ಮೆಣಸಿನಕಾಯಿಯಲ್ಲಿ ಬರುವ ಕೀಟಗಳು ಹಾಗು ಅವುಗಳ ನಿರ್ವಹಣಾ ಕ್ರಮಗಳು


*2. ಸಸಿ ಕತ್ತರಿಸುವ ಹುಳು* ಇದರ ಹಾನಿಯ ಲಕ್ಷಣ ಮರಿಹುಳು ಸಸಿಗಳ ಕಾಂಡಗಳನ್ನು ಭೂಮಿಯ ಮಟ್ಟಕ್ಕೆ ಕತ್ತರಿಸಿ, ಇದರಿಂದ ಸಸಿಗಳು ಒಣಗಿ ಸಾಯುತ್ತವೆ. ಇದರ ನಿರ್ವಹಣಾ ಕ್ರಮ ಪ್ರತಿ ಲೀಟರ್ ನೀರಿಗೆ 2ಮಿ ಲೀ ಕ್ಲೋರೋಫೈರಿಫಾಸ್ 20EC or 2ಮಿ ಲೀ ಕ್ವಿನಾಲ್ ಫಾಸ್ 25EC ಬೆರಿಸಿ ಗಿಡದ ಸುತ್ತಲೂ ತೋಯಿಸಿದರೆ ಈ ಕೀಟವನ್ನು ನಿಯಂತ್ರಿಸಬಹುದಾಗಿದೆ.
*3. ಕಾಯಿ ಕೊರೆಯುವ ಕೀಟ* ಇದರ ಹಾನಿ ಮರಿ ಹುಳಗಳು ಕಾಯಿಯನ್ನು ಹೆಚ್ಚಾಗಿ ತೊಟ್ಟಿನ ಕೆಳಭಾಗದಲ್ಲಿ ಕೊರೆದು ಒಳಸೇರಿ ತಿನ್ನುತ್ತವೆ ಅಂತಹ ಕಾಯಿಗಳು ಬಿಳಿ ಬಣ್ಣಕ್ಕೆ ತಿರುಗಿ ನಂತರ ಕೊಳೆತು ಹೋಗುತ್ತದೆ. ಇದರ ನಿರ್ವಹಣಾ ಪ್ರತಿ ಲೀಟರ್ ನೀರಿಗೆ 0.5gm ಫ್ಲೂಬೆಂಡಿಮೈಡ 20WDG or 2ಮಿಲಿ ಕ್ಲೋರೋಫೈರಿಫಾಸ್ 20EC ಅಥವಾ 4ಗ್ರಾಂ ಕಾರ್ಬರಿಲ್ ಬೆರೆಸಿ ಸಿಂಪಡಿಸಬೇಕು. ಇವುಗಳ ಬದಲು ಶೇಕಡಾ 5ರ ಬೇವಿನ ಬೀಜದ ಕಷಾಯವನ್ನು 7 ಹಾಗು 11 ವಾರಗಳ ನಂತರ ಅಥವಾ ಶೇಕಡಾ 5ರ ಬೇವಿನ ಬೀಜದ ಕಷಾಯವನ್ನು 7ವಾರಗಳ ನಂತರ ಎನ್ ಪಿವಿಯನ್ನು (250 LE) ಹನ್ನೊಂದು ವಾರಗಳ ನಂತರ ಸಿಂಪರಣೆ ಮಾಡಬಹುದು.
0.5 ml ಇಂಡಾಕ್ಸಿಕಾರ್ಬ್ 14.5EC or 1.0ml ಸಯಾಂಟಿೃನಿಲಿಪ್ರೊಲ  10.26 OD or 0.2gm ಇಮಾಮೆಕ್ಟಿನ್ ಬೆಂಜೋಯೇಟ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿದರೆ ಈ ಕೀಟವನ್ನು ನಿಯಂತ್ರಿಸಬಹುದಾಗಿದೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!