ಮುಸ್ಲಿಂ ಸಮುದಾಯದವರನ್ನೇ ಗುರಿಯಾಗುವುದು ಸರಿಯಲ್ಲ : ನಿರುಪಾದಿ ಸಾಸಲಮರಿ

ಸಿಂಧನೂರು : ರಾಜ್ಯದಲ್ಲಿ ಕೋವಿಡ್ – ೧೯ ರ ಸೋಂಕಿನ ಪ್ರಕರಣವು ದಿನದಿಂದ ದಿನಕ್ಕೆ ತನ್ನ ತೀವ್ರತೆಯನ್ನು ಹೆಚ್ಚಿಸುತ್ತಲಿದೆ.ಸೋಂಕಿನ ತೀವ್ರತೆ ಹೆಚ್ಚಳದಿಂದ ರಾಜ್ಯದ ಜನರು ನಲುಗಿ ಹೋಗಿದ್ದಾರೆ.
ಜನರ ಸಂಕಷ್ಟಕ್ಕೆ ಸಹಾಯ ಮಾಡಬೇಕಾದ ಅನಿವಾರ್ಯತೆ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ಕೋಮುಗಲಭೆ ಸೃಷ್ಟಿಸಲು ಹೊರಟಿರುವುದು ನಾಚಿಕೆಗೇಡಿನ ವಿಷಯ. ಬೆಡ್ ಬ್ಲಾಕ್ ದಂಧೆಯಲ್ಲಿ ಬಿ ಬಿ ಎಂ ಪಿ ದಕ್ಷಿಣ ವಲಯದಲ್ಲಿ ವಾರ್ ರೂಮ್ ನಂಬರನಲ್ಲಿ ನೆಡೆಯುತ್ತಿದ್ದ ದಂಧೆ ವಿಚಾರವಾಗಿ ಹಿಂದೂ ಮುಸ್ಲಿಂ ೨೦೬ ಜನರಲ್ಲಿ ಕೇವಲ ಮುಸ್ಲಿಂ ಸಮುದಾಯದ ೧೭ ಜನರನ್ನು ವಜಾ ಗೊಳಿಸುವ ಮುಖಾಂತರ ಜಾತಿ ಧರ್ಮಗಳ ಹೆಸರಿನ ರಾಜಕಾರಣಕ್ಕೆ ಮುಂದಾಗಿ ಕೇವಲ ಮುಸ್ಲಿಂ ಸಮುದಾಯದ ಜನರನ್ನೆ ಗುರಿಯಾಗಿಸುವದು ಸರಿಯಲ್ಲ.
ಬೆಡ್ ಬ್ಲಾಕ್ ದಂಧೆಯಲ್ಲಿ ತೊಡಗಿರುವ ಎಲ್ಲ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿ ಎಂದು ಜೈ ಭೀಮ್ ಘರ್ಜನೆ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ನಿರುಪಾದಿ ಸಾಸಲಾಮರಿ ಆಕ್ರೋಶ ವ್ಯಕ್ತಪಡಿಸಿದರು
ನಗರದ ಮಿನಿ ವಿಧಾನ ಸೌಧದ ಮುಂದೆ ಸಂಸದ ತೇಜಸ್ವಿ ಸೂರ್ಯ ಅವರನ್ನು ತಕ್ಷಣ ಸಂಸದ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿ ತಹಶೀಲ್ದಾರರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಅವರು ಮಾತನಾಡುತ್ತ ಈ ದೇಶದ ಮತ್ತು ಈ ರಾಜ್ಯದ ಇತಿಹಾಸದಲ್ಲಿ ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ವಿಷ ಬೀಜ ಬಿತ್ತಿ ಪ್ರಜಾಪ್ರಭುತ್ವದಲ್ಲಿ ಜಾತಿ ಧರ್ಮಗಳ ಮಧ್ಯೆ ಕೋಮುಗಲಭೆ ಸೃಷ್ಟಿಸುವ ಇಂತಹ ಮಾನಗೆಟ್ಟ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗುತ್ತಲಿದೆ.
ಸಂಸದ ತೇಜಸ್ವಿ ಸೂರ್ಯನಂತಹ ರಾಜಕಾರಣಿಗಳಿಗೆ ಜನ ಹಿತಕ್ಕಿಂತ ಜಾತಿ ಮತ್ತು ಧರ್ಮಗಳ ಹಿತ ಶಕ್ತಿ ಹುಚ್ಚು ಹೆಚ್ಚಾಗಿದೆ.ಇದು ಜಾತಿ ಧರ್ಮಗಳನ್ನು ಒಂದೇ ಎಂದು ಸಾರುವ ಘನ ಸಂವಿಧಾನದ ಪ್ರಜಾಪ್ರಭುತ್ವ ಕ್ಕೆ ತುಂಬಾ ಅಪಾಯಕಾರಿ ಸಂಗತಿ.ಇಂತಹ ಜಾತಿ ವಾದಿ ರಾಜಕಾರಣಿಗಳ ವಿರುದ್ಧ ಪ್ರತಿಯೊಬ್ಬರು ದ್ವನಿ ಎತ್ತಿ ಸಂಘಟಿತ ಹೋರಾಟಕ್ಕೆ ಮುಂದಾಗಬೇಕೆಂದು ತಿಳಿಸಿದರು. ಸಂಸದ ತೇಜಸ್ವಿ ಸೂರ್ಯ ನೈತಿಕತೆ ಹೊಣೆ ಹೊತ್ತು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬೆಡ್ ಬ್ಲಾಕ್ ದಂಧೆಯಲ್ಲಿ ಭಾಗಿಯಲ್ಲಿರುವ ತಪ್ಪಿಸ್ಥ ಆರೋಪಿಗಳು ಯಾರೇ ಇರಲಿ ಸರ್ಕಾರ ಕಠಿಣ ಶಿಕ್ಷೆ ವಿಧಿಸಬೇಕು. ಲಾಕ್ ಡೌನ್ ಜಾರಿಯಿಂದ ಜೀವನ ನಿರ್ವಹಣೆ ಮಾಡಲು ಹೆಣಗಾಡುತ್ತಿರುವ ಬಡವರಿಗೆ.
ದುಡಿಯುವ ವರ್ಗಗಳ ಜನರಿಗೆ.ಕಾರ್ಮಿಕರಿಗೆ ಸರ್ಕಾರ ತಕ್ಷಣ ಆರ್ಥಿಕ ನೆರವಿಗೆ ಧಾವಿಸಬೇಕು.ಕೋವಿಡ್ ಸೋಂಕಿನಿಂದ ಮೃತ ಪಟ್ಟ ಜನರ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು.ಜಾತಿ ಮತ್ತು ಧರ್ಮಗಳ ಹೆಸರಿನಲ್ಲಿ ರಾಜಕಾರಣ ಮಾಡುವ ರಾಜಕಾರಣಿಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು
ಈ ಸಂದರ್ಭದಲ್ಲಿ ಸಂಘಟನೆ ಉಪಾಧ್ಯೆಕ್ಷ ಸಿದ್ದಪ್ಪ ಸೋಮಲಾಪುರ.ಪ್ರಧಾನ ಕಾರ್ಯದರ್ಶಿ ಹೊನ್ನೂರು ಕಟ್ಟಿಮನಿ.ಶರಣಬಸವ ಪಗಡದಿನ್ನಿ. ಹೇಮಣ್ಣ ಉಪ್ಪಳ.ವೀರೇಶ ಕುನ್ನಟಗಿ ಸೇರಿದಂತೆ ಇತರರು ಇದ್ದರ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!