ರಾಜಕಾರಣಿಗಳಿಗೆ ಅಧಿಕಾರಿಗಳ ಸಾತ್, ಅನ್ನಭಾಗ್ಯಕ್ಕೆ ಕನ್ನ

ಮಾನ್ವಿ: ತಾಲೂಕಿನಲ್ಲಿ ನಡೆಯುತ್ತಿರುವ ಅನ್ನಭಾಗ್ಯ ಅಕ್ಕಿ ಅಕ್ರಮ ಸಾಗಣಿಕೆ ,ಅಕ್ರಮ ಮರಳು ಗಣಿಗಾರಿಕೆ ಸೇರಿದಂತೆ ಅನೇಕ ಅಕ್ರಮಗಳ ರೂವಾರಿ ಎಂದು ಕುಖ್ಯಾತಿ ಪಡೆದ ಆಲ್ದಾಳ್ ವೀರಭದ್ರಪ್ಪ ನ ಎಲ್ಲಾ ಅಕ್ರಮ ಚಟುವಟಿಕೆಗಳನ್ನು ತಾಲೂಕಿನ ದಕ್ಷ ತಹಶೀಲ್ದಾರ್ ಸಂತೋಷಿ ರಾಣಿ ಯವರು ಎಲ್ಲಾ ಅಕ್ರಮಗಳನ್ನು ನಿಲ್ಲಿಸಿದ್ದರು.
ಇದನ್ನು ಅರಗಿಸಿಕೊಳ್ಳದ ಮಾಫೀಯಾ ಆಲ್ದಾಳ್ ವೀರಭದ್ರಪ್ಪ ಅನೇಕ ಕುತಂತ್ರಗಳನ್ನು ಮಾಡಿ ದಕ್ಷ ಅಧಿಕಾರಿ ಸಂತೋಷಿ ರಾಣಿಯನ್ನು ಬೇರೆ ಕಡೆ ವರ್ಗಾವಣೆ ಮಾಡುವಲ್ಲಿ ಮುಂಚೂಣಿಯಲ್ಲಿದ್ದು ಯಶಸ್ಸು ಕಂಡು ಆಲ್ದಾಳ್ ವೀರಭದ್ರಪ್ಪ ಮತ್ತೆ ತನ್ನ ಅಕ್ರಮ ಚಟುವಟಿಕೆಗಳನ್ನು ಶುರು ಮಾಡಿದ್ದಾರೆ ಎನ್ನಲಾಗುತ್ತಿದೆ.
ಸೋಮವಾರ ತಡ ರಾತ್ರಿ ಯಲ್ಲಿ ಭಾರಿ ಪ್ರಮಾಣದ ಆಕ್ರಮ ಪಡಿತರ ಧಾನ್ಯಗಳನ್ನು ಲಾರಿ ನಂ.ಕೆಎ-೩೭-೩೭೨೮ ಎಂಬ ನಕಲಿ ಬೋರ್ಡಿನ ಲಾರಿಯಲ್ಲಿ ಭಾರಿ ಪ್ರಮಾಣದ ಅಕ್ರಮ ಪಡಿತರವನ್ನು ಅತೀ ವೇಗವಾಗಿ ಆಟೋ ನಗರದಿಂದ ತುಂಬಿಕೊಂಡು ಸಾಗಾಣೆ ಮಾಡುವ ವೇಳೆ ಪಟ್ಟಣದ ಕೆನರಾ ಬ್ಯಾಂಕ್ ರಸ್ತೆಯಲ್ಲಿ ಕೆಲ ಯುವಕರ ಗುಂಪು ತಡೆಯಲು ಮುಂದಾಗಿದ್ದ ಸಂಧರ್ಭದಲ್ಲಿ ಮಾಫೀಯಾ ಆಲ್ದಾಳ ವೀರಭದ್ರಪ್ಪ ತಮ್ಮ ಸಿದ್ದಪ್ಪಗೌಡ ವಿರೋಧ ವ್ಯಕ್ತಪಡಿಸಿದ ಸಂಧರ್ಭದಲ್ಲಿ ಯುವಕರ ಮತ್ತು ಸಿದ್ದಪ್ಪಗೌಡ ಆಲ್ದಾಳ್ ರ ಮಧ್ಯ ಮಾತಿನ ಚಕಮಕಿ ನಡೆದ ಪ್ರಸಂಗ ಜರುಗಿದೆ.
ಅಕ್ರಮ ಪಡಿತರ ಅಕ್ಕಿ ಸಾಗಾಣೆ ಲಾರಿಯನ್ನು ತಡೆದ ಯುವಕರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಯಾವಬ್ಬ ಅಧಿಕಾರಿಯೂ ಕೂಡ ಸ್ಥಳಕ್ಕೆ ಬರದೇ ಹಿಂದೇಟು ಹಾಕಿದ್ದು ಲಾರಿ ಹಿಡಿದ ಯುವಕರು ಹಾಗೂ ಮಾಫೀಯಾಗಳ ನಡುವೆ ಬೀದಿಯಲ್ಲಿ ತಳ್ಳಾಟ ಜಗಳ ನಡೆದ ನಡೆದ ಘಟನೆಯು ತಾಲೂಕಾಡಳಿತ ಮತ್ತು ಪೊಲೀಸ್ ವ್ಯವಸ್ಥೆಯನ್ನು ಅಣಕಿಸುವಂತಿದೆ.
ಕಳೆದ ಕೆಲವೇ ದಿನಗಳ ಹಿಂದೆ ತಹಸೀಲ್ದಾರ್ ಸಂತೋಷಿರಾಣಿ ಅವರು ತಾಲೂಕಿನಲ್ಲಿ ನೆಡೆಯುತ್ತಿದ್ದ ಭಾರಿ ಪ್ರಮಾಣದ ಅಕ್ರಮ ಪಡಿತರ ಸಾಗಾಣೆ ದಂಧೇಯನ್ನು ಬಯಲಿಗೆಳೆದು ಎಲ್ಲಾ ಅಕ್ರಮಗಳಿಗೆ ತೆರೆ ಎಳೆದಿದ್ದರು ಆದರೆ ತಾಲೂಕಿನಲ್ಲಿ ಪಡಿತರ ಧಾನ್ಯಗಳ ಅಕ್ರಮ ಸಾಗಾಣೆ ದಂಧೇಯನ್ನು ಮುಂದುವರೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬಡವರ ಹೊಟ್ಟೆಗೆ ಸೇರಬೇಕಾದ ಅನ್ನಭಾಗ್ಯದ ಅಕ್ಕಿಗಳನ್ನು ಅಕ್ರಮವಾಗಿ ಲಾರಿಗೆ ನಕಲಿ ನಂಬರ್ ಹಾಕಿಕೊಂಡು ಸಾಗಾಣೆ ಮಾಡುವ ದಂಧೇಯ ಪ್ರಕರಣಗಳು ಪದೇ ಪದೇ ವರದಿಯಾಗುತ್ತಿದ್ದರು ಸಂಬಂಧಪಟ್ಟ ಅಧಿಕಾರಿಗಳು ತಾಲೂಕ ಆಹಾರ ನಿರೀಕ್ಷಕರು ಮೌನವಹಿಸಿರುವದು ಎಷ್ಟ ಸರಿ ಎಂಬ ಪ್ರಶ್ನೆಗಳು ತಾಲೂಕಿನ ಜನರಲ್ಲಿ ಚರ್ಚೆಗೆ ಗ್ರಹಸವಾಗಿದೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!