ಯಾರಿಗೆ ಇತಿಹಾಸ ಗೋತ್ತಿಲ್ಲವೂ ಅವರು ದೇಶರಚನೆ ಮಾಡಲು ಸಾಧ್ಯವಿಲ್ಲ: ಸಿದ್ದರಾಮಯ್ಯ

ಕುಷ್ಟಗಿ : ಡಾ. ಬಿ. ಆರ್. ಅಂಬೇಡ್ಕರ್ ಕರಡು ಸಮಿತಿ ಅಧ್ಯಕ್ಷರಾಗಿ, ಅವರೊಂದಿಗೆ ಸಮಿತಿಯ ಇತರ ೬ ಸದಸ್ಯರು ಸೇರಿ ಸಂವಿಧಾನ ರಚನೆಯಾಯಿತು. ಬಾರತ ದೇಶ ವೈವಿಧ್ಯತೆಯಿಂದ ಕೂಡಿದ ದೇಶ ಜಗತ್ತಿನಲ್ಲಿ ಯಾವ ದೇಶದಲ್ಲಿ ಇಂತಹ ವೈವಿಧ್ಯತೆ ಕಾಣುವುದಿಲ್ಲ ಅದರ ಅನುಗುಣವಾಗಿ ಸಂವಿಧಾನ ರಚನೆ ಮಾಡುವುದು ಅಷ್ಟು ಸುಲುಭವಾಗಿರಲಿಲ್ಲ ಪ್ರಪಂಚದ ಅನೇಕ ಸಂವಿಧಾನಗಳನ್ನು ಓದಿ ಅದರಲ್ಲಿ ಲಿಖಿತ ಸಂವಿಧಾನ ಮತ್ತು ಅಲಿಖಿತ ಸಂವಿಧಾನ ಎಂಬ ಎರಡು ವಿಧ ಅದರಲ್ಲಿ ನಮ್ಮ ಲಿಖಿತ ಸಂವಿಧಾನ ರಚನೆ ಮಾಡಿ ಸಂಸತ್ತಿನಲ್ಲಿ ಇಡುತ್ತಾರೆ ಅದರಲ್ಲಿ ಕೆಲವೇ ಕೇಲವು ತಿದ್ದುಪಡಿಯಿಂದ ಅಂಗೀಕಾರವಾಗುತ್ತದೆ ಎಂದು ವಿರೋದ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಅವರು ಹೇಳಿದರು.
ಅವರು ಕುಷ್ಟಗಿಯಲ್ಲಿ ಅಯೋಜಿಸಿದ್ದ ಸಂವಿಧಾನ ಸಂರಕ್ಷಣ ಕಾರ್ಯಕ್ರಮದಲ್ಲಿ ಮಾತಾನಾಡುತ್ತಿದ್ದರು. ಅಂಬೇಡ್ಕರ್ ಅವರು ರಾಷ್ಟ್ರಪತಿ ರಾಜೇಂದ್ರ ಪ್ರಸಾದ ಅವರಿಗೆ ಕೋಟ್ಟ ಮೇಲೆ ಒಂದು ಭಾಷಣ ಮಾಡುತ್ತಾರೆ ಅದು ಐತಿಹಾಸಿ ಭಾಷಣವಾಗಿತ್ತು. ಯಾರಿಗೆ ಈ ದೇಶ ಇತಿಹಾಸ ಗೋತ್ತಿರಲ್ಲ ಅವರಿಗೆ ದೇಶರಚನೆ ಮಾಡಲು ಸಾಧ್ಯವಿಲ್ಲ ಎಂದು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದರು. ಟಿಪ್ಪು ಸುಲ್ತಾನ್ ಬ್ರಿಟಷರ ವಿರುದ್ದ ಯುದ್ದಗಳನ್ನು ಮಾಡುತ್ತಾರೆ ಅದು ಸಹ ಸ್ವಾತಂತ್ರ ಹೋರಾಟ ಹಾಗಾಗಿ ನಾವು ಇತಿಹಾಸ ತಿಳಿದುಕೊಂಡಿರಬೇಕು ಅದಕ್ಕೆ ಬಾಬಾ ಸಾಹೇಬ್‌ರು ನಮ್ಮ ಇತಿಹಾಸ ತಿಳಿದವರು ಮತ್ತು ನಮ್ಮ ಸಾಮಾಜೀಕ ವೈವಿಧ್ಯತೆಗಳನ್ನು ಅರಿತವರಾಗಿದ್ದರು. ಮಹಾ ಮೇದಾವಿಗಳ ಸಾಲಿನಲ್ಲಿ ಮೊದಲಿಗೆ ನಿಲ್ಲುವವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮ ಜಾತಿ ವ್ಯವಸ್ಥೆಯಲ್ಲಿರುವ ತಾತಮ್ಯವನ್ನು ಅರಿತವರಾಗಿದ್ದರು. ಯಾವ ಧರ್ಮದಲ್ಲಿ ಮನುಷತ್ವಕ್ಕೆ ಬೆಲೆ ಇಲ್ಲವೂ ಅಂತಹ ಧರ್ಮ ಧರ್ಮವೇ ಅಲ್ಲ ಎನುಂತಹ ಮಾತು ಅಂಬೇಡ್ಕರ್ ಅವರು ಹೇಳಿದ್ದರು. ಪ್ರಜಾಪ್ರಭುತ್ವ ಎಂದರೆ ಭಿನ್ನಾಭಿಪ್ರಾಯಗಳನ್ನು ಸಹಿಸಿ ಕೊಳ್ಳಬೇಕಾತ್ತದೆ, ಅದೇ ಪ್ರಜಾಪ್ರಭುತ್ವ, ಭಾರತದಲ್ಲಿ ಹಲವಾರು ಜಾತಿ, ಪಂಗಡ, ಪ್ರಾಂತ್ಯಗಳು ತಮ್ಮದೇ ವೈಶಿಷ್ಟ್ಯಗಳನ್ನು ಹೊಂದಿದ್ದರೂ, ಈ ಕೇಂದ್ರೀಕರಣವನ್ನು ಸಂವಿಧಾನದಲ್ಲಿ ಅಳವಡಿಸಲಾಯಿತು.
ಭಾರತದ ಪ್ರಜೆಗಳಾದ ನಾವು, ಭಾರತವನ್ನು ಒಂದು ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರವನ್ನಾಗಿ ವಿಧಿಯುಕ್ತವಾಗಿ ಸ್ಥಾಪಿಸಿ, ಅದರ ಎಲ್ಲಾ ಪ್ರಜೆಗಳಿಗೆ,
ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು ವಿಚಾರ, ಅಭಿವ್ಯಕ್ತಿ, ನಂಬಿಕೆ, ಭಕ್ತಿ ಮತ್ತು ಆರಾಧನೆಗಳಲ್ಲಿ ಸ್ವಾತಂತ್ರ್ಯವನ್ನು ಸ್ಥಾನಮಾನ ಮತ್ತು ಅವಕಾಶಗಳ ಸಮಾನತೆಗಳನ್ನು ದೊರಕಿಸಿ ಕೊಡಲಾಗಿದೆ.
ಬಾಬಾ ಸಾಹೇಬರು ಶ್ರೇಷ್ಠವಾದ ಸಂವಿಧಾನ ರಚನೆ ಮಾಡಿ ಕೊಟ್ಟಿದ್ದಾರೆ ಅದರ ಉಪಯುಕ್ತತೆ ಅಗಬೇಕಾದರೆ ಸಂವಿಧಾನ ಜಾರಿ ಮಾಡುವುದು ಯಾರ ಕೈಯಲ್ಲಿ ಇರುತ್ತದೆ ಎಂಬುದು ನಿರ್ದಾರವಾಗುತ್ತದೆ. ಸಂವಿಧಾನ ಮನುವಾದಿಗಳ ಕೈಯಲ್ಲಿ ಸಿಕ್ಕಿಹಾಕಿಕೊಂಡಿದೆ ಹಾಗಾಗಿ ನಾವು ಹುಷರಾಗಿರಬೇಕು, ಸಂವಿಧಾನವು ದೇಶದ ಜನರನ್ನು ಆಳುವ ಸರಕಾರದ ಮೂಲ ರಚನೆಯನ್ನು ನಿರ್ದಿಷ್ಟಪಡಿಸುತ್ತದೆ. ಅದು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳನ್ನು ಸರಕಾರದ ಮೂರು ಮುಖ್ಯ ಅಂಗಗಳಾಗಿ ಏರ್ಪಡಿಸುತ್ತದೆ. ಸಂವಿಧಾನವು ಪ್ರತಿ ಅಂಗದ ಅಧಿಕಾರದ ವ್ಯಾಖ್ಯೆಯನ್ನು ನೀಡುವುದಲ್ಲದೆ ಅವುಗಳ ಜವಾಬ್ದಾರಿಯನ್ನೂ ಖಚಿತಗೊಳಿಸುತ್ತದೆ.
ಎಲ್ಲಾರಿಗೆ ಸಮಾನ ಹಕ್ಕು ಸಿಗಬೇಕು ಎನ್ನುವ ಅಶಯ ಇರಬೇಕು ಆಗ ಮಾತ್ರ ಸಂವಿಧಾನ ಉದ್ಧೇಶ ಇಡೇರುತ್ತದೆ ಎಂದರು. ಸಂವಿಧಾನದ ಜಾಗದಲ್ಲಿ ಒಂದು ವೇಳೆ ಅಪ್ಪಿತಪ್ಪಿ ಏನಾದರೂ ಮನುಸ್ಮೃತಿ ಬಂದರೆ ನಾನು ಕುರಿಕಾಯಕೆ ಹೋಗಬಾಕಾಗುತ್ತದೆ. ಬಾಬಾ ಸಾಹೇಬರು ಕೊಟ್ಟಂತಹ ಸಂವಿಧಾನದಿಂದ ನರೆಂದ್ರ ಮೋದಿ ಪ್ರಧಾನಿ ಅಗಿದ್ದು, ನಾನು ಮುಖ್ಯಮಂತ್ರಿ ಅಗಿದ್ದು, ಅನೇಕ ಜನ ಶಾಸಕರಾಗಿದ್ದು ಎಲ್ಲಾರಿಗೂ ಸಮಾನ ಅವಕಾಶ ಕೊಟ್ಟಿದ್ದರಿಂದ ಎಂದರು. ಯಾರು ಸಂವಿಧಾನದ ವಿರುದ್ಧ ಇದ್ದಾರೆ ಅಂತಹವರನ್ನು ವಿರೋದಿಸಬೇಕು ಮತ್ತು ಖಂಡಿಸಬೇಕು ಎಂದು ಹೇಳಿದರು.
ವಿಭಿನ್ನ ಅಂಗಗಳ ನಡುವಿನ ಸಂಬಂಧವನ್ನೂ ಜನತೆ ಹಾಗೂ ಸರಕಾರದ ನಡುವಿನ ಸಂಬಂಧವನ್ನೂ ನಿಯಂತ್ರಿಸುತ್ತದೆ. ಸಂವಿಧಾನವು ದೇಶದ ಎಲ್ಲ ಕಾನೂನುಗಳಿಗಿಂತ ಹೆಚ್ಚಿನ ಸ್ಥಾನವನ್ನು ಹೊಂದಿದೆ. ಸರಕಾರವು ಮಾಡುವ ಪ್ರತಿಯೊಂದು ಕಾನೂನು ಸಂವಿಧಾನಕ್ಕೆ ಅನುಗುಣವಾಗಿರಬೇಕು. ಭಾರತದ ಸಂವಿಧಾನವು ದೇಶದ ಗುರಿಗಳು – ಪ್ರಜಾಪ್ರಭುತ್ವ, ಸಮಾಜವಾದ, ಜಾತ್ಯತೀತತೆ ಮತ್ತು ರಾಷ್ಟ್ರೀಯ ಸಮಗ್ರತೆ ಎಂದು ಸ್ಪಷ್ಟಪಡಿಸುತ್ತದೆ. ವೈಯಕ್ತಿಕ ಘನತೆ ಮತ್ತು ದೇಶದ ಒಗ್ಗಟ್ಟು ಮತ್ತು ಐಕ್ಯತೆಗೆ ಎಲ್ಲರಲ್ಲೂ ಭ್ರಾತೃತ್ವತೆ ಯನ್ನು ಪ್ರೋತ್ಸಾಹಿಸಲು ನಿರ್ಧರಿಸಿ ಎಂದು ತಿಳಿದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!