ರಾಷ್ಟ್ರೀಯ ಆರೋಗ್ಯ ಅಭಿಯಾನ: ನಗರದಲ್ಲಿ ಮ್ಯಾರಥಾನ್ ಓಟ

ಕೊಪ್ಪಳ: ಬುಧವಾರದಂದು ನಗರದ ಗಡಿಯಾರ ಕಂಬದಿಂದ ಪಿಎಫ್‌ಐ ಸಂಘಟನೆಯಿಂದ ಜನಾರೋಗ್ಯವೇ ರಾಷ್ಟ್ರಶಕ್ತಿ ಎಂಬ ಮ್ಯಾರಥಾನ್ ಓಟ, ಬೃಹತ್ ರ‍್ಯಾಲಿ ಪ್ರಾರಂಭಗೊಂಡು ಪ್ರಮುಖ ರಸ್ತೆಯಲ್ಲಿ ಸಂಚರಿಸಿ ಅಶೋಕ ಸರ್ಕಲ್ ಮಾರ್ಗವಾಗಿ ಈದ್ಗಾ ಮೈದಾನಕ್ಕೆ ತಲುಪಿತು. ಸುಮಾರ ೨ಸಾವಿರಕ್ಕೂ ಅಧಿಕ ಜನ ಈ ಓಟದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ಮಾಡಿ ಆರೋಗ್ಯ ಯೋಗ ರೂಢಿಸಿಕೊಳ್ಳಿ ಎಂಬ ಸಂದೇಶ ರವಾನಿಸಲಾಯಿತು. ಓಟ ಆರಂಭಿಸುವ ಮುನ್ನ ಪಿಎಫ್‌ಐ ರಾಜ್ಯ ಸಮಿತಿ ಸದಸ್ಯ ಶರೀಫ್ ಕೊಡಜೇ ಅವರಿಂದ ಧ್ವಜಾ ಹಸ್ತಾಂತರಿಸುವ ಮೂಲಕ ಮ್ಯಾರಥಾನ್ ಓಟಕ್ಕೆ ಚಾಲನೆ ನೀಡಲಾಯಿತು.
ನಂತರ ಬುಧವಾರ ನಗರದ ಇದ್ಗಾ ಮೈದಾನದಲ್ಲಿ ಪಿಎಫ್‌ಐ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಸಮಾರೋಪ ಸಮಾರಂಭ ಜರುಗಿತು. ಪಿಎಫ್‌ಐ ಕರ್ನಾಟಕ ರಾಜ್ಯದ ಕಾರ್ಯದರ್ಶಿ ಎ.ಕೆ. ಅಶ್ರಫ್ ಸೇರಿದಂತೆ ಗಂಗಾವತಿ ವೈದ್ಯ ಪ್ರವೀಣಕುಮಾರ ಜಿಲ್ಲಾ ಸಾಂಕ್ರಾಮಿಕ ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ. ಗುರುಪ್ರಸಾದ ಪ್ರೋಹಿತ, ಪಿಎಫ್‌ಐ ರಾಜ್ಯ ಕೋಶಾಧಿಕಾರಿ ಶಾಹೀದ್ ನಸೀರ್, ರಾಜ್ಯ ಸಮಿತಿ ಸದಸ್ಯ ಶರೀಫ್ ಕೊಡಗೆ ಮತ್ತಿತರರು ಕಾರ್ಯಕ್ರಮ ಕುರಿತು ಆರೋಗ್ಯ ಜಾಗೃತಿ ಮ್ಯಾರಥಾನ್, ಯೋಗ, ಕ್ರೀಡೆ, ಮಾದಕ ದ್ರವ್ಯ ವಿರೋಧಿ ಜಾಗೃತಿ ಸಾಂಕ್ರಾಮಿಕ ಜಾಗೃತಿ ಕಾರ್ಯಕ್ರಮ ಸೇರಿದಂತೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು. ಪಿಎಫ್‌ಐ ಕೊಪ್ಪಳ ಜಿಲ್ಲಾ ಅಧ್ಯಕ್ಷ ಅಬ್ದುಲ್ ಫಯಾಜ್ ಅಹ್ಮದ್, ವಸೀಂ ಪಟೇಲ್,ಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಮಹ್ಮದ್ ಆರೀಫ್ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!