ಮೋದಿ – ಯಡಿಯೂರಪ್ಪನ ಸರ್ಕಾರಗಳು ಹೆಣದ ವ್ಯಾಪಾರಿಗಳ ಸರ್ಕಾರ : ಹೊಸಮನಿ


ಸಿಂಧನೂರು : ಕೋವಿಡ್ ೧೯ ರ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ಪೂರ್ವಸಿದ್ಧತೆ ಮಾಡಿಕೊಳ್ಳದೆ ತರಾತುರಿಯಲ್ಲಿ ಲಾಕ್ ಡೌನ್ ಕಪ್ಯೂ೯ ದಂತಹ ಕಠಿಣ ನಿಯಮಗಳನ್ನು ಜಾರಿಗೊಳಿಸಿದ ಸರ್ಕಾರಗಳು ಸಮಸ್ತ ದುಡಿಯುವ ವರ್ಗಗಳ ವಿರೋಧಿ ತನವನ್ನು ಪ್ರದರ್ಶನ ಮಾಡಿವೆ. ಮತ್ತು ಕಾರ್ಮಿಕರ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಕೇವಲ ೪ ಕೋರ್ಟ್ ಬಿಲ್ಲುಗಳನ್ನಾಗಿ ಮಾಡಲಾಗಿದೆ. ದೇಶದಲ್ಲಿ ಕೊರೋನ ಸೋಂಕಿತ ಜನರಿಗೆ ಆಸ್ಪತ್ರೆಗಳಲ್ಲಿ ಗುಣಮಟ್ಟದ ಚಿಕಿತ್ಸೆ ಮತ್ತು ಆಕ್ಸಿಜನ್ ಸಿಗದೆ ಬೀದಿ ಬೀದಿಗಳಲ್ಲಿ ತಮ್ಮ ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೇಂದ್ರದ ಬಿಜೆಪಿ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರಗಳು ಹೆಣದ ವ್ಯಾಪಾರಿಗಳ ಸರ್ಕಾರ ವಾಗಿವೆ ಎಂದು ಶ್ರಮಜೀವಿ ಎಪಿಎಂಸಿ ಹಮಾಲರ ಸಂಘ ತಾಲೂಕ ಘಟಕದ ಕಾರ್ಯದರ್ಶಿ ಹೆಚ್. ಆರ್.ಹೊಸಮನಿ ಕಿಡಿ ಕಾರಿದರು
ನಗರದ ಎಪಿಎಂಸಿ ಶ್ರಮಿಕ ಭವನದಲ್ಲಿ೧೩೫ ನೇ ಅಂತಾರಾಷ್ಟ್ರೀಯ ಮೇ ದಿನಾಚರಣೆಯನ್ನು ಸರಳವಾಗಿ ಆಚರಣೆ ಮಾಡಿದ ಸಂದರ್ಭದಲ್ಲಿ ಅವರು ಮಾತನಾಡುತ್ತ ಲಕ್ಷಾಂತರ ಕಾರ್ಮಿಕರ ಜೀವನ್ಮರಣದ ಮೂಲಕ ೮ ಗಂಟೆ ಅವಧಿ ಕೆಲಸಕ್ಕಾಗಿ ಹೋರಾಡಿ ಕಾರ್ಮಿಕರ ರಕ್ತದಲ್ಲಿ ಅದ್ದಿ ತೆಗೆದ ತ್ಯಾಗ ಬಲಿದಾನದ ಸಂಕೇತವೆ ಮೇ ಒಂದನೇ ತಾರೀಕು ಕಾರ್ಮಿಕರ ದಿನಾಚರಣೆ ಆಗಿದೆ. ಇವತ್ತು ಈ ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಕಾರ್ಮಿಕರ ಹಾಗೂ ದುಡಿಯುವ ವರ್ಗಗಳ ಬದುಕಿಗೆ ಬರೆ ಎಳೆಯುತ್ತಿವೆ.ಬಡಜನರು.ರೈತರು ಈ ಸರ್ಕಾರಗಳ ಆಡಳಿತದ ನೀತಿಯಿಂದ ರೋಸಿ ಹೋಗಿದ್ದಾರೆ.ದಲಿತರು.ಕಾರ್ಮಿಕರು.ಅಲ್ಪ ಸಂಖ್ಯಾತರು ಈ ಬಿಜೆಪಿ ಸರ್ಕಾರಗಳ ವಿರುದ್ಧ ಒಗ್ಗಟ್ಟಿನಿಂದ ಹೋರಾಟಕ್ಕೆ ಚಾಲನೆ ನೀಡಬೇಕಾಗಿದೆ.ಈ ದೇಶದ ಸೋದರತೆ ಮತ್ತು ಸಮಾನತೆ ಹಾಗೂ ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕನ್ನು ಸ್ವತಂತ್ರವಾಗಿ ನೀಡಿದ
