ರಾಷ್ಟ್ರಧ್ವಜಕ್ಕೆ ಅವಮಾನ : ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಭಾರತೀಯ ಪ್ರಜಾ ಸಂಘ ಆಗ್ರಹ

ಅಖಿಲ ವಾಣಿ ಸುದ್ದಿ

ಸಿಂಧನೂರು : ತಾಲೂಕಿನ ಸೋಮಲಾಪುರ ಗ್ರಾ.ಪಂ.ಯಲ್ಲಿ ರಾಷ್ಟ್ರಧ್ವಜವನ್ನು ಏರಿಸದೆ ಅವಮಾನ ಮಾಡಿರುವ ಪಂಚಾಯಿತ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂಧಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ರಾಷ್ಟ್ರಧ್ವಜವನ್ನು ಏರಿಸುವ ಮತ್ತು ಇಳಿಸುವ ಕುರಿತು ಸರ್ಕಾರದ ಆದೇಶವನ್ನು ನಿರ್ಲಕ್ಷ್ಯ ಮಾಡಿರುವ ರಾಯಚೂರು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಂಧನೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ಧ ತಕ್ಷಣ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭಾರತೀಯ ಪ್ರಜಾ ಸಂಘ ಜಿಲ್ಲಾ ಘಟಕವು ತಹಶೀಲ್ದಾರರ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಮನವಿ ಪತ್ರ ಸಲ್ಲಿಸಿತ್ತು.
ನಂತರ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಯುವ ಘಟಕದ ಅಧ್ಯಕ್ಷ ಮುತ್ತು ಸಾಗರ ಈ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದಲೂ ಒಂದಲ್ಲ ಒಂದು ಪ್ರಕರಣವನ್ನು ಸೃಷ್ಠಿ ಮಾಡುತ್ತಿದೆ. ರಾಜ್ಯದಲ್ಲಿ ಸಿಡಿ ಲೇಡಿ ಪ್ರಕರಣವು ಜೀವಂತವಾಗಿರುವಾಗಲೇ ಬಿಜೆಪಿ ಸರ್ಕಾರದಲ್ಲಿ ಅಧಿಕಾರಿಗಳು ರಾಷ್ಟ್ರಧ್ವಜಕ್ಕೆ ಅವಮಾನ ಮಾಡುವ ಮೂಲಕ ಮತ್ತೊಂದು ಹೊಸ ಪ್ರಕರಣಕ್ಕೆ ನಾಂದಿಯಾಡಿದ್ದಾರೆ. ರಾಯಚೂರು ಜಿಲ್ಲಾ ಕೇಂದ್ರದ ಜಿ.ಪಂ. ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗೆ ಮತ್ತು ಸಿಂಧನೂರು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗೆ ರಾಷ್ಟ್ರಧ್ವಜವನ್ನು ಎಲ್ಲಾ ಕಛೇರಿಗಳ ಮುಂದೆ ಏರಿಸುವ ಸರ್ಕಾರದ ಮಾಹಿತಿನೆ ಗೋತ್ತಿಲ್ಲ ಅಂತ ಹೇಳುತ್ತಿದ್ದಾರೆ ಎಂದರೆ ಇವರುಗಳು ಸರ್ಕಾರದ ನಿಯಮಗಳನ್ನು ಪಾಲನೆ ಮಾಡುವ ಅಧಿಕಾರಿಗಳೂ..? ಅಥವಾ ಯಾವುದೋ ಒಂದು ಖಾಸಗಿ ಕಂಪನಿ ನೇಮಕ ಮಾಡಿದ ಏಜಂಟರೊ..? ಎಂಬ ಪ್ರಶ್ನೆ ಮೂಡುತ್ತಿದೆ. ಸರ್ಕಾರದ ಆದೇಶಗಳು ಸರ್ಕಾರದ ಅಧಿಕಾರಿಗಳಿಗೆ ಗೋತ್ತಿಲ್ಲ ಅಂತ ಆದರೆ ಪ್ರಜಾ ತಂತ್ರದ ವ್ಯವಸ್ಥೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರದ ನೆಡತೆಯು ಯಾವ ದಿಕ್ಕಿನ ಕಡೆ ಸಾಗುತ್ತಲಿದೆ..? ಎಂದು ಪ್ರಶ್ನಿಸಿದರು.
ಈ ರಾಜ್ಯದಲ್ಲಿ ನಮ್ಮ ದೇಶದ ಘನತೆ-ಗೌರವವನ್ನು ಸಾರುವ ರಾಷ್ಟ್ರಧ್ವಜವು ತನ್ನದೆ ಆದ ಒಂದು ಸಂಕೇತವನ್ನು ಹೊಂದಿದೆ. ಅಂತಹ ರಾಷ್ಟ್ರಧ್ವಜವನ್ನು ಪ್ರತಿದಿನ ಸರ್ಕಾರಿ ಕಛೇರಿಗಳ ಮುಂದೆ ಭಾವಕೈತೆ ಸಾರುವಂತಹ ಧ್ವಜವನ್ನು ಏರಿಸದೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿರುವ ಅಧಿಕಾರಿಗಳ ವಿರುದ್ಧ ತಕ್ಷಣ ಸರ್ಕಾರ ಕ್ರಮ ಕೈಗೊಳ್ಳಬೇಕು. ಕೋವಿಡ್-೧೯ ರ ಸೊಂಕಿನ ನೆಪ ಹೇಳಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಅಧಿಕಾರಿಗಳ ಮೇಲೆ ಸರ್ಕಾರ ನಿಗವಹಿಸಬೇಕು. ಇಲ್ಲದಿದ್ದರೆ ನಮ್ಮ ಸಂಘಟನೆ ವತಿಯಿಂದ ಹೋರಾಟ ಮಾಡಲಾಗುವದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಶಶಿಕುಮಾರ ವಿರುಪಾಪುರ. ಉಪಾಧ್ಯಕ್ಷ ಹನುಮಂತ ಗೋನ್ವಾರ. ದಲಿತ ಮುಖಂಡರಾದ ಪಂಪಾಪತಿ ಹಂಚಿನಾಳ. ನಾಗರಾಜ ಸಾಸಲಮರಿ. ನಾಗರಾಜ ಹೆಡಗಿಬಾಳ. ಪಾಮೇಶ. ಕೋಟ್ರೇಶ. ಉಮೇಶ. ಸೇರಿದಂತೆ ಇತರರು ಇದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!