ರಾಜ್ಯದಲ್ಲಿಂದು ೯೫೭೯ ಮಂದಿಗೆ ಪಾಸಿಟಿವ್, ೫೨ ಸಾವು

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ೨ನೇ ಅಲೆ ಕಂಟ್ರೋಲ್ ತಪ್ಪು ಹರಡುತ್ತಿದ್ದು ಇಂದು ೯೫೭೯ ಜನರಲ್ಲಿ ಸೋಂಕು ಪತ್ತೆಯಾಗಿದೆ. ಮಹಾಮಾರಿಗೆ ಇಂದು ೫೨ ಜನ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ೧೦೭೪೮೬೯ ಕ್ಕೇರಿಕೆಯಾದರೆ, ಒಟ್ಟು ಸಾವಿನ ಸಂಖ್ಯೆ ೧೨೯೪೧ಕ್ಕೆ ಏರಿಕೆಯಾಗಿದೆ.
ಇಂದು ಬೆಂಗಳೂರಿನಲ್ಲಿ ೬೩೮೭ ಜನರಿಗೆ ಕೊರೋನಾ ತಗುಲಿದ್ದು, ೪೦ ಮಂದಿ ಪ್ರಾಣ ಬಿಟ್ಟಿದ್ದಾರೆ. ಮಹಾನಗಿರಿಯೊಂದರಲ್ಲೇ ಈವರೆಗೆ ೪೮೮೩೬೯ ಮಂದಿಗೆ ಕೊರೋನಾ ತಗುಲಿದೆ. ಬೆಂಗಳೂರಲ್ಲಿ ಈವರೆಗೆ ೪೮೫೫ ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ.
ಇಂದು ೨೭೬೭ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್? ಆಗಿದ್ದು, ಈವರೆಗೆ ಒಟ್ಟು ೯೮೫೯೨೪ ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಉಳಿದಂತೆ ೭೫೯೮೫ ಸಕ್ರಿಯ ಕೇಸ್?ಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ. ಇದರಲ್ಲಿ ೪೭೦ ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!