ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ನಿಧನ

ಬೆಂಗಳೂರು : ಅಪಘಾತದಲ್ಲಿ ಗಾಯಗೊಂಡು ಗಂಭೀರ ಸ್ಥಿತಿಯಲ್ಲಿದ್ದ ನಟ ಸಂಚಾರಿ ವಿಜಯ್ ನಿಧನರಾಗಿದ್ದು ಇನ್ನಷ್ಟೇ ಆಸ್ಪತ್ರೆಯಿಂದ ಅಧಿಕೃತ ಮಾಹಿತಿ ಹೊರ ಬರಬೇಕಿದೆ.
ಸಂಚಾರಿ ವಿಜಯ್ ಕೊನೆಯುಸಿರೆಳೆದಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ನಟ ಕಿಚ್ಚ ಸುದೀಪ್ ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಸಂಚಾರ ವಿಜಯ್ ಕೊನೆಯುಸಿರೆಳೆದಿದ್ದಾರೆ ಎಂಬುದನ್ನು ಒಪ್ಪಲು ಬಹಳ ಕಷ್ಟವಾಗುತ್ತಿದೆ. ಲಾಕ್?ಡೌನ್??ಗೂ ಮೊದಲು ಕೆಲವು ಬಾರಿ ಅವರನ್ನ ಭೇಟಿಯಾಗಿದ್ದೆ. ಎಲ್ಲರೂ ಅವರ ಮುಂಬರುವ ಚಿತ್ರಕ್ಕಾಗಿ ನಿರೀಕ್ಷಿತರಾಗಿದ್ದರು.. ಅದು ರಿಲೀಸ್?ಗೆ ಕಾಯುತ್ತಿದೆ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ನನ್ನ ಸಂತಾಪಗಳು ಎಂದಿದ್ದಾರೆ.
( ಜೂನ್ ೧೨) ರಂದು ರಾತ್ರಿ ಈ ಅಪಘಾತ ಸಂಭವಿಸಿದ್ದು, ಕೂಡಲೇ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆಸ್ಪತ್ರೆಗೆ ಕರೆ ತಂದಾಗಲೆ ಅವರ ಸ್ಥಿತಿ ಗಂಭೀರವಾಗಿತ್ತು, ಸ್ಕ್ಯಾನ್ ಮಾಡಿದಾಗ ಮೆದುಳಿನ ಬಲಭಾಗದಲ್ಲಿ ರಕ್ತಸ್ರಾವವಾಗುತ್ತಿತ್ತು.ಚಿಕಿತ್ಸೆಗೆ ಸ್ಪಂದಿಸದೆ ಇಂದು ಅವರು ನಿಧನರಾಗಿದ್ದಾರೆ.
ಆಸ್ಪತ್ರೆ ಮುಂದೆ ಮಾತಾನಾಡಿದ ವಿಜಯ್ ಸಹೋದರ ಸಿದ್ದೇಶ್ ,ಸಮಾಜದ ಒಳಿತಿಗಾಗಿ ಸಂಚಾರಿ ವಿಜಯ್ ದುಡಿಯುತ್ತಿದ್ದ ಹೀಗಾಗಿ ಅವನ ಅಂಗಾಂಗಗಳನ್ನ ದಾನ ಮಾಡಲು ನಿರ್ಧರಿಸಿದ್ದೇವೆ. ಅವನಿಲ್ಲ ಅನ್ನೋದನ್ನು ಕಲ್ಪಿಸಿಕೊಳ್ಳಲು ಆಗುತ್ತಿಲ್ಲ. ವೈದ್ಯರು ಹೇಳುವ ಪ್ರಕಾರ ಅವರ ನಾರ್ಮಲ್ ಡೆತ್ ಆದರೆ ಅಂಗಾಂಗ ದಾನವನ್ನೂ ಮಾಡೋದ್ದಕ್ಕೆ ಆಗುವುದಿಲ್ಲ ಇದರಿಂದ ನಾಲ್ಕು ಜನರಿಗೆ ಸಹಾಯವಾಗಿ ಅಂತ ಬಯಸುತ್ತೇವೆ ಎಂದು ಭಾವುಕರಾದರು.
ಅವನು ಬ್ರೈನ್ ಡೆಡ್ ಸ್ಟೇಜ್ ನಿಂದ ಹೊರಬರೋದು ಕಷ್ಟವಿದೆ.. ಪ್ರಶಸ್ತಿಗಳನ್ನು ಬದಿಗಿಟ್ಟು ಜನರೊಂದಿಗೆ ಬೆರೆಯುತ್ತಿದ್ದ ವ್ಯಕ್ತಿ. ಅವನು ನನಗೆ ಫ್ರೆಂಡ್ ಗೈಡ್ ಎಲ್ಲ ಆಗಿದ್ದ.ಅವನಿಲ್ಲದೆ ಇರುವುದನ್ನು ನನಗೆ ಕಲ್ಪಿಸಿಕೊಳ್ಳಲು ಆಗುತ್ತಿಲ್ಲ. ಕಷ್ಟದ ಸಮಯದಲ್ಲೂ ದಿನರಾತ್ರಿ ಎನ್ನದೆ ಬಡವರಿಗಾಗಿ ಸಹಾಯಕ್ಕೆ ನಿಲ್ಲುತ್ತಿದ್ದ ಎಂದು ಹೇಳುತ್ತಾ ಭಾವುಕರಾದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!