ಡಾ!! ಬಾಬಾಸಾಹೇಬ ಅಂಬೇಡ್ಕರವರ ನೀಡಿದ ಘನ ಸಂವಿಧಾನದ ರಕ್ಷಣೆಗೆ ಮುಂದಾಗಬೇಕಿದೆ. ಇವತ್ತು ದೇಶದಲ್ಲಿ ಮತ್ತು ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಿಂದ ಜೀವನ ನಿರ್ವಹಣೆ ಮಾಡಲು ಸಂಕಷ್ಟ ಎದರಿಸುತ್ತಿರುವ ಎಲ್ಲ ವರ್ಗದ ಬಡವರ ಮತ್ತು ಅಸಂಘಟಿತ ಕಾರ್ಮಿಕರ ತಲಾ ಒಂದು ಕುಟುಂಬಕ್ಕೆ ತಕ್ಷಣ ೨೦.೦೦೦ ಸಾವಿರ ರೂಪಾಯಿಗಳ ಪರಿಹಾರ ನೀಡಬೇಕು. ಹಾಗೂ ಪ್ರತಿ ತಿಂಗಳು ಪ್ರತಿ ಕುಟುಂಬ ಒಂದಕ್ಕೆ ೨೦ ಕೆ ಜಿ ಪಡಿತರ ಧಾನ್ಯಗಳನ್ನು ಉಚಿತವಾಗಿ ವಿತರಣೆ ಮಾಡಬೇಕು.ಹಾಗೆಯೇ ಕೋರೋನ ಸೋಂಕಿತ ಜನರಿಗೆ ಉಚಿತವಾಗಿ ಲಸಿಕೆಯನ್ನು ಹಾಕಿಸಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡಿದ ಕ್ರಾಂತಿಕಾರಿ ಅಮರ ವೀರರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ಮಾಡಲಾಯಿತು.ತಾಲೂಕ ಘಟಕದ ಅಧ್ಯಕ್ಷ ಮಾಬುಸಾಬು ಬೇಳ್ಳಟ್ಟಿ ದ್ವಜಾರೋಹಣ ನೆರವೇರಿಸಿದರು.ಸಂಘಟನೆ ಎಲ್ಲ ಮುಖಂಡರು ಕಾರ್ಮಿಕರ ಪರ ಘೋಸನೆಗಳನ್ನು ಕೂಗುತ್ತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ಆಡಳಿತ ನೀತಿಯನ್ನು ಖಂಡಿಸಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಸಂಘಟನೆ ಗೌರವಾಧ್ಯಕ್ಷ ಎಂ.ಗಂಗಾಧರ. ಉಪಾಧ್ಯಕ್ಷ ನಾಗಪ್ಪ ಉಮಲೂಟಿ.ತಿಮ್ಮಣ್ಣ ಯಾಧವ. ದೌಲಸಾಬ ಮುದುಗಲ್ಲ.ಮುದಿಯಪ್ಪ ಹನುಮನಗರ ಕ್ಯಾಂಪ್.ರಮೇಶ್ ಹಟ್ಟಿ ಕ್ಯಾಂಪ್. ಜಲಾಲ ಸಾಬ್ ಜವಳಗೆರ.ಪರಶುರಾಮ.ಕನಕಪ್ಪ ಪೂಜಾರ. ರಮ್ಜಾನ ಸಾಬ್. ಬಾಷಾಸಾಬ್.ಮದರ ಸಾಬ್ ಸೇರಿದಂತೆ ಇನ್ನಿತರರು ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರ

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!