ರೈತರ ಹೋರಾಟಕ್ಕೆ ಬೆಂಬಲಿಸಿ ಆಮ್ ಆದ್ಮಿ ಪಕ್ಷದಿಂದ ಪ್ರತಿಭಟನೆ

ಕೋಪ್ಪಳ: ಕೇಂದ್ರ ಸರ್ಕಾರದ ರೈತವಿರೋಧಿ ಮಸೂದೆಗಳನ್ನು ಖಂಡಿಸಿ ವಿವಿಧ ರೈತ ಸಂಘಟನೆಗಳು ಕರೆ ನೀಡಿರುವ ಹಿಂದು ಹಿಂದು ಕೊಪ್ಪಳದಲ್ಲಿ ನಡೆದ ಹೋರಾಟ ದಲ್ಲಿ ಕರ್ನಾಟಕದ ಆಮ್ ಆದ್ಮಿ ಪಾರ್ಟಿ ಬೆಂಬಲ ಬೆಂಬಲ ನೀಡಿ ರೈತ ಸಂಘಟನೆಗಳೊಂದಿಗೆ ಹೋರಾಟದಲ್ಲಿ ಬೀದಿಗಿಳಿದು ಹೋರಾಟ ನಡೆಸಿತು.
ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಎಎಪಿಯ “ಕೇಂದ್ರ ಸರ್ಕಾರದ ರೈತವಿರೋಧಿ ಮಸೂದೆಗಳನ್ನು ವಿರೋಧಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸುಮಾರು ೩೦೦ ದಿನಗಳಿಂದ ಅನ್ನದಾತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರೂ ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದೇ ಮೊಂಡುತನ ಪ್ರದರ್ಶಿಸುತ್ತಿದೆ. ಲೋಕಸಭೆಯಲ್ಲಿ ಬಹುಮತವಿದೆ ಎಂಬ ಮದದಲ್ಲಿ ಕಾಯಿದೆಗಳಿಗೆ ಮನಸೋಇಚ್ಛೆ ತಿದ್ದುಪಡಿ ತಂದಿರುವುದು ಖಂಡನೀಯ. ದೊಡ್ಡದೊಡ್ಡ ಉದ್ಯಮಿಗಳಿಗೆ ಲಾಭ ಮಾಡಿಕೊಟ್ಟು, ಅವರು ನೀಡುವ ಹಣದಿಂದ ಚುನಾವಣೆ ಹಾಗೂ ಆಪರೇಷನ್ ಕಮಲ ನಿಭಾಯಿಸುವ ಬಿಜೆಪಿಗೆ ಅನ್ನದಾತರ ಹಿತಾಸಕ್ತಿ ಬೇಕಾಗಿಲ್ಲ” ಎಂದು ಜಿಲ್ಲಾಧ್ಯಕ್ಷ ಹುಸೇನ್ ಸಾಬ್ ಗಂಗನಾಳ ಟೀಕಿಸಿದ್ದಾರೆ.
“ಕೃಷಿಗೆ ಸಂಬಂಧಿಸಿದ ಮಸೂದೆಗಳಿಗೆ ತಿದ್ದುಪಡಿ ತಂದು ರೈತರ ಬದುಕಿನೊಂದಿಗೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿರುವುದನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ ಜಿಲ್ಲಾ ಕೇಂದ್ರ ದಲ್ಲಿ ನಡೆದ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರುಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಮ್ ಆದ್ಮಿ ಪಾರ್ಟಿಯ ಮುಖಂಡರು ಹುಸೇನ್ ಸಾಬ್ ಗಂಗನಾಳ ಜಿಲ್ಲಾಧ್ಯಕ್ಷರು ಕೊಪ್ಪಳ, ಶರಣಪ್ಪ ಸಜ್ಜೆ ಹೊಲ ಗಂಗಾವತಿ ತಾಲೂಕ ಅಧ್ಯಕ್ಷರು, ಲೋಹಿತ್ ಪಾಟೀಲ್ ಯಲಬುರ್ಗಾ ತಾಲೂಕು ಅಧ್ಯಕ್ಷರು, ನಾಸಿರ್ ಮುಲ್ಲಾ ಕೊಪ್ಪಳ ತಾಲೂಕ ಅಧ್ಯಕ್ಷರು, ವಕೀಲರಾದ ಪ್ರಕಾಶ್. ಬಿ, ಸದಸ್ಯರಾದ ಶಾಂತಮ್ಮ,ಪಂಚಾಯತ್ ಸದಸ್ಯರಾದ ಅಜೀಂ, ಕಳಕಪ್ಪ, ಮಂಜಯ್ಯ, ಗಣೇಶ್, ಗಂಗಮ್ಮ, ಮಲ್ಲಿಕಾರ್ಜುನ್, ಬಿಸ್ತಪ, ಭೋಗೇಶ್, ಯಮನೂರಪ್ಪ,ಮಂಜುನಾಥ್ ಹೊಸಳ್ಳಿ, ಜಿಲಾನ್ ಭಾಷಾ, ಜಗದೀಶ್, ರಮೇಶ್, ಖಾಜಾ, ಅಣ್ಣಪ್ಪ, ಸಾಗರ್,ಮಂಗಮ್ಮ,ಯಮನೂರಪ್ಪ. ಅನೀಶ್, ದೊಡ್ಡಬಸಪ್ಪ, ಜಿಲಾನ್ ಪಾಷಾ ಡ್ರೈವರ್, ಇತರೆ ನೂರಾರು ಜನರು ಭಾಗವಹಿಸಿದ್ದರು.

Please follow and like us:

Leave a Reply

Your email address will not be published. Required fields are marked *

WhatsApp
error: Content is protected !!