ರೈತರ ಕಷ್ಟಗಳಿಗೆ ಸ್ಪಂದಿಸುವ ಗುಣ ಶಾಸಕ ದಢೇಸೂಗೂರಿಗಿದೆ

ಕಾರಟಗಿ : ತಾಲೂಕಿನಲ್ಲಿ ಅಕಾಲಿಕ ಆಲಿಕಲ್ಲು ಮಳೆ ಮತ್ತು ಗಾಳಿಯಿಂದಾಗಿ ರೈತರು ಸಾಕಷ್ಟು ಕಷ್ಟಕ್ಕೆ ಈಡಾಗಿದ್ದಾರೆ. ಆದರೂ ನಮ್ಮ ಭಾಗದ ಶಾಸಕರಾದ ಬಸವರಾಜ ದಡೇಸುಗೂರು ರೈತರಿಗೆ ಸ್ಪಂದಿಸುವ ಗುಣವನ್ನು ಹೊಂದಿದ್ದಾರೆ. ಈ ನಮ್ಮ ರೈತರ ನೋವು ಅವರಿಗೆ ಮುಟ್ಟಿದೆ. ಕೂಡಲೇ ನಮ್ಮ ನೋವಿಗೆ ಅವರು ಬಂದು ಸ್ಪಂದಿಸಿ ಪರಿಹಾರ ನೀಡುತ್ತಾರೆಂದು ಭಾವಿಸಿದ್ದೇವೆ ಎಂದು ತಾಲೂಕಿನ ಸಿಂಗನಾಳ ಗ್ರಾಮದ ರೈತ ವಿರುಪಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರದಂದು ಸುರಿದ ಅಕಾಲಿಕ ಆಲಿಕಲ್ಲು ಮಳೆ ಹಾಗೂ ರಭಸದ ಗಾಳಿಗೆ ಅನೇಕ ಬಡವರ ಮನೆಗಳು ಸೇಡ್ಡುಗಳು ಕಿತ್ತಿಕೊಂಡು ಹೋಗಿವೆ. ಅಲ್ಲದೆ ಕಟಾವ್ ಮಾಡಿಟ್ಟ ಭತ್ತದ ರಾಶಿಗಳಿಗೆ ನೀರು ನುಗ್ಗಿ ನಷ್ಟವನ್ನು ಉಂಟುಮಾಡಿದೆ. ಹಾಗೆ ಕಟಾವಿಗೆ ಬಂದಿದ್ದ ಭತ್ತವು ಗಾಳಿಯಿಂದಾಗಿ ಸಂಪೂರ್ಣವಾಗಿ ನೆಲಕ್ಕುರುಳಿದ್ದು ಸಿಂಗನಾಳ ಗ್ರಾಮದ ರೈತ ವಿರುಪಣ್ಣ ಮಾತನಾಡಿ ನಮ್ಮ ಭಾಗದ ರೈತರಿಗೆ ಪದೇಪದೇ ತೊಂದರೆಗಳು ಕಾಡುತ್ತ ಬಂದಿದೆ. ಕೃಷಿಗೆಂದು ಒಂದು ಟ್ಯಾಕ್ಟರ್ ಕೊಂಡುಕೊಂಡು ಜೀವನವನ್ನು ನಡೆಸುತ್ತಿದ್ದೇನೆ. ಗಾಳಿಯಿಂದ ಹೆಮ್ಮರ ಒಂದು ಟ್ಯಾಕ್ಟರ್ ಮೇಲೆ ಬಿದ್ದು ಸಂಪೂರ್ಣ ಜಖಾಂ ಗೊಳಿಸಿದೆ. ಅದನ್ನೇ ನಂಬಿ ಜೀವನ ಮಾಡುತ್ತಿದ್ದ ನಮ್ಮ ಕುಟುಂಬದ ಬಾಯಿಗೆ ಮಣ್ಣು ಬಿದ್ದಂತಾಗಿದೆ. ದಯವಿಟ್ಟು ನಮ್ಮ ಭಾಗದ ಶಾಸಕರಾದ ಬಸವರಾಜ ದಡೇಸುಗೂರು ಕಷ್ಟಗಳಿಗೆ ಸ್ಪಂದಿಸಬೇಕು, ಸ್ಪಂದಿಸುವ ಗುಣ ಅವರಲ್ಲಿದೆ. ಕೂಡಲೇ ಸ್ಥಳಕ್ಕೆ ಬಂದು ರೈತರ ಕಷ್ಟಗಳನ್ನು ಆಲಿಸುತ್ತಾರೆ ಎಂದು ಭಾವಿಸಿದ್ದೇವೆ ಅಲ್ಲದೆ ಹನುಮಮ್ಮ ಎನ್ನುವ ಮಹಿಳೆಯು ಮಳೆ ಗಾಳಿಯಿಂದಾಗಿ ಮನೆಯನ್ನು ಕಳೆದುಕೊಂಡಿದ್ದಾಳೆ ಇದೇ ರೀತಿ ಅನೇಕ ಘಟನೆಗಳು ಗ್ರಾಮದಲ್ಲಿ ಜರುಗಿದ್ದು ಕೂಡಲೇ ಶಾಸಕರು ಬಂದು ಸ್ಪಂದಿಸುತ್ತಾರೆ ಎಂದು ಭಾವಿಸಿದ್ದೇವೆ. ಬಡವರನ್ನು ಕೈಬಿಡುವುದಿಲ್ಲ ಎಂದು ನಂಬಿದ್ದೇವೆ ಎಂದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!