ಯುವಕರು ರಕ್ತದಾನ ಮಾಡಲು ಮುಂದೆ ಬನ್ನಿ

ಯಲಬುರ್ಗಾ,ಏ,೨೮;ಒಬ್ಬ ಜೀವ ಉಳಿಸುವಲ್ಲಿ ಯುವಕರು ರಕ್ತದಾನ ಮಾಡುವಲ್ಲಿ ಮುಂದೆ ಬರುವಂತೆ ಪಟ್ಟಣ ಪಂಚಾಯತಿ ಅಧ್ಯಕ್ಷ ಅಮರೇಶ ಹುಬ್ಬಳ್ಳಿ ಸಲಹೆ ನೀಡಿದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಏಡ್ಸ್ ತಡಗಟ್ಟುವಿಕ್ ಮತ್ತು ನಿಯಂತ್ರಣ ಘಟಕ,ತಾಲೂಕಾ ಆರೋಗ್ಯ ಅಧಿಕಾರಿಗಳ ಕಛೇರಿ,ಸಾರ್ವಜನಿಕರ ಆಸ್ಪತ್ರೆ,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಇವರ ಆಶ್ರಯದಲ್ಲಿ ಬುಧವಾರ ಪಟ್ಟಣದ ೧೦೦ ಹಾಸಿಗೆ ಸರಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ವೈದ್ಯಾಧಿಕಾರಿ ಡಾ,ಪ್ರಕಾಶ,ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ವಸಂತಕುಮಾರ ಭಾವಿಮನಿ,ಆರೋಗ್ಯ ರಕ್ಷಣಾ ಸಮಿತಿ ಉಪಾಧ್ಯಕ್ಷ ಪ್ರಭುರಾಜ ಕಲಬುರ್ಗಿಮಾತನಾಡಿದರು, ನ್ಯಾಯವಾದಿ,ಆರೋಗ್ಯ ರಕ್ಷಣಾ ಸಮಿತಿ ಸದಸ್ಯ ಸುಭಾಸ ಹೊಂಬಳ,ಪಪಂ ಸದಸ್ಯ ಕಳಕಪ್ಪ ತಳವಾರ, ಭಾರತೀಯ ರೆಡಕ್ರಾಸ ಸಂಸ್ಥೆಯ ದೇವೇಂದ್ರಪ್ಪ ಹಿಟ್ನಾಳ,ಮುಖಂಡ ಭೀಮಣ್ಣ ಹವಳಿ,ಈರಪ್ಪ ಬಣಕಾರ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!