ರಾಜ್ಯ ಪಂಚಮಸಾಲಿ ಯುವ ಘಟಕದ ನೇತೃತ್ವದಲ್ಲಿ ರಾಜ್ಯ ಮಟ್ಟದ ಸ್ವಾಭಿಮಾನ ವ್ಯಕ್ತಿತ್ವ ತರಬೇತಿ ಶಿಬಿರ

ಕೊಪ್ಪಳ : ಪಂಚಮಸಾಲಿ ಸಮಾಜದ ಯುವಕರಿಗೆ ರಾಜ್ಯ ಪಂಚಮಸಾಲಿ ಯುವ ಘಟಕದ ನೇತೃತ್ವದಲ್ಲಿ ರಾಜ್ಯ ಮಟ್ಟದ ಸ್ವಾಭಿಮಾನ ವ್ಯಕ್ತಿತ್ವ ತರಬೇತಿ ಶಿಬಿರ ಆ .28 ಹಾಗೂ 29 ಶನಿವಾರ ಹಾಗೂ ಭಾನುವಾರ ಹೇಮಗುಡ್ಡದಲ್ಲಿ ನಡೆಯುತ್ತಿದೆ ಜಗದ್ಗುರುಗಳಾದ ಶ್ರೀ ವಚನಾನಂದ ಸ್ವಾಮೀಜಿ ಹರಿಹರ ಪೀಠ ಇವರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಯುವ ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೊಟ್ರೇಶ್ ಅವರು ಹೇಳಿದರು. ಅವರು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಅಂದಿನ ಶಿಬಿರದಲ್ಲಿ 1 ) ಪರಸ್ಪರ ಪರಿಚಯ 2 ) ಸಂಘಟನೆ 3 ) ಪರಿಣಾಮಕಾರಿ ಭಾಷಣ ಕಲೆ 4 ) ಶೃಜನಶೀಲತೆ 5 ) ಹೊಸವ್ಯಾಪಾರ ಅಭಿವೃದ್ಧಿ 6 ) ವ್ಯವಸಾಯ ಜೊತೆಗೆ ವ್ಯಾಪಾರ 7 ) ಕೃಷಿಯಲ್ಲಿ ಪ್ರಗತಿ 8 ) ಆತ್ಮವಿಶ್ವಾಸ 9 ) ಮಾನವೀಯ ಸಂಬಂಧಗಳು 10 ) ಪರಿಣಾಮಕಾರಿ ನಿರ್ಧಾರ ಕಲೆ 11 ) ಉತ್ತಮ ನಾಯಕತ್ವ 12 ) ಗುರಿ ತಲುಪುವುದು 13 ) ಸ್ಪರ್ಧಾತ್ಮಕ ಪರೀಕ್ಷೆ ಪೂರಕ ಜ್ಞಾನ KAS IAS etc 14 ) ಯೋಗ , ಸಾಂಸ್ಕೃತಿಕ ಕಾರ್ಯಕ್ರಮ 19 ) ಜ್ವಲಂತ ಸಮಸ್ಯೆಗಳ ಚರ್ಚೆ , ಹೀಗೆ ಎರಡು ದಿನದಲ್ಲಿ ನುರಿತ ಸಂಪನ್ಮೂಲ ವ್ಯಕ್ತಿಗಳಿ ಪಾಲ್ಗೊಳ್ಳಲಿದ್ದಾರೆ . ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ಪಂಚಮಸಾಲಿ PUC , Degree , ವ್ಯಾಸಂಗ ಪೂರ್ಣಗೊಳಿಸಿದ ವಿದ್ಯಾರ್ಥಿಗಳು ಹೆಚ್ಚು ಭಾಗವಹಿಸಬೇಕಿದೆ . ಊಟ ಹಾಗೂ ಉಪ ಆಹಾರ ಜತೆಗೆ ಪ್ರವೇಶಾತಿ ಉಚಿತ ಇರುತ್ತದೆ . ಈ ಶಿಬಿರದಲ್ಲಿ ಸಚಿವರಾದ ಮುರುಗೇಶ್ ನಿರಾಣಿ . ಸಿ ಸಿ ಪಾಟೀಲ್ , ಸಂಸದರಾದ ಸಂಗಣ್ಣ ಕರಡಿ, ಶಂಕರ ಪಾಟೀಲ್ ಮುನೇನಕೊಪ್ಪ ಹಾಗೂ ಪಂಚಮಸಾಲಿ ಸಂಘದ ರಾಜ್ಯಾಧ್ಯಕ್ಷರಾದ ಬಿ.ನಾಗನಗೌಡ್ರು , ಬಸವರಾಜ್ ದಿಂಡೂರ್ , ಭಾವಿ ಬೆಟ್ಟಪ್ಪ , ಮಲ್ಲಣ್ಣ ಬೊಮ್ಮಸಾಗರ್ , ಸಿದ್ದೇಶ್ ಹನಸಿ , ಸೋಮನಗೌಡ ಎಮ್ ಪಾಟೀಲ್ ಸೇರಿ ಸಮಾಜದ ಗಣ್ಯರು ಭಾಗವಹಿಸಲಿದ್ದಾರೆ ರಾಜ್ಯ ಯುವ ಘಟಕದಿಂದ ನಡೆಯುವ ಸ್ವಾಭಿಮಾನ ವ್ಯಕ್ತಿ ವಿಕಸನ ಶಿಬಿರವನ್ನು ಪಂಚಮಸಾಲಿ ರಾಜ್ಯ ಯುವ ಘಟಕ ವಹಿಸಲಿದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ರಾಜ್ಯಾಧ್ಯಕ್ಷರಾದ ಮಂಜುನಾಥ ಕನವಲಗುಂದ , ರಾಜ್ಯ ಯುವ ಘಟಕದ ಕಾರ್ಯಧ್ಯಕ್ಷ ಶಿವು ಗುಡ್ಡಾಪೂರ , ಸಂಘದ ಕಾರ್ಯಕಾರಣಿ ಸದಸ್ಯ ದೇವರಾಜ್ ಹಾಲ ಸಮುದ್ರ ಸಂಘದ ತಾಲೂಕು ಅಧ್ಯಕ್ಷ ಕರಿಯಪ್ಪ ಮೇಟಿ , ಜಿಲ್ಲಾ ಗೌರವ ಅಧ್ಯಕ್ಷ ಬಸವರಾಜ್ ಸಬರದ್ , ಜಿಲ್ಲಾ ಯುವ ಘಟಕದ ಅಧ್ಯಕ್ಷ ಪ್ರಭುಗೌಡ ಪಾಟೀಲ , ಜಿಲ್ಲಾ ಯು ಟಕದ ಪ್ರಧಾನ ಕಾರ್ಯದರ್ಶಿ ಮೈಲಾರಗೌಡ ಗುಡ್ಡನೂರ , ಕೊಪ್ಪಳ ತಾಲೂಕು ಅಧ್ಯಕ್ಷ ಶರಣಪ್ಪ ಸೆ = ಇಪ್ಪಳ ಜಿಲ್ಲೆಯ ಎಲ್ಲಾ ತಾಲೂಕು ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!