ಮೆಣಸಿನಕಾಯಿಯಲ್ಲಿ ಬರುವ ಪ್ರಮುಖ ಕೀಟಗಳು ಹಾಗೂ ಅವುಗಳ ನಿರ್ವಹಣಾ ಕ್ರಮಗಳು


1. ಥ್ರಿಪ್ಸ್ ನುಸಿ ಹೇನು ಹಾಗು ಜೇಡ ನುಸಿ: ಇದರ ಹಾನಿಯ ಲಕ್ಷಣಗಳು ಈ ಮೂರು ಕೀಟಗಳು ಎಲೆಗಳಿಂದ ರಸವನ್ನು ಹೀರುವುದರಿಂದ ಎಲೆಗಳು ಮೇಲ್ಭಾಗಕ್ಕೆ ಮತ್ತು ಕೆಳಭಾಗಕ್ಕೆ ಮುರುಟಾಗುತ್ತವೆ. ಮೊಗ್ಗುಗಳು ಎಳೆ ಭಾಗಗಳು ಗಟ್ಟಿಯಾಗಿ ವಿಕಾರವಾಗಿ ಏನು ಗಳ ಹಾವಳಿ ಜಾಸ್ತಿಯಾದಾಗ ಕಪ್ಪು ಬೂಷ್ಟ್ ಬೆಳವಣಿಗೆ ಯಾಗುತ್ತದೆ. ಥ್ರಿಪ್ಸ್ ಮತ್ತು ಜೇಡ ನುಸಿಗಳು ಮುಟುರು ರೋಗವನ್ನು ಉಂಟುಮಾಡುವ ವೈರಸ್ಸನ್ನು ಹರಡುಸುವ ಸಂಭವವಿರುತ್ತದೆ. ಇದರ ನಿರ್ವಹಣೆ ಬಿತ್ತನೆಯಾದ 3ವಾರಗಳ ನಂತರ 1ಮಿಲಿ ಫಿಪ್ರೋನಿಲ್ ಅಥವಾ 1.7 ಮೀ ಲೀ ಡೈಮಿಥೋಯೇಟ್ 30EC ಅಥವಾ 1ಗ್ರಾಂ ಅಸಿಫೇಟ್ 75SP ಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. 2ಮತ್ತು 5ವಾರಗಳ ನಂತರ ಇದೇ ಸಿಂಪರಣೆಯನ್ನು ಪುನಃ ಬಳಸಬೇಕು. ಮುರುಟು ರೋಗದ ಬಾಧೆ ತಡೆಗಟ್ಟಲು ಶೇಕಡಾ 0.5 ರ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಸೀಮೆಎಣ್ಣೆ ಕಷಾಯವನ್ನು ಬೇವು ಎಣ್ಣೆ ಕೀಟನಾಶಕದೊಂದಿಗೆ 2.5 ಮಿ ಮಿ ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಅವಶ್ಯವಿದ್ದಾಗ ಸಿಂಪರಣೆ ಮಾಡಬೇಕು. ಬಿತ್ತಿದ ಏಳನೇ ಹಾಗೂ ಒಂಬತ್ತನೇ ವಾರ ಗಳಲ್ಲಿ ಶೇಕಡ ಐದರ ಪಂಚಗವ್ಯವನ್ನು ಸಿಂಪಡಿಸಿದಾಗ ನುಸಿ ಬಾಧೆಯನ್ನು ನಿಯಂತ್ರಿಸಬಹುದು. ಮೆಣಸಿನಕಾಯಿ ನಾಟಿ ಮಾಡುವ ಒಂದು ವಾರ ಮೊದಲು ಬೆಳೆಸುತ್ತಲೂ ಎರಡು ಸಾಲು ಗೋವಿನಜೋಳವನ್ನು ಬಿತ್ತಬೇಕು ಹಾಗೂ ಶಿಫಾರಸು ಮಾಡಿದ್ದಕ್ಕಿಂತ ಶೇಕಡಾ ಇಪ್ಪತ್ತೈದರಷ್ಟು ಪೊಟ್ಯಾಶ್ ಗೊಬ್ಬರವನ್ನು ಹೆಚ್ಚಾಗಿ ಬಳಸುವುದರಿಂದ ಕ್ರಿಪ್ಸ್ ಕೀಟದ ಬಾಧೆ ಕಡಿಮೆಯಾಗುವುದು.
ನಾಟಿ ಮಾಡುವ ಪೂರ್ವ ಪ್ರತಿ ಹೆಕ್ಟರಿಗೆ 2.5 ಟನ್ ನಷ್ಟು ಎರೆಹುಳು ಗೊಬ್ಬರ ಮತ್ತು ನಾಟಿ ಮಾಡಿದ 4ವಾರಗಳ ನಂತರ 1ಗ್ರಾಂ ಡೈಫೆಂತುರಾನ್ 50WP ಹಾಗೂ 8ವಾರಗಳ ನಂತರ ಪ್ರತಿ ಲೀಟರ್ ನೀರಿನಲ್ಲಿ 2ಮಿ ಲೀ ಪ್ರೊಫೆನೋಫಾಸ್ 50EC ಬೆರೆಸಿ ಸಿಂಪಡಿಸಿದರೆ ಈ ಕೀಟಗಳನ್ನು ನಿಯಂತ್ರಿಸಬಹುದಾಗಿದೆ..

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!