗಿ ತಿಳಿಸಿದರು.

ಕಾರ್ಯಕ್ರಮದ ಆಯೋಜಕರಾದ ಅಮರೇಶ್ ಮುರಲಿ 75 ನೇ ಸ್ವಾತಂತ್ರೋತ್ಸವ ಕಾರ್ಯಕ್ರಮದಲ್ಲಿ ಸೈನಿಕರಿಗೆ ಸನ್ಮಾನಿಸುವಯದರಿಂದ ಯಶಸ್ವಿ ಕಾರ್ಯಕ್ರಮ ಆಗಿದೆ ಎಂದು ಈ ಸಂದರ್ಭದಲ್ಲಿ ಸ್ಮರಿಸಿದರು.

ಬಿಜೆಪಿಯ ನಗರ ಘಟಕದ ಅಧ್ಯಕ್ಷ ಸುನಿಲ್ ಹೆಸರೂರು, ಕವಿತಾ ಪಾಟೀಲ್, ನಾಗರತ್ನ ಪಾಟೀಲ್, ಶ್ರೀಧರ್ ಗೌಡ್ರು ಬನ್ನಿಕೊಪ್ಪ, ಶಿವಯೋಗಿ ಹಾವಿನಾಳ, ಗವಿಸಿದ್ದಪ್ಪ ನೆಳಜೇರಿ, ಹುಡುಕೋ ಕಾಲೋನಿಯ ನಿವಾಸಿಗಳಾದ
ಬಸವರಾಜ್ ತಳಗೇರಿ, ಸುನಿಲ್ ಮಹೇಶ್ ಎಲಿಗಾರ್ ಇತರರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!