ಮೇ ೨೬ ರಂದು ಅಂಬೇಡ್ಕರ್ ಕಂಚಿನ ಪುತ್ಥಳಿ ಅನಾವರಣ ಸಾದ್ಯತೆ: ಕುಂಟೋಜಿ ಮರಿಯಪ್ಪ

ಗಂಗಾವತಿ: ವಿಶ್ವ ಜ್ಞಾನಿ,ಸಂವಿಧಾನದ ಶಿಲ್ಪಿ ಸಮಾನತೆಯ ಹರಿಕಾರ,ಭಾರತದ ರತ್ನ ಡಾ,ಬಿ ಅರ್,ಅಂಬೇಡ್ಕರ್ ರವರ ೧೩೦ ನೇಯ ಜಯಂತಿಯನ್ನು ಮುಂದೂಡಲಾಗಿದೆ, ಎಂದು ದಲಿತ ಮುಖಂಡ,ಚಲುವಾದಿ ಸಮಾಜದ ಹಿರಿಯ ಕುಂಟೋಜಿ ಮರಿಯಪ್ಪ ಹೇಳಿದರು.
ದಿ:೨೩ ಎಪ್ರೀಲ್ ೨೦೨೧ರ ಶುಕ್ರವಾರದಂದು ಗಂಗಾವತಿ ನಗರದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿ ನೆಡಸಿ ಮಾತನಾಡಿದವರು ಇಡೀ ದೇಶವೇ ಕೋರೋನ ಎಂಬ ಮಹಾಮಾರಿ ಹರಡುತ್ತಿರುವುದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಈಗಾಗಲೇ ಕಾರ್ಯಕ್ರಮಕ್ಕೆ ಬೇಕಾದ ಪೂರ್ವಭಾವಿಯಾಗಿತ್ತು, ೫೦೦ ಸೀರೆ ಸ್ತ್ರೀಯರಿಗೆ ಊಟದ ವ್ಯವಸ್ಥೆ,
ಕಳಸ,ಡೊಳ್ಳು ಕುಣಿತ ಹೀಗೆ ಹಲವಾರು ಯೋಜನೆಗಳೊಂದಿಗೆ ಸಿದ್ದವಾಗಿತ್ತು.ಜೀವನಕ್ಕಿಂತ ಜೀವ ಮುಖ್ಯ ಅದರಿಂದ ಕಾರ್ಯಕ್ರಮ ಮುಂದೂಡಲಾಗಿದೆ.
ಮೇ ೪ ರ ನಂತರ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಗುತ್ತದೆ ಎಂದರು.
ಗಂಗಾವತಿ ನಗರದ ಅಂಬೇಡ್ಕರ್ ರವರ ಮೂರ್ತಿ ಸ್ಥಪನೆ ನಗರಸಭೆಯಲ್ಲಿ ೧೦-೧೧ ಲಕ್ಷ ರೂಪಾಯಿ ಇದೆ ಶಾಸಕರ ಅನುದಾನದಲ್ಲಿ ೧೦ ಲಕ್ಷ ರೂಪಾಯಿ ಕೊಟ್ಟರೆ ಮೇ ೨೬ ರಂದ ಬುದ್ಧ ಪೂರ್ಣಿಮಾ ದಿನದಂದು ಅನಾವರಣ ಮಾಡಲಾಗುತ್ತದೆ ಎಂದು ತಿಳಿಸಿದರು.
ಸರ್ಕಾರದಿಂದ ಅಂಬೇಡ್ಕರ್ ರವ ಭವನಕ್ಕೆ ೨ ಕೋಟಿ ರೂಪಾಯಿ ಬಂದಿದೆ ಸ್ಥಳ ಪರೀಶಿಲನೆ ಮಾಡಿ ಭವನ ಕಟ್ಟುವುದಕ್ಕೆ ಏರ್ಪಾಡು ಮಾಡಲಾಗುತ್ತದೆ ಎಂದ ಹೇಳಿದರು. ಈ ಸಂದರ್ಭದಲ್ಲಿ ಡಿ,ಭೋಜಪ್ಪ, ಕೆ ಅಂಬಣ್ಣ,ಮಾಗಿ ಹುಲುಗಪ್ಪ,ಮಾಸ್ತರ್ ಹುಲಗಪ್ಪ,ಸಣ್ಣ ಕನಕಪ್ಪ ಎಸ್,ಸಿ ಮೊರ್ಚ ಜಿಲ್ಯಾಧ್ಯಕ್ಷರು ,ದುರುಗಪ್ಪಉಪಸ್ಥಿತರಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